ಚಿಕ್ಕಮಗಳೂರು: ಪ್ರೌಢಶಾಲಾ ಹಂತದಲ್ಲಿ ತೃತೀಯ ಭಾಷೆಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗ್ರೇಡಿಂಗ್ ಕೈಬಿಟ್ಟು ಬದಲಾಗಿ ಫಲಿತಾಂಶದಲ್ಲಿ ಅಂಕಗಳನ್ನು ಪರಿಗಣಿಸುವಂತೆ ಆಗ್ರಹಿಸಿ ಜಿಲ್ಲಾ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಸಂಘ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಅವರಿಗೆ ಮನವಿ ಸಲ್ಲಿಸಿದರು.
ಚಿಕ್ಕಮಗಳೂರು: ಪ್ರೌಢಶಾಲಾ ಹಂತದಲ್ಲಿ ತೃತೀಯ ಭಾಷೆಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗ್ರೇಡಿಂಗ್ ಕೈಬಿಟ್ಟು ಬದಲಾಗಿ ಫಲಿತಾಂಶದಲ್ಲಿ ಅಂಕಗಳನ್ನು ಪರಿಗಣಿಸುವಂತೆ ಆಗ್ರಹಿಸಿ ಜಿಲ್ಲಾ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಸಂಘ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಅವರಿಗೆ ಮನವಿ ಸಲ್ಲಿಸಿದರು.ತೃತಿಯ ಭಾಷೆ ಅಂಕಗಳನ್ನು 2026ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಪರಿಗಣಿಸದಿರುವಂತೆ ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ತೀರ್ಮಾನ ಕೈಕೊಂಡಿರುವುದು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯ ಮೇಲೆ ಕೆಟ್ಟ ಪರಿಣಾಮ ಬೀರಿದಂತಾಗಿದೆ.
ಹಿಂದಿ ಭಾಷೆ ಬಗ್ಗೆ ಯಾವುದೇ ತಜ್ಞರು, ಶಿಕ್ಷಕರು, ಪಾಲಕರು ಅಥವಾ ವಿದ್ಯಾರ್ಥಿಗಳಿಂದ ಅಭಿಪ್ರಾಯವನ್ನು ಸಂಗ್ರಹಿಸದೇ ದಿಢೀರನೇ ಈ ನಿರ್ಧಾರ ಕೈಗೊಂಡಿರುವುದು ದುಃಖಕರ ಸಂಗತಿ. ತೃತೀಯ ಭಾಷೆಯನ್ನು ವಿದ್ಯಾರ್ಥಿಗಳಲ್ಲಿ ಭಾಷಾ ಸಾಮರ್ಥ್ಯವನ್ನು ಅಭೀವೃದ್ಧಿ ಪಡಿಸುವುದಲ್ಲದೇ ಸಂವಹನ ಕೌಶಲ್ಯಗಳನ್ನು ತರಗತಿಗಳಲ್ಲಿ ಬೆಳೆಸಲು ಹಕ್ಕನ್ನು ಮೊಟಕು ಗೊಳಿಸಿದಂತೆ ಎಂದು ಸಂಘದ ಜಿಲ್ಲಾಧ್ಯಕ್ಷ ರಾಮಸ್ವಾಮಿ ನಾಯ್ಕ ಬೇಸರ ವ್ಯಕ್ತಪಡಿಸಿದರು.
ಈವೇಳೆ ಸಂಘದ ಜಿಲ್ಲಾ ಕಾರ್ಯದರ್ಶಿ ಅನ್ಸಾರ್ ಷರೀಫ್, ಖಜಾಂಚಿ ಎನ್.ಜಿ. ಚಂದ್ರಪ್ಪ, ಶಿಕ್ಷಕರಾದ ದೀಪಾ, ರೇಖಾ, ಪವಿತ್ರ, ರೂಪ, ವಿಶ್ವನಾಥ್, ಶ್ರೀನಿವಾಸ್, ಪ್ರಭಾಕರ್, ಪದ್ಮಾವತಿ, ಉಷಾ, ಸುನೀತಾ, ಕವಿತಾ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.