ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಇಲ್ಲಿನ ಭಾರತೀ ಎಜುಕೇಷನ್ ಟ್ರಸ್ಟ್‌ನಿಂದ ವಿವಿಧ ಅಂಗ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಜಗತ್ತಿಗೆ ಸಂಸ್ಕೃತಿ, ಸಂಸ್ಕಾರ ನೀಡಿದ ದೇಶ ನಮ್ಮದು. ಭಾರತವು ಅನೇಕ ಭಾಷೆಗಳು, ಸಂಸ್ಕೃತಿಗಳು ಮತ್ತು ಸಂಪ್ರದಾಯ ಹೊಂದಿರುವ ದೇಶ ಎಂಬುದು ಹೆಮ್ಮೆಯ ಸಂಗತಿ ಎಂದರು.
ಭಾರತ ವೈವಿಧ್ಯತೆ, ಶಿಸ್ತು ಮತ್ತು ಸಾಂಸ್ಕೃತಿಕ ಶ್ರೇಷ್ಠತೆ ಪ್ರತಿಬಿಂಬಿಸುತ್ತದೆ. ಪ್ರಜಾಪ್ರಭುತ್ವದ ಚೈತನ್ಯವನ್ನು ಆಚರಿಸಿ ದೇಶದ ಸಮಗ್ರತೆ ಮತ್ತು ಪರಂಪರೆ ಎತ್ತಿಹಿಡಿಯುವ ಕರ್ತವ್ಯವನ್ನು ನಾಗರಿಕರಿಗೆ ನೆನಪಿಸುತ್ತವೆ ಎಂದರು.ಮಾಜಿ ಸೈನಿಕ ಸಿ.ಎಂ.ಶ್ರೀಧರ್ ಮಾತನಾಡಿ, ಭಾರತ ಜಾತ್ಯತೀತ ರಾಷ್ಟ್ರ. ಎಲ್ಲಾ ಪ್ರಜೆಗಳಿಗೂ ಸಮಾನತೆ ಸ್ವಾತಂತ್ರದ ಹಕ್ಕು ಇದೆ. ದೇಶದ ಆರ್ಥಿಕ ವ್ಯವಸ್ಥೆ ಕುಗ್ಗಲು ಬ್ರಿಟಿಷ ಆಡಳಿತವೇ ಕಾರಣ. ಜಾತಿ ವ್ಯವಸ್ಥೆ, ಧರ್ಮರಾಜಕರಣ, ಅಧಿಕಾರದ ದಾಹ ಹೀಗೆ ಹಲವಾರು ಕಾರಣಗಳಿಂದ ಭಾರತಕ್ಕೆ ಹಿನ್ನಡೆಯಾಗಿದ್ದರೂ ಪ್ರಸ್ತುತ ದಿನಗಳಲ್ಲಿ ಆರ್ಥಿಕ ವ್ಯವಸ್ಥೆಯಲ್ಲಿ ಚೇತರಿಕೆ ಕಂಡು ಅಭಿವೃದ್ಧಿಯತ್ತ ಮುಖ ಮಾಡಿದೆ ಎಂದರು.
ಈವೇಳೆ ಕ್ರೀಡೆ, ಶೈಕ್ಷಣಿಕ, ಕಲೆ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಸಂಸ್ಥೆ ನೌಕರರು ವಿವಿಧ ವಿಶ್ವವಿದ್ಯಾಲಯದ ಮೂಲಕ ಪಿಎಚ್.ಡಿ ಪಡೆದ ಭಾರತೀ ಕಾಲೇಜಿನ ಡಾ.ಅಂಜೇಶ್, ಪದ್ಮ ಜಿ.ಮಾದೇಗೌಡ ನಸಿಂಗ್ ಕಾಲೇಜು ಡಾ.ಎಚ್.ಸೌಮ್ಯ ಜಿ, ಜಿ.ಮಾದೇಗೌಡ ತಾಂತ್ರಿಕ ಮಹಾವಿದ್ಯಾಲಯದ ಡಾ.ಬಿ.ಆರ್.ವಿದ್ಯಾ, ಭಾರತೀ ಫಾರ್ಮಸಿ ಕಾಲೇಜಿನ ಡಾ.ಟಿ.ರಶ್ಮಿ ಅವರನ್ನು ಸಂಸ್ಥೆಯಿಂದ ಅಭಿನಂದಿಸಲಾಯಿತು.ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಯೋಜಕ ಜಿ.ಮಾದೇಗೌಡ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಚಂದನ್, ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರಾದ ಡಾ.ಎಂ.ಎಸ್.ಮಹದೇವಸ್ವಾಮಿ, ಡಾ.ಎಸ್.ಎಲ್.ಸುರೇಶ್, ಡಾ. ತಮಿಜ್‌ಮಣಿ, ಡಾ.ಬಾಲಸುಬ್ರಮಣ್ಯಂ, ಡಾ.ಶಾಂತರಾಜು, ಮಂಜು ಜೇಕಪ್, ಜಗದೀಶ್, ಡಾ. ಮಹೇಶ್‌ಲೋನಿ, ಜಿ. ಕೃಷ್ಣ, ಸಿ.ವಿ. ಮಲ್ಲಿಕಾರ್ಜುನ, ಪಿ. ರಾಜೇಂದ್ರ ರಾಜೇ ಅರಸ್, ಸಿ.ರಮ್ಯಾ, ಎನ್‌ಸಿಸಿ ಲೆಫ್ಟಿನೆಟ್ ಸಿ.ಮಲ್ಲೇಶ್ ಸೇರಿದಂತೆ ಹಲವರಿದ್ದರು.