ರೇಣುಕಾಚಾರ್ಯರ ಆದರ್ಶ ಎಲ್ಲರಿಗೂ ದಾರಿದೀಪ: ತಾಲೂಕು ದಂಡಾಧಿಕಾರಿ ಶರಣಮ್ಮ

KannadaprabhaNewsNetwork |  
Published : Mar 13, 2025, 12:45 AM IST
ತಾಲೂಕು ದಂಡಾಧಿಕಾರಿ ಕೆ. ಶರಣಮ್ಮ ಮಾತನಾಡಿದರು. | Kannada Prabha

ಸಾರಾಂಶ

ಜಾತಿ ಸಂಕೋಲೆಯಿಂದ ಹೊರಬಂದು ನಾವೆಲ್ಲರೂ ಒಂದಾಗಿ ಒಗ್ಗಟ್ಟಾಗಿ ಜೀವಿಸಬೇಕಿದೆ. ಆಗ ಮಾತ್ರ ಸಮಾಜದಲ್ಲಿ ಎಲ್ಲರೂ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದು ತಾಲೂಕು ದಂಡಾಧಿಕಾರಿ ಕೆ. ಶರಣಮ್ಮ ತಿಳಿಸಿದರು.

ಹಾವೇರಿ: ಜಗದ್ಗುರು ರೇಣುಕಾಚಾರ್ಯರ ತತ್ವ ದರ್ಶನಗಳು ಎಲ್ಲರಿಗೂ ದಾರಿದೀಪವಾಗಿದೆ. ಮಾನವನ ಜನ್ಮ ಎಲ್ಲ ಜೀವರಾಶಿಗಳಲ್ಲಿ ಅತ್ಯಂತ ಶ್ರೇಷ್ಠವಾದದ್ದು. 12ನೇ ಶತಮಾನದಲ್ಲಿ ಸಮಾಜ ಸುಧಾರಕರಾದ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಮುಂತಾದ ಶರಣರು ಸಮಾಜಕ್ಕೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ ಎಂದು ತಾಲೂಕು ದಂಡಾಧಿಕಾರಿ ಕೆ. ಶರಣಮ್ಮ ತಿಳಿಸಿದರು.ನಗರದ ಜಗದ್ಗುರು ರೇಣುಕಾ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಗದ್ಗುರು ರೇಣುಕಾಚಾರ್ಯರ ಸೇವಾ ಸಮಿತಿ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಮಾನವನ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಧ್ಯೇಯವಾಕ್ಯದೊಂದಿಗೆ ರೇಣುಕಾಚಾರ್ಯರ ಜಯಂತಿಯನ್ನು ಆಚರಿಸುತ್ತಿದ್ದವೆ. ಜನರ ವೃತ್ತಿಗೆ ಅನುಗುಣವಾಗಿ ಅಂದರೆ ಕುರಿ ಕಾಯುತ್ತಿದ್ದರೆ ಕುರುಬ, ಆಭರಣ ಮಾಡುತ್ತಿದ್ದರೆ ಅಕ್ಕಸಾಲಿಗ ಹೀಗೆ ವಿವಿಧ ನಾಮಧೇಯಗಳಿಂದ ಕರೆಯುತ್ತಿದ್ದರು. ಆದರೆ ಇಂದು ಆಧುನಿಕ ಯುಗದಲ್ಲಿ ಜಾತಿಯೆಂಬುವುದು ಒಂದು ಪಿಡುಗಾಗಿ ಬೃಹತ್ ಹೆಮ್ಮರವಾಗಿ ಬೆಳೆದಿದೆ. ಇಂತಹ ಜಾತಿ ಸಂಕೋಲೆಯಿಂದ ಹೊರಬಂದು ನಾವೆಲ್ಲರೂ ಒಂದಾಗಿ ಒಗ್ಗಟ್ಟಾಗಿ ಜೀವಿಸಬೇಕಿದೆ. ಆಗ ಮಾತ್ರ ಸಮಾಜದಲ್ಲಿ ಎಲ್ಲರೂ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದರು.ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಹರಸೂರು ಬಣ್ಣದ ಮಠದ ಅಭಿನವ ರುದ್ರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಮಾತನಾಡಿದರು.ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸಾತೇನಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ, ನಗರಸಭೆ ಸದಸ್ಯ ಸಂಜೀವಕುಮಾರ್ ನೀರಲಗಿ, ರೇಣುಕಾಚಾರ್ಯ ಸೇವಾ ಸಮಿತಿಯ ಅಧ್ಯಕ್ಷ ಕುಮಾರ್ ಸಾತೇನಹಳ್ಳಿ ಇತರರು ಉಪಸ್ಥಿತರಿದ್ದರು.ಸಾಮರಸ್ಯದ ಸಂದೇಶ ಸಾರಿದ ರೇಣುಕಾಚಾರ್ಯರು

ಹಿರೇಕೆರೂರು: ಸಾಮರಸ್ಯ, ಸಹಬಾಳ್ವೆಯ ಬದುಕನ್ನು ಸಾರಿದ ರೇಣುಕಾಚಾರ್ಯರು ಯುಗ ಯುಗಗಳಲ್ಲಿ ಅವತರಿಸಿದ ಮಾನವತಾವಾದಿಯಾಗಿದ್ದಾರೆ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ, ನ್ಯಾಯವಾದಿ ಡಾ. ಪ್ರಭುಸ್ವಾಮಿ ಹಾಲೇವಾಡಿಮಠ ತಿಳಿಸಿದರು.

ಪಟ್ಟಣದ ಸರ್ವಜ್ಞ ಕಲಾ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಭೂಲೋಕದಲ್ಲಿನ ಅನಾಚಾರ, ಕಂದಾಚಾರಗಳನ್ನು ಕೊನೆಗಾಣಿಸಲು ಪರಶಿವನ ಆದೇಶದ ಮೇರೆಗೆ ವೀರಶೈವ ಧರ್ಮ ಸ್ಥಾಪಿಸಿ ಶ್ರೇಷ್ಠ ಮುನಿ ಆಗಸ್ತ್ಯ ಮುನಿಗೆ ಸಿದ್ಧಾಂತ ಶಿಖಾಮಣಿ ಬೋಧಿಸಿದ ಏಕೈಕ ಗುರುಗಳು ರೇಣುಕಾಚಾರ್ಯರಾಗಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸೀಲ್ದಾರ್ ಎಚ್. ಪ್ರಭಾಕರಗೌಡ, ರೇಣುಕಾಚಾರ್ಯರು ಮಾನವ ಕಲ್ಯಾಣಕ್ಕೆ ಶ್ರಮಿಸಿದ್ದರು. ಜನರಿಗೆ ಸನ್ಮಾರ್ಗ ತೋರಿದ ಅವರ ಆದರ್ಶಗಳನ್ನು ಪಾಲನೆ ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದರು.ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಧಾ ಚಿಂದಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಂದ್ರ ಬಡಳ್ಳಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬುರಡೀಕಟ್ಟಿ, ಪಪಂ ಸದಸ್ಯೆ ಕವಿತಾ ಹರ‍್ನಳ್ಳಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಷಣ್ಮುಖಯ್ಯ ಮಳಿಮಠ, ಬೇಡಜಂಗಮ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಕರಬಸಯ್ಯ ಬಸರೀಹಳ್ಳಿಮಠ, ವೀರಶೈವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ನ್ಯಾಯವಾದಿ ಸಂಜೀವಯ್ಯ ಕಬ್ಬಿಣಕಂಥಿಮಠ, ಬಿಇಒ ಎನ್. ಶ್ರೀಧರ, ಮುಖ್ಯಾಧಿಕಾರಿ ಕೋಡಿ ಭೀಮರಾಯ, ಚನ್ನೇಶ ಮಠದ, ಶಿವಾಂದಯ್ಯ ಕಟಗೀಹಳ್ಳಿಮಠ, ರಾಜಶೇಖರಯ್ಯ ಬಸರೀಹಳ್ಳಿಮಠ, ಧನಂಜಯ ನಿಟ್ಟೂರ, ಗಂಗಾಧರ ಹಿರೇಮಠ, ನಂದಿನಿ ಪ್ಯಾಟಿಮಠ, ಶೋಭಾ ಹಿರೇಮಠ, ಎಸ್.ಆರ್. ಪೀಳಗಿಮಠ, ಬಾಬಣ್ಣ ಹಂಚಿನ, ಪ್ರಶಾಂತ ಹಿರೇಮಠ, ಡಾ. ಬಸವರಾಜ ಪೂಜಾರ, ಮೃತ್ಯುಂಜಯ ಹಿರೇಮಠ, ಮಲ್ಲಯ್ಯ ಹಿರೇಮಠ, ವೀರಯ್ಯ ಹಿರೇಮಠ ಇತರರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ