ಮಾನವ ಧರ್ಮ ಶ್ರೇಷ್ಠವೆಂದು ಸಾರಿದ ರೇಣುಕಾಚಾರ್ಯರು

KannadaprabhaNewsNetwork |  
Published : Mar 02, 2026, 02:30 AM IST
೦೧ ವೈಎಲ್‌ಬಿ ೦೨ಯಲಬುರ್ಗಾದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರರ ಜಯಂತಿ ಆಚರಿಸಲಾಯಿತು. | Kannada Prabha

ಸಾರಾಂಶ

ಮಾನವ ಧರ್ಮವೇ ಶ್ರೇಷ್ಠವೆಂದು ರೇಣುಕಾಚಾರ್ಯರು ಸಾರಿದ್ದಾರೆ.‌ ಮಾನವ ಧರ್ಮದಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ

ಯಲಬುರ್ಗಾ: ರೇಣುಕಾಚಾರ್ಯರ ಆದರ್ಶ ಮಾನವೀಯತೆ, ಸಮಾನತೆ ಮತ್ತು ಧಾರ್ಮಿಕ ಮೌಲ್ಯ ಎತ್ತಿ ಹಿಡಿಯುತ್ತವೆ ಎಂದು ಶ್ರೀಧರ ಮುರಡಿ ಹಿರೇಮಠದ ಶ್ರೀಬಸವಲಿಂಗೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ರೇಣುಕಾಚಾರ್ಯ ವೃತ್ತದಲ್ಲಿ ತಾಲೂಕಾಡಳಿತ, ಪಪಂ ಹಾಗೂ ಜಂಗಮ ಸಮಾಜದಿಂದ ಭಾನುವಾರ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಾನವ ಧರ್ಮವೇ ಶ್ರೇಷ್ಠವೆಂದು ರೇಣುಕಾಚಾರ್ಯರು ಸಾರಿದ್ದಾರೆ.‌ ಮಾನವ ಧರ್ಮದಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ಅಂದೇ ಸಾರಿದ್ದಾರೆ. ಅವರ ತತ್ವಾದರ್ಶ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲ ಧರ್ಮದವರು ಸಾಮರಸ್ಯದಿಂದ ಬದುಕಬೇಕು ಎಂದರು.

ವೀರಮಹೇಶ್ವರ ಜಂಗಮ ಸಮಾಜದ ತಾಲೂಕಾಧ್ಯಕ್ಷ ಹಂಪಯ್ಯಸ್ವಾಮಿ ಹಿರೇಮಠ ಮಾತನಾಡಿ, ಜಂಗಮ ಸಮಾಜದಲ್ಲಿನ ಮಕ್ಕಳು ಪೂಜೆ ಪುನಸ್ಕಾರ ಕಾರ್ಯ ಮಾಡುವುದರ ಮೂಲಕ ಶಿಕ್ಷಣ ಕಡೆಗಣಿಸಿದ್ದಾರೆ.ಪೂಜೆ ಪುನಸ್ಕಾರಕ್ಕೆ ನೀಡಿದ ಮಹತ್ವ ಶಿಕ್ಷಣಕ್ಕೂ ಸಹ ನೀಡಬೇಕಿದೆ. ಇಂದಿನ ದಿನಮಾನದಲ್ಲಿ ಶಿಕ್ಷಣಕ್ಕೆ ತನ್ನದೆಯಾದ ಶಕ್ತಿ ಇದೆ ಎಂದರು. ಸಮಾಜದ ಗೌರವಾಧ್ಯಕ್ಷ ಡಾ. ಅಂದಾನಯ್ಯ ಶಾಡ್ಲಗೇರಿಮಠ ಮಾತನಾಡಿದರು.

ಈ ಸಂದರ್ಭದಲ್ಲಿ ಡಾ.ಅನ್ನದಾನೇಶ ಗದ್ದಿ, ಬಸಯ್ಯ ಮೈಸೂರುಮಠ, ಕಳಕಯ್ಯ ಹಿರೇಮಠ, ಶರಣಯ್ಯ ಮುಳ್ಳೂರುಮಠ, ವಿರೂಪಾಕ್ಷಯ್ಮ ಗಂಧದ, ಬಸವಲಿಂಗಯ್ಯ ಜಡಿಮಠ, ಕಲ್ಯಾಣಯ್ಯ ಕೋಚಲಾಪುರಮಠ, ವಿರೂಪಾಕ್ಷಯ್ಯ ಪರಯ್ಯನಮಠ, ಬಸಯ್ಯ ಶಾಸ್ತ್ರಿಮಠ, ಪ್ರಮೋದಕುಮಾರ ಹಿರೇಮಠ, ಶಿವಾನಂದಯ್ಯ ಹಿರೇಮಠ, ಶಿವಮೂರ್ತೆಯ್ಯ ಜೂಲಕಟ್ಟಿ, ಗವಿಸಿದ್ದಯ್ಯ ಕಲ್ಲೂರ, ನಾಗಯ್ಯ ಕಲ್ಲೂರ, ಶಿವಾನಂದಯ್ಯ ಗೆದಗೇರಿ, ಮಲ್ಲಯ್ಯ ಕಲ್ಲೂರು, ಕಳಕಯ್ಯ ಪುರಾಣಿಕಮಠ ಬಸಯ್ಯ ಹಿರೇಮಠ, ಈಶಯ್ಯ ಕುಡಗುಂಟಿ ಸೇರಿದಂತೆ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಡೋಟ ಬೇಡವೆಂದು ಸಿಎಂ ಬಳಿಗೆ ಸರ್ವ ಪಕ್ಷಗಳ ನಿಯೋಗ
ಕೊಟ್ಟೂರು ಕೆರೆ ತುಂಬಿಸುವ ಯೋಜನೆಗೆ ಸಿಗುತ್ತಾ ಹಸಿರು ನಿಶಾನೆ?