ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಈ ಪೆರೇಡ್ ನಲ್ಲಿ ಶಿಸ್ತು ಸಂಯಮ ಮತ್ತು ರಾಷ್ಟ್ರ ಭಕ್ತಿಯೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿದ ತಾನ್ಯ, ಕೊಡಗು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಎರಡು ತಿಂಗಳ ಹಿಂದೆ ಪಾಲಕ್ಕಾಡ್ ನಲ್ಲಿ ಜರುಗಿದ ದಕ್ಷಿಣ ವಲಯ ಆರ್ ಡಿ ಕ್ಯಾಂಪ್ ನಲ್ಲಿಯೂ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಸಾಧನೆ ಮಾಡಿದ್ದರು.
ಅಖಂಡ ಭಾರತ ಸನಾತನ ಸಂತ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷರು, ಅರಸಿನಕುಪ್ಪೆ ಶ್ರೀಮಂಜುನಾಥ ಸ್ವಾಮಿಯ ದೇವಾಲಯ ಗುರುಗಳಾದ ರಾಜೇಶ್ ನಾಥ್ ಗುರೂಜಿ ಅವರ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಗಮನಾರ್ಹ ಸಾಧನೆ ಮಾಡಿರುವ ತಾನ್ಯ, ಪ್ರಸ್ತುತ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿವಿಯಲ್ಲಿ ಎರಡನೇ ವರ್ಷದ ಬಿಎಸ್ಸಿ ಅರಣ್ಯಶಾಸ್ತ್ರವನ್ನು ಅಭ್ಯಸಿಸುತ್ತಿದ್ದಾರೆ.ಸೋಮವಾರಪೇಟೆಯ ಹಿರಿಯ ಪತ್ರಕರ್ತರಾದ ಮುರಳೀಧರ್ ಹಾಗೂ ಸರಿತಾ ದಂಪತಿ ಪುತ್ರಿಯಾಗಿರುವ ಇವರಿಗೆ ಹಲವು ಸಂಘ ಸಂಸ್ಥೆಗಳು, ಶಿಕ್ಷಕ ವಲಯ ಹಾಗೂ ಸಾರ್ವಜನಿಕರು ಪ್ರಶಂಸಿಸಿದ್ದಾರೆ.