ಆ. 27ರಿಂದ ಗಣೇಶ ಪ್ರತಿಷ್ಠಾಪಿಸಿ, ನಂತರ ವಿಸರ್ಜನೆ ಮಾಡುವವರೆಗೆ ಬೆಳಗ್ಗೆ 8 ಗಂಟೆಯಿಂದ ರಾತ್ರಿ 10ರ ವರೆಗೆ ದೊಡ್ಡ ಪ್ರಮಾಣದ ಧ್ವನಿವರ್ಧಕ(ಡಿಜೆ)ಗಳನ್ನು ಬಳಸಲು ಅನುಮತಿ ನೀಡಬೇಕೆಂದು ಒತ್ತಾಯಿಸಿ ಮುಖಂಡರು ಮನವಿ ಸಲ್ಲಿಸಿದರು.
ಹಾವೇರಿ: ಗೌರಿ ಗಣೇಶ ಹಬ್ಬದ ಆಚರಣೆ ವೇಳೆ ಡಿಜೆ ಬಳಕೆಗೆ ಅನುಮತಿ ನೀಡುವಂತೆ ಒತ್ತಾಯಿಸಿ ನಗರದ ವಿವಿಧ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹಾಗೂ ಎಸ್‌ಪಿ ಯಶೋದಾ ವಂಟಗೋಡಿ ಅವರಿಗೆ ಮನವಿ ಸಲ್ಲಿಸಿದರು.ಮನವಿ ಸಲ್ಲಿಕೆ ವೇಳೆ ಮುಖಂಡರು ಮಾತನಾಡಿ, ಜಿಲ್ಲಾದ್ಯಂತ ಸಾರ್ವಜನಿಕ ಗೌರಿ ಗಣೇಶ ಹಬ್ಬವನ್ನು ಅನೇಕ ವರ್ಷಗಳಿಂದ ಅತ್ಯಂತ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷವೂ ಸಾರ್ವಜನಿಕ ಗಣೇಶ ಹಬ್ಬವನ್ನು ಸಾವಿರಾರು ಜನರೊಂದಿಗೆ ಶಾಂತಿ ಸುವ್ಯವಸ್ಥೆ ಹಾಗೂ ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದೆ. ಜಿಲ್ಲಾದ್ಯಂತ ಆ. 27ರಿಂದ ಗಣೇಶ ಪ್ರತಿಷ್ಠಾಪನೆ ಮಾಡಿ, ನಂತರ ವಿಸರ್ಜನೆ ಮಾಡುವವರೆಗೆ ಬೆಳಗ್ಗೆ 8 ಗಂಟೆಯಿಂದ ರಾತ್ರಿ 10ರ ವರೆಗೆ ದೊಡ್ಡ ಪ್ರಮಾಣದ ಧ್ವನಿವರ್ಧಕ(ಡಿಜೆ)ಗಳನ್ನು ಬಳಸಲು ಅನುಮತಿ ನೀಡಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.ಈ ವೇಳೆ ಮುಖಂಡರಾದ ಸಿದ್ದರಾಜ ಕಲಕೋಟಿ, ಸಂತೋಷ ಆಲದಕಟ್ಟಿ, ಶಿವರಾಜ ನವಲೆ, ಕಿರಣಕುಮಾರ ಕೋಣನವರ, ವರುಣ ಆನವಟ್ಟಿ, ಸುನೀಲ ರಾಯ್ಕರ್, ದೀಪಕ್ ಮಡಿವಾಳರ, ರಾಘವೇಂದ್ರ ಕಾಂಬಳೆ, ಯಲ್ಲಪ್ಪ ಸುಗೂರು, ನಿಖಿಲ ಸಂಗ, ಸಂತೋಷ ಗಾಯಕವಾಡ, ರುದ್ರೇಶ ಶಿಶುವಿನಹಳ್ಳಿ, ಶಿವಾನಂದ ಕಮ್ಮಾರ, ಅನಿಲ, ವಿನಾಯಕ ಪವಾರ, ಕಾರ್ತಿಕ ಸೇರಿದಂತೆ ವಿವಿಧ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಇದ್ದರು. ಸಿಎಸ್ ಸೆಂಟರ್‌ಗಳಲ್ಲಿ ಫೋಟೋ ಮುದ್ರಣ ನಿಷೇಧಿಸಲು ಮನವಿ
ಶಿಗ್ಗಾಂವಿ: ತಾಲೂಕಿನಾದ್ಯಂತ ಗ್ರಾಮ್ ಒನ್ ಹಾಗೂ ಸಿಎಸ್ ಸೆಂಟರ್‌ಗಳಲ್ಲಿ ಪಾಸ್‌ಪೋರ್ಟ್ ಅಳತೆಯ ಫೋಟೋಗಳನ್ನು ಮುದ್ರಿಸಲು ಅನುಮತಿ ನೀಡಬಾರದು ಎಂದು ತಾಲೂಕು ಸತ್ಯಸಾಯಿ ಛಾಯಾಗ್ರಾಹಕರ ಸಂಘದ ವತಿಯಿಂದ ಶಿರಸ್ತೇದಾರ್ ವೆಂಕಟೇಶ ಕುಲಕರ್ಣಿ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.ಲಕ್ಷಾಂತರ ರುಪಾಯಿ ಬಂಡವಾಳ ಹೂಡಿ ರಾಜ್ಯ ಸರ್ಕಾರಕ್ಕೆ ಕಾಲಕಾಲಕ್ಕೆ ತೆರಿಗೆ ಕಟ್ಟುತ್ತಾ ಛಾಯಾಗ್ರಹಣ ವೃತ್ತಿ ಮಾಡುತ್ತಿರುವ ನಮ್ಮೆಲ್ಲರ ಹೊಟ್ಟೆ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ತಾಲೂಕಿನಾದ್ಯಂತ ಗ್ರಾಮ್ ಒನ್‌ಗಳಲ್ಲಿ ಫೋಟೋ ತೆಗೆಯುವುದನ್ನು ನಿಷೇಧಿಸಬೇಕು. ಈ ಕುರಿತು ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.ತಾಲೂಕು ಸತ್ಯಸಾಯಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಗೋಪಾಲ ಮಾಳವಾದೆ, ಸದಸ್ಯರಾದ ಪ್ರಭುಗೌಡ್ರ ಕರಿಗೌಡ್ರ, ಮಲ್ಲಿಕಾರ್ಜುನ ಹಡಪದ, ಸತೀಶ ಕಲಾಲ, ಮಂಜುನಾಥ ಕುಂದಗೋಳ, ಬಸವರಾಜ ವಿ.ಎಚ್., ಪ್ರಕಾಶ ಹೊಟ್ಟುರ, ದತ್ತಾತ್ರೇಯ ಥಾಂಬೆ, ನಿಂಗಪ್ಪ ಮಾವೂರ, ಫಕ್ಕೀರಗೌಡ ಹೊನ್ನಪ್ಪನವರ, ತಿಪ್ಪಣ್ಣ ಸುಣಗಾರ, ಅನಿಲ ಚಂದುಕರ, ಸಂತೋಷ ಹೂಗಾರ, ದೇವರಾಜ ಕಮ್ಮಾರ, ಸಂತೋಷ ಕಾಟೇಗಾರ, ಈರಣ್ಣ ಬಾರಕೇರ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.