ಕನ್ನಡಪ್ರಭ ವಾರ್ತೆ ಬೀದರ್
ನಗರದ ಕೆಪಿ ವಿದ್ಯಾ ಸಂಸ್ಥೆಯಲ್ಲಿ ಶುಕ್ರವಾರ ಧ್ಜಜಾರೋಹಣ ನೆರವೆರಿಸಿ ಮಾತನಾಡಿದ ಅವರು, 75ನೇ ಗಣರಾಜ್ಯೋತ್ಸವದಲ್ಲಿ ಎಲ್ಲಾ ಕವಾಯಿತುಗಳ ನೇತೃತ್ವವನ್ನು ಮಹಿಳೆಯರು ವಹಿಸಿದ್ದಾರೆ. ಪ್ರಧಾನಿ ಮೋದಿ ಅವರು ನಾರಿ ಶಕ್ತಿಗೆ ಹೆಚ್ಚು ಆದ್ಯತೆ ನೀಡಿತ್ತಿದ್ದಾರೆ. ಈ ಸಂಧರ್ಭದಲ್ಲಿ ಅವರಿಗೆ ಅಭಿನಂದನೆ ಸಲ್ಲಿಸಬೇಕು ಎಂದರು.
ಧ್ವಜಾರೋಹಣದಲ್ಲಿ ಸಂಸ್ಥೆ ಉಪಾಧ್ಯಕ್ಷ ಮಲ್ಲಯ್ಯ ಸ್ವಾಮಿ, ಸದಸ್ಯರಾದ ಚಂದ್ರಶೇಖರ ಪಾಟೀಲ, ಮುಖ್ಯಗುರು ವಿಜಯಕುಮಾರ ಪಾಟೀಲ ಯರನಳ್ಳಿ ಸೇರಿ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ನಡೆಸಿದ ಲೇಜಿಮ್ ಎಲ್ಲರ ಗಮನ ಸೆಳೆಯಿತು.ಪಶು ವಿವಿಯಲ್ಲಿ ಗಣರಾಜ್ಯೋತ್ಸವ:
ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ.ವೀರಣ್ಣ ಧ್ವಜಾರೋಹಣ ನೆರವೇರಿಸಿ, ವಿಶ್ವವಿದ್ಯಾಲಯದ ಮುಖ್ಯ ಗುರಿ ಪಶುವೈದ್ಯಕೀಯ, ಹೈನುಗಾರಿಕೆ, ಮೀನುಗಾರಿಕೆ ಮತ್ತು ಸಂಬಂಧಿಸಿದ ಕ್ಷೇತ್ರಗಳಲ್ಲಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ನಾಯಕತ್ವ ಒದಗಿಸಿ, ಸಾಮಾಜಿಕ ಮತ್ತು ತಾಂತ್ರಕತೆಗನುಗುಣವಾಗಿ ಅಭಿವೃದ್ಧಿಯತ್ತ ಕೊಂಡೊಯ್ಯುವುದಾಗಿದೆ ಎಂದರು.
ನಾಗಮಾರಪಳ್ಳಿ ಆಸ್ಪತ್ರೆಯಲ್ಲಿ ಧ್ವಜಾರೋಹಣ:
ಬೀದರ್ ತಾಪಂನಲ್ಲಿ ಎಸಿ ಧ್ವಜಾರೋಹಣ:
ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಗಣರಾಜ್ಯೋತ್ಸವ:
ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಭಾಷಣ, ನೃತ್ಯ, ಗಾಯನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಗ್ಲೋಬಲ್ ಸೈನಿಕ ಅಕಾಡೆಮಿ ವಿದ್ಯಾರ್ಥಿಗಳಿಂದ ಅತ್ಯದ್ಬುತ ಪಥಸಂಚಲನ ನಡೆಯಿತು. ಇದರಲ್ಲಿ ಶಾಲಾ ಎನ್‌ಸಿಸಿ ಕ್ಯಾಡೆಟ್ಸ್ ಮತ್ತು ಇತರೆ ವಿದ್ಯಾರ್ಥಿಗಳು ಸೇರಿ 250 ಮಕ್ಕಳು ಪಾಲ್ಗೊಂಡಿದ್ದರು.
ಜಗತ್ತಿನ ಅತೀ ದೊಡ್ಡ ಲಿಖಿತ ಸಂವಿಧಾನ ನಮ್ಮದು:
ಭಾರತ ಸಂವಿಧಾನವು ಅತೀ ದೊಡ್ಡ ಲಿಖಿತ ಸಂವಿಧಾನವಾಗಿದ್ದು, ನಮ್ಮ ಸಂವಿಧಾನವು ಹಸ್ತಾಕ್ಷರದಲ್ಲಿ ರಚಿಸಿದ ವಿಶ್ವದ ಮೊದಲ ಸಂವಿಧಾನವಾಗಿದೆ. ಸಂವಿಧಾನಕ್ಕೆ ಒಂದು ವಿಶಾಲವಾದ ರೂಪು ಕೊಟ್ಟು, ರಚಿಸಿದವರಲ್ಲಿ ಅಂಬೇಡ್ಕರ್ ಪಾತ್ರ ಹಿರಿದಾಗಿದೆ. ಅದಕ್ಕೆ ಅವರನ್ನು ಸಂವಿಧಾನ ಪಿತಾಮಹ ಎಂದು ಕರೆಯುತ್ತಾರೆ ಎಂದು ಬಸವಕಲ್ಯಾಣ ಎಜ್ಯುಕೇಶನಲ್ ಟ್ರಸ್ಟ್ ಇಂಜಿನೀಯರಿಂಗ್ ಕಾಲೇಜಿನ ಅಧ್ಯಕ್ಷ ದೀಲಿಪಕುಮಾರ ಎಸ್. ತಾಳಂಪಳ್ಳಿ ನುಡಿದರು.ಸಂಸ್ಥೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ನಮ್ಮ ಸಂವಿಧಾನ ರಕ್ಷಣೆ ನಮ್ಮೆಲರ ಹೊಣೆ ಎಂದು ತಿಳಿಸಿ ಸರ್ವರಿಗೂ ಶುಭಾಶಯ ಕೋರಿದರು.
ಪ್ರಾಚಾರ್ಯ ಡಾ. ಅಶೋಕ ಕುಮಾರ ವಣಗೆರಿ, ಆರ್.ಎಸ್. ಪಾಟೀಲ ಹಾಗೂ ಮನೋಜಕುಮಾರ ಕೆರಳ್ಳಿ, ಇಂಜಿನೀಯರಿಂಗ್ ಕಾಲೇಜಿನ ಉಪಪ್ರಾಚಾರ್ಯ ಡಾ.ಅರುಣಕುಮಾರ ಎಲಾಲ, ಬಸವಕಲ್ಯಾಣ ಪಾಲಿಟೇಕ್ನಿಕ್ ಕಾಲೇಜಿನ ಪ್ರಾಚಾರ್ಯ ನೀಲಕಂಠ ಕೋಡ್ಲೆ ಸೇರಿ ಸಂಸ್ಥೆ ಇನ್ನಿತರ ಸಿಬ್ಬಂದಿ ಇದ್ದರು.ವಾಣಿಜ್ಯ, ಕೈಗಾರಿಕಾ ಸಂಸ್ಥೆಯಲ್ಲಿ ಧ್ವಜಾರೋಹಣ:
ನಗರದ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ಶುಕ್ರವಾರ ಸಂಸ್ಥೆ ಕಾರ್ಯದರ್ಶಿ ಡಾ.ವೀರೇಂದ್ರ ಶಾಸ್ತ್ರಿ ನೆರವೇರಿಸಿದರು. ಜಂಟಿ ಕಾರ್ಯದರ್ಶಿ ರಾಜಶೆಖರ ಮಿಟಕಾರಿ, ಆಡಳಿತ ಮಂಡಳಿ ಸದಸ್ಯ ವೀರಕುಮಾರ ಮಜಗೆ, ಆಡಳಿತಾಧಿಕಾರಿ ಪ್ರೊ. ಬಸವರಾಜ ಸ್ವಾಮಿ ಹೆಡಗಾಪೂರಕರ ಹಾಜರಿದ್ದರು.ರಾಜೀವ ಗಾಂಧಿ ಯುವಕ ಸಂಘ:
ರಾಜೀವ ಗಾಂಧಿ ಯುವಕ ಸಂಘದಿಂದ ನಗರದ ಲೇಬರ್ ಕಾಲೋನಿಯ ರಾಜೀವ ಗಾಂಧಿ ವೃತ್ತದ ಹತ್ತಿರ ಸಂಘದ ಸಂಸ್ಥಾಪಕರಾದ ಶ್ರೀಧರ ಬಾಂಗಲೆ ಧ್ವಜಾರೋಹಣ ಮಾಡುವುದರ ಮೂಲಕ 75ನೇ ಗಣರಾಜ್ಯೋತ್ಸವ ಆಚರಿಸಿದರು. ಈ ವೇಳೆ ಬಡಾವಣೆ ಹಿರಿಯರಾದ ಕಂಟೆಪ್ಪಾ, ಮಾರುತಿ, ಮೋಹನ, ಸಂತೋಷ, ರಾಜಕುಮಾರ, ರಮೇಶ, ಶಂಕರ, ಶ್ರೀಮಂತ, ಶ್ರೀಶಾಂತ, ಸಾಮುವೇಲ್, ಫಿಲಿಪ್, ಬಸವರಾಜ, ಸುರೇಶಕುಮಾರ ಹಾಗೂ ಸಂಘದ ಪದಾಧಿಕಾರಿಗಳಾದ ಡಿಸೋಜ್, ಶಲಹಾನ್, ಸಂಜು, ಭೀಮಣ್ಣಾ, ಮೇಶಕ್, ಶಿವರಾಜ, ಅನೀಲ ಹಾಗೂ ಇನ್ನಿತರರು ಇದ್ದರು.