ಕನ್ನಡಪ್ರಭ ವಾರ್ತೆ ಇಂಡಿ
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ,ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಮಾತನಾಡಿ, ಸುಮಾರು 10 ವರ್ಷದ ನಿಂಬೆ ಗಿಡಗಳು ರೈತ ಟ್ಯಾಂಕರ್ ನೀರಿನಿಂದ ಜೋಪಾನ ಮಾಡಿದ್ದ, ಇದೀಗ ನಿಂಬೆ ಗಿಡಗಳು ಬೆಂಕಿಗೆ ಆಹುತಿಯಾಗಿದ್ದು ರೈತನ ಕುಟುಂಬಕ್ಕೆ ಬರಸಿಡಿಲ ಬಡಿದಂತಾಗಿದೆ. ಘಟನೆಯಾಗಿ ನಾಲ್ಕೈದು ದಿನಗಳು ಗತಿಸಿದರೂ ಪಟ್ಟಣದಲ್ಲಿರುವ ರಾಜ್ಯ ಲಿಂಬೆ ಅಬಿವೃದ್ಧಿ ಮಂಡಳಿ ಸೂಕ್ತ ಕ್ರಮದ ಭರವಸೆ ನೀಡದಿರುವುದು ವಿಪರ್ಯಾಸ. ನಿಂಬೆ ನಾಡಿನಲ್ಲಿ ನಿಂಬೆ ಬೆಳೆಗಾರರಿಗೆ ಇಂತಹ ಅವಘಡಗಳು ಸಂಭವಿಸಿದಾಗ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಲಿಂಬೆ ಅಬಿವೃದ್ಧಿ ಮಂಡಳಿ ಹಾಗೂ ಸರಕಾರ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.
ಈ ವೇಳೆ ಶ್ರೀಶೈಲಗೌಡ ಪಾಟೀಲ, ಸಿದ್ದು ಡಂಗಾ,ಬಾಳು ರಾಠೋಡ, ರಮೇಶ ರಾಠೋಡ, ತಿಪ್ಪಣ್ಣ ಉಟಗಿ, ಸಾಹಿಬಣ್ಣಾ ಯಲ್ಲಡಗಿ, ಬಾಪುಗೌಡ ಬಿರಾದಾರ ಸಾಹೇಬಣ್ಣಾ ಪೂಜಾರಿ, ಸಿದ್ದು ಹೂಗಾರ , ಇಬ್ರಾಹಿಂ ಚಪ್ಪರಬಂದ, ಶಿವಾನಂದ ಯಂಕಂಚಿ, ಶ್ರೀಶೈಲ ಹೂಲ್ಲೂರ,ಕಲ್ಲಪ್ಪ ಪೂಜಾರಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.