ಗಣರಾಜ್ಯ ದಿನ ಭಾರತದ ಸ್ವಾತಂತ್ರ್ಯದ ಪ್ರತೀಕ: ವಸಂತಕುಮಾರ್

KannadaprabhaNewsNetwork |  
Published : Jan 29, 2025, 01:34 AM IST
ಗಣರಾಜ್ಯೋತ್ಸವ ಆಚರಣೆ ಭಾರತೀಯರ ಸ್ವಾತಂತ್ರ್ಯದ ಪ್ರತೀಕಃ ವಸಂತಕುಮಾರ್ | Kannada Prabha

ಸಾರಾಂಶ

ಗಣರಾಜ್ಯೋತ್ಸವ ಆಚರಣೆ ಭಾರತೀಯರ ಸ್ವಾತಂತ್ರ್ಯದ ಪ್ರತೀಕವಾಗಿದೆ ಎಂದು ಪುರಸಭೆ ಅಧ್ಯಕ್ಷರ ವಸಂತಕುಮಾರ್ ಹೇಳಿದ್ದಾರೆ. ಪುರಸಭೆ ಕಾರ್ಯಾಲಯ ವತಿಯಿಂದ ಪುರಸಭಾ ಆವರಣದಲ್ಲಿ ಏರ್ಪಾಡಾಗಿದ್ದ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.

ಗಣರಾಜ್ಯೋತ್ಸವ ಆಚರಣೆ

ಕನ್ನಡಪ್ರಭ ವಾರ್ತೆ ತರೀಕೆರೆ

ಗಣರಾಜ್ಯೋತ್ಸವ ಆಚರಣೆ ಭಾರತೀಯರ ಸ್ವಾತಂತ್ರ್ಯದ ಪ್ರತೀಕವಾಗಿದೆ ಎಂದು ಪುರಸಭೆ ಅಧ್ಯಕ್ಷರ ವಸಂತಕುಮಾರ್ ಹೇಳಿದ್ದಾರೆ.

ಅವರು, ಪುರಸಭೆ ಕಾರ್ಯಾಲಯ ವತಿಯಿಂದ ಪುರಸಭಾ ಆವರಣದಲ್ಲಿ ಏರ್ಪಾಡಾಗಿದ್ದ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.

ಪುರಸಭೆ ಉಪಾಧ್ಯಕ್ಷೆ ಗಿರಿಜ ಪ್ರಕಾಶ್ ವರ್ಮಾ ಮಾತನಾಡಿ ಏಕತೆ, ಸಹೋದರತೆ, ಭ್ರಾತೃತ್ವ ಮತ್ತು ಮೂಲಭೂತ ಆಶಯಗಳನ್ನು ಸಂವಿಧಾನ ಒದಗಿಸಿದೆ ಎಂದು ಹೇಳಿದರು

ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ ಡಾ.ಬಿ.ಆರ್. ಅಂಬೇಡ್ಕರ್ ಹೇಳಿದಂತೆ ಉತ್ತಮ ಸಂವಿಧಾನ ರಚನೆಯಾದರೆ ಸಾಲದು ಅದನ್ನು ಅನುಷ್ಟಾನಗೊಳಿಸುವ ಮನಸ್ಸು ಇರಬೇಕು, ಸ್ವರಾಜ್ಯಕ್ಕಾಗಿ ಮಹನೀಯರು ಕರೆಕೊಟ್ಟ ದಿನದ ಅಂಗವಾಗಿ ಜನವರಿ 26 ರಂದು ಸಂವಿಧಾನ ಅನುಷ್ಠಾನದ ದಿನವಾಗಿ ಬಳಸಿಕೊಂಡು ಗಣ ರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಪುರಸಭೆ ಸದಸ್ಯ ಟಿ.ಎಂ.ಬೋಜರಾಜ್ ಅವರು ಮಾತನಾಡಿ ವಿಶ್ವದಲ್ಲಿ ಪ್ರಶಂಸೆಗೆ ಭಾರತ ಪ್ರಜಾಪ್ರಭುತ್ವ ಪಾತ್ರವಾಗಿದೆ, ನಮ್ಮ ಸಂವಿಧಾನ ಪ್ರತಿಯೊಬ್ಬ ನಾಗರೀಕರಿಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತಿದೆ. ದೇಶಕ್ಕಾಗಿ ಹುತಾತ್ಮರಾದ ಮಹನೀಯರನ್ನು ನಾವು ಗೌರವಿಸೋಣ ಎಂದು ಹೇಳಿದರು

ಪುರಸಭೆ ಸದಸ್ಯರಾದ ಟಿ.ಜಿ.ಮಂಜುನಾಥ್, ಟಿ.ಡಿ.ಮಂಜುನಾಥ್, ಅಬ್ಬಾಸ್, ಪುರಸಭೆ ಮುಖ್ಯಾಧಿಕಾರಿ ಹೆಚ್. ಪ್ರಶಾಂತ್ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರಂಗೆ ಸಿಎಂ ಸ್ಥಾನ ನೀಡದಿದ್ದರೆ ರಾಜ್ಯಕ್ಕೆ ಅಪಮಾನ ಮಾಡಿದಂತೆ
ಮೀಸಲು ವರ್ಗೀಕರಣದ ವಿರುದ್ಧ ಇಂದು ಬೆಳಗಾವಿ ಚಲೋ