ಉಡುಪಿ: ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ರು. 500 ಕೋಟಿ ರು. ಅನುದಾನ ನೀಡುವಂತೆ ಮನವಿ ಸಲ್ಲಿಸಲಾಗುವುದು ಎಂದು ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಹೇಳಿದ್ದಾರೆ.
ನಿಗಮವು ಈ 26 ಪಂಡಗಳ ಶಿಕ್ಷಣ, ಉದ್ಯೋಗ - ಸ್ವಉದ್ಯೋಗ, ಉದ್ಯಮ, ಧಾರ್ಮಿಕತೆ, ಮಹಿಳಾ ಸಬಲೀಕರಣಗಳಿಗೆ ಯೋಜನೆಗಳನ್ನು ರೂಪಿಸಲಿದೆ. ಜೊತೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಮೂಲಭೂತ ಸೌಕರ್ಯ ಒದಗಿಸುವುದು, ಕ್ರೀಡೆ, ಸಿನೆಮಾ ಇನ್ನಿತರ ಕಲೆಗಳಲ್ಲಿ ಸಾಧನೆ ಮಾಡಿದವರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ, ಕಲೆ, ಕ್ರೀಡೆ, ಸಾಹಿತ್ಯ, ಶಿಕ್ಷಣ, ಜಾನಪದ, ನಾಟಿವೈದ್ಯ ಇನ್ನಿತರ ಕ್ಷೇತ್ರಗಳ ಸಾಧಕರಿಗೆ ಬ್ರಹ್ಮಶ್ರೀ ನಾರಾಯಣ ಗುರು ಹೆಸರಿನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ನೀಡುವುದು, ಶೇಂದಿ ಮತ್ತು ಕಲ್ಪರಸ ತಯಾರಿಕೆಯಲ್ಲಿ ಆಕಸ್ಮಿಕ ಅಪಘಾತವಾದಾಗ ಅವಲಂಬಿತ ಕುಟುಂಬಕ್ಕೆ ಪರಿಹಾರ ನೀಡುವುದು, ಆಯುರ್ವೇದ, ಗಿಡಮೂಲಿಕೆಗಳನ್ನು ಮತ್ತು ಶೇಂದಿ - ಕಲ್ಪರಸ ಬೆಳೆಗಳ ಪಾಂಟ್ರೇಶನ್‌ಗೆ ಉತ್ತೇಜನ, ನಾರಾಯಣ ಗುರುಗಳ ಸಾಮರಸ್ಯದ ಸಂದೇಶಗಳನ್ನು ಕರ್ನಾಟಕದ ಎಲ್ಲೆಡೆ ಪ್ರಚಾರ ಮಾಡುವ ಬಗ್ಗೆಯೂ ನಿಗಮ ಯೋಜನೆ ಹಾಕಿಕೊಂಡಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಶೋಕ್ ಪೂಜಾರಿ ಬೀಜಾಡಿ, ಡಾ. ಸಂತೋಷ್ ಕುಮಾರ್, ಮಹೇಶ್ ಅಂಚನ್ ಇದ್ದರು.