ಕನ್ನಡಪ್ರಭ ವಾರ್ತೆ ಹೊನ್ನಾಳಿ
ಬುಧವಾರ ಬೆಂಬಲಿಗರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಶಿಪ್ ವತಿಯಿಂದ ಗದಗ-ಹೊನ್ನಾಳಿ ಹೆದ್ದಾರಿ ಕಾಮಗಾರಿ ಭರದಿಂದ ಸಾಗುತ್ತಿದೆ. ವಿಪಕ್ಷದವರಾಗಿ ಆರೋಪ ಮಾಡಬೇಕಲ್ಲ ಎನ್ನುವ ಕಾರಣಕ್ಕೆ ರೇಣುಕಾಚಾರ್ಯ ಇಲ್ಲಸಲ್ಲದ ಮಾತಾಡುತ್ತಿದ್ದಾರೆ. ಕೇವಲ ಪ್ರಚಾರಕ್ಕಾಗಿ ಈ ರೀತಿ ಮಾಡುವುದು ಸರಿಯಲ್ಲ ಎಂದರು.
ಈ ರೀತಿ ಅನಗತ್ಯ ಆರೋಪ ಮಾಡುವುದನ್ನು ಕೈ ಬಿಡದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಿಂದಲೂ ಅವರ ಅಧಿಕಾರದ ಅವಧಿಯಲ್ಲಿ ನಡೆಸಿದ ಅನೇಕ ಕಳಪೆ ಕಾಮಗಾರಿಗಳ ಬಗ್ಗೆ ದೂರು ಸಲ್ಲಿಸಬೇಕಾಗುತ್ತದೆ. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ತಕ್ಕಪಾಠ ಕಲಿಸುತ್ತೇವೆ ಎಂದರು.ಬೇರೆಯವರ ಬಗ್ಗೆ ಮಾತನಾಡುವ ಮೊದಲು ತಮ್ಮ ಅಧಿಕಾರದ ಕಾಲದಲ್ಲಿ ನಡೆಸಿದ ಕಾಮಗಾರಿಗಳ ಕಳಪೆ ಗುಣಮಟ್ಟದ ಬಗ್ಗೆ ಹಾಗೂ ಭ್ರಷ್ಟಾಚಾರಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ. ತಾಲೂಕಿನ ಅರಬಗಟ್ಟೆ ಗೋಮಾಳದಲ್ಲಿ ಸೋಲಾರ್ ಅಳವಡಿಕೆ ವಿಚಾರದಲ್ಲೂ ಅಧಿಕಾರಿಗಳ ಮೇಲೆ ಸುಖಾಸುಮ್ಮನೆ ಗಲಾಟೆ ಮಾಡಿ, ರೈತಪರ ಹೋರಾಟ ಮಾಡಿದಂತೆ ಬಿಂಬಿಸಿದ್ದಿರಿ. ಅನಂತರ ಆ ಬಗ್ಗೆ ಚಕಾರವೆತ್ತದೇ ಮೌನವಾಗಿರುವುದಕ್ಕೆ ಕಾರಣ ಅವರೇ ಹೇಳಬೇಕು ಎಂದು ಟೀಕಿಸಿದರು.
ಗೊಲ್ಲರಹಳ್ಳಿಯಿಂದ ಎಚ್.ಕಡದಕಟ್ಟೆವರೆಗೆ ಅಳವಡಿಸಿರುವ ಅಲಂಕಾರಿಕ ಬೀದಿದೀಪಗಳು ಇಂದಿಗೂ ಸರಿಯಾಗಿ ಬೆಳಗದೇ ಸಂಪೂರ್ಣ ಕಳಪೆ ಗುಣಮಟ್ಟದಿಂದಾಗಿ, ಸಾರ್ವಜನಿಕ ಸೇವೆಗೆ ಲಭ್ಯವಾಗಿಲ್ಲ. ರಸ್ತೆ ಡಿವೈಡರ್ ಕೆಲಸ ಕೂಡ ಕಳಪೆಯಾಗಿದೆ. ಗುತ್ತಿಗೆದಾರರನ್ನು ಕೇಳಿದರೆ ಈ ವಿಚಾರದಲ್ಲಿ ತಾನು ಅಸಹಾಯಕ ಎಂದು ಉತ್ತರ ನೀಡುತ್ತಾರೆ ಎಂದರು.ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ನಡೆಯುವ ಅಭಿವೃದ್ಧಿ ಕೆಲಸಗಳಿಗೆ ಅನಗತ್ಯವಾಗಿ ಅಡ್ಡಗಾಲು ಹಾಕುವುದೇ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರ ಕೆಲಸವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಂ.ಸಿ. ಮೋಹನ್ ನೆಲಹೊನ್ನೆ, ಧರ್ಮಪ್ಪ, ಎಚ್.ಎ. ನರಸಿಂಹಪ್ಪ, ಎಚ್. ಬಿ. ಅಣ್ಣಪ್ಪ, ಸರಳಿನ ಮನೆ ರಾಜು, ಹರಳಹಳ್ಳಿ ಬೆನಕಪ್ಪ, ಮಾದಪ್ಪ ಇದ್ದರು.- - -
-18ಎಚ್.ಎಲ್.ಐ1.: ಎಚ್.ಬಿ.ಮಂಜಪ್ಪ