- ತುರ್ತು ಅಭಿವೃದ್ಧಿ ಕಾಮಗಾರಿಗಳ ಪರಿಶೀಲಿಸಿ ನಗರಸಭೆ ಅಧ್ಯಕ್ಷೆ ಕವಿತಾ ಹೇಳಿಕೆ- - - ಕನ್ನಡಪ್ರಭ ವಾರ್ತೆ ಹರಿಹರ
ಗ್ರಾಮದೇವತೆ ಹಬ್ಬದ ನಿಮಿತ್ತ ಕೈಗೊಂಡಿರುವ ತುರ್ತು ಕಾಮಗಾರಿಗಳನ್ನು ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಕಳೆದ ಹಲವು ತಿಂಗಳಿಂದ ನಗರದ ವಿವಿಧ ವಾರ್ಡ್‌ಗಳಲ್ಲಿರುವ ಶುದ್ಧ ನೀರು ಘಟಕಗಳು ಚಾಲನೆ ಇಲ್ಲದೇ ಬಂದ್ ಆಗಿದ್ದವು. ಗ್ರಾಮ ದೇವತೆ ಹಬ್ಬಕ್ಕೆ ಸಾರ್ವಜನಿಕರಿಗೆ ನೀರಿನ ತೊಂದರೆ ಆಗಬಾರದು ಎಂಬ ಸದುದ್ದೇಶದಿಂದ ₹25 ಲಕ್ಷ ವೆಚ್ಚದಲ್ಲಿ 13 ಘಟಕಗಳ ತುರ್ತು ದುರಸ್ತಿಗಾಗಿ ಟೆಂಡರ್ ಕರೆಯಲಾಗಿದೆ. ಈಗಾಗಲೇ ಸುಮಾರು 9 ಶುದ್ಧ ನೀರು ಘಟಕಗಳನ್ನು ದುರಸ್ತಿ ಮಾಡಿಸಿ, ಜನಸೇವೆಗೆ ಸಮರ್ಪಿಸಲಾಗಿದೆ ಎಂದರು.
ನಗರದ ವಿವಿಧ ವಾರ್ಡುಗಳಲ್ಲಿರುವ ಕಿರುನೀರು ಸರಬರಾಜು ಕೊಳವೆಬಾವಿ ಮೋಟಾರ್ ಹಾಗೂ ವಿದ್ಯುತ್ ಪರಿಕರಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಸುಮಾರು ಅಂದಾಜು ₹3 ಲಕ್ಷ ವೆಚ್ಚದಲ್ಲಿ ಪ್ರತಿ ವಾರ್ಡ್‌ಗೆ 3ರಿಂದ 4 ನೀರಿನ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಒಟ್ಟಾರೆ ಗ್ರಾಮದೇವತೆ ಹಬ್ಬ ಸಂದರ್ಭದಲ್ಲಿ ಸಾರ್ವಜನಿಕರಿಗೆ ನೀರಿನ ತೊಂದರೆ ಆಗದಂತೆ ನಗರಸಭೆ ಅಗತ್ಯ ಎಚ್ಚರಿಕೆ ವಹಿಸುತ್ತಿದೆ ಎಂದು ಹೇಳಿದರು.ರಾಣೆಬೆನ್ನೂರು ತಾಲೂಕು ತುಂಗಭದ್ರಾ ನದಿ ದಡದಲ್ಲಿರುವ ಹರಿಹರ ನೀರು ಸರಬರಾಜು ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿ, ಹೆಸ್ಕಾಂ ಎಂಜಿನಿಯರ್ ಲಕ್ಷ್ಮಣ್ ಅವರೊಂದಿಗೆ ಮಾತನಾಡಿದರು. ಹರಿಹರ ಜಾತ್ರೆ ಕಾರಣ ಐದು ದಿನಗಳ ಕಾಲ ಕೌಲತ್ತು ಗ್ರಾಮದ ಸುತ್ತಮುತ್ತ ವಿದ್ಯುತ್ ಸರಬರಾಜು ಕಡಿತ ಮಾಡಬಾರದು ಎಂದು ಮನವರಿಕೆ ಮಾಡಲಾಯಿತು ಎಂದು ಮಾಹಿತಿ ನೀಡಿದರು.
- - -
- ಕವಿತಾ ಮಾರುತಿ ಬೇಡರ್, ನಗರಸಭಾಧ್ಯಕ್ಷೆ - - -
ಹರಿಹರದಲ್ಲಿ ಗ್ರಾಮ ದೇವತೆ ಹಬ್ಬದ ನಿಮಿತ್ತ ನಗರಸಭೆ ಕೈಗೊಂಡಿರುವ ತುರ್ತು ಕಾಮಗಾರಿಗಳನ್ನು ನಗರಸಭಾ ಅಧ್ಯಕ್ಷ ಕವಿತಾ ಮಾರುತಿ ಬೇಡರ್ ಪರಿಶೀಲನೆ ನಡೆಸಿದರು.