ಕಾಡು ಮತ್ತು ಪರಿಸರದೊಂದಿಗೆ ಸಹಬಾಳ್ವೆ ನಡೆಸುವ ಜನರು ಬದುಕು ಕಟ್ಟಿಕೊಳ್ಳಲು ಮತ್ತು ಅರಣ್ಯ ಉಳಿಯಲು ಇಲಾಖೆಯಲ್ಲಿ ಸೃಷ್ಟಿಯಾಗುವ ಉದ್ಯೋಗದಲ್ಲಿ ಸ್ಥಳಿಯರನ್ನೇ ಮಾತ್ರ ಕಡ್ಡಾಯವಾಗಿ ನೇಮಕಾತಿ ಮಾಡಬೇಕು.
ಜೋಯಿಡಾ: ತಾಲೂಕಿನ ಕಾಳಿ ಹುಲಿ ಯೋಜನೆ ಸೇರಿ ಜಿಲ್ಲೆಯ 6 ಪ್ರಾದೇಶಿಕ ಅರಣ್ಯ ವಿಭಾಗದಲ್ಲಿ ಒಟ್ಟು 60 ವೀಕ್ಷಕರನ್ನು ಆ ವಿಭಾಗ ವ್ಯಾಪ್ತಿಯ ಸ್ಥಳೀಯರನ್ನೇ ನೇಮಕ ಮಾಡಬೇಕು ಮತ್ತು ಜೋಯಿಡಾಲ್ಲಿ ಅರಣ್ಯ ಕಾಲೇಜು ಪ್ರಾರಂಭಿಸಬೇಕು. ಇಲ್ಲದಿದ್ದರೆ ಜಿಲ್ಲಾದ್ಯಂತ ಉಗ್ರ ಪ್ರತಿಭಟನೆ ನಡೆಸುವುದಾಗಿ ಜಿಲ್ಲಾ ಕುಣಬಿ ಸಮಾಜದಿಂದ ತಹಸೀಲ್ದಾರ್ ಮೂಲಕ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.ಕಾಳಿ ಹುಲಿ ಸಂರಕ್ಷಿತ ಪ್ರದೇಶ 30 ವೀಕ್ಷಕರು, ಕಾರವಾರ ಪ್ರಾದೇಶಿಕ ವಿಭಾಗ 7, ಹಳಿಯಾಳ ಪ್ರಾದೇಶಿಕ ವಿಭಾಗ 5, ಯಲ್ಲಾಪುರ ಪ್ರಾದೇಶಿಕ ವಿಭಾಗ 6, ಶಿರಸಿ ಪ್ರಾದೇಶಿಕ ವಿಭಾಗ 7, ಹೊನ್ನಾವರ ಪ್ರಾದೇಶಿಕ ವಿಭಾಗ 5 ಒಟ್ಟು 60 ಮತ್ತು 7 ಬ್ಯಾಕ್ ಲಾಗ್ ಹುದ್ದೆಗಳು ಹೀಗೆ ಒಟ್ಟು 67 ಅರಣ್ಯ ವೀಕ್ಷಕ ಗ್ರೂಪ್ ಡಿ ಹುದ್ದೆಗಳಿಗೆ ನೇರ ನೇಮಕಾತಿಗೆ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಆಯ್ಕೆ ಪ್ರಾಧಿಕಾರ ಕೆನರಾ ವೃತ್ತ ಶಿರಸಿ ಅರ್ಜಿ ಆಹ್ವಾನಿಸಿದೆ.ಕಾಡು ಮತ್ತು ಪರಿಸರದೊಂದಿಗೆ ಸಹಬಾಳ್ವೆ ನಡೆಸುವ ಜನರು ಬದುಕು ಕಟ್ಟಿಕೊಳ್ಳಲು ಮತ್ತು ಅರಣ್ಯ ಉಳಿಯಲು ಇಲಾಖೆಯಲ್ಲಿ ಸೃಷ್ಟಿಯಾಗುವ ಉದ್ಯೋಗದಲ್ಲಿ ಸ್ಥಳಿಯರನ್ನೇ ಮಾತ್ರ ಕಡ್ಡಾಯವಾಗಿ ನೇಮಕಾತಿ ಮಾಡಬೇಕು. ಹೊರಗಿನವರು ಬಂದರೆ ಕಾಡಿನ ವಿನಾಶವಾಗಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಕುಣಬಿ ಸಮಾಜ ಅಧ್ಯಕ್ಷ ಸುಭಾಷ್ ಗಾವಡಾ, ಉಪಾಧ್ಯಕ್ಷ ಕೃಷ್ಣ ಮಿರಾಶಿ, ಅರವಿಂದ ನಾಯ್ಕ ಹುಡಸಾ, ಈಶ್ವರ ಗಾವಡಾ, ಸುಭಾಷ್ ವೇಳಿಪ, ಗುಣೊ ಗಾವಡಾ, ಗಜಾನನ ವೇಳಿಪ, ಸುಭಾಷ್ ಮಿರಾಶಿ ಸಿಸೈ, ಕಾಂತಾ ಗಾವಡಾ, ರಾಮಾ ಬಾಬು ಮಿರಾಶಿ, ಗಜಾನನ ಮಿರಾಶಿ ಮುಂತಾದವರು ಇದ್ದರು.ಉಪಸಭಾಧ್ಯಕ್ಷ ಮಂಕಾಳ ವೈದ್ಯರಿಗೆ ಸನ್ಮಾನ
ಹೊನ್ನಾವರ: ವಿಧಾನಸಭಾ ನೂತನ ಉಪಸಭಾಧ್ಯಕ್ಷ ಮಂಕಾಳ ಎಸ್. ವೈದ್ಯ ಅವರನ್ನು ಕೆಳಗಿನೂರಿನ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ಸನ್ಮಾನಿಸಿದರು.ಸಂಘದ ಸಭಾಗೃಹದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಗಣಪಯ್ಯ ಕನ್ಯಾ ಗೌಡ ಅವರು ಮಾತನಾಡಿ, ಮಂಕಾಳ ವೈದ್ಯ ಅವರ ನೆಚ್ಚಿನ ಕ್ಷೇತ್ರ ಸಹಕಾರಿ ಕ್ಷೇತ್ರ. ಅವರು ಸಹಕಾರಿ ಸಂಘವನ್ನು ಕಟ್ಟಿ ಬೆಳೆಸಿದ ಅನುಭವ ಹೊಂದಿರುವರು ಸಹಕಾರಿ ತತ್ವ ಸಿದ್ಧಾಂತ ರೂಢಿಸಿಕೊಂಡು ಬಂದಿದ್ದಾರೆ ಎಂದರು.ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ವಿ.ಕೆ. ವಿಶಾಲ್ ಮಾತನಾಡಿದರು. ಉಪಾಧ್ಯಕ್ಷ ವೆಂಕಟೇಶ ಲಕ್ಷ್ಮಣ ನಾಯ್ಕ, ನಿರ್ದೇಶಕರಾದ ಅಣ್ಣಪ್ಪ ನರಸ ಗೌಡ, ಗಂಗಾಧರ ಗಣಪಯ್ಯ ಗೌಡ, ಮಂಜುನಾಥ ದೇವ ಗೌಡ, ರಾಜೇಶ ಮಂಜು ಗೌಡ, ಬಸ್ತಾಂವ ಪಾಸ್ಕೋಲ ಫರ್ನಾಂಡಿಸ್, ಗಣೇಶ ಶಂಭು ಶಾಸ್ತ್ರೀ, ಬುಡ್ಡಿ ಸುಕ್ರ ಗೊಂಡ, ದೇವಿ ಮಾಬ್ಲ ಗೌಡ, ಸಂಘದ ಸಿಬ್ಬಂದಿ ಹಾಗೂ ತಿಮ್ಮಪ್ಪ ಜಿ. ಗೌಡ ಹಾಗೂ ಮಾಬ್ಲ ಗೌಡ ಮುಂತಾದವರು ಪಾಲ್ಗೊಂಡಿದ್ದರು. ಪ್ರ. ಮುಖ್ಯ ಕಾರ್ಯನಿರ್ವಾಹಕ ಮಹೇಶ ಹೆಗಡೆ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.