ವರದಿಗಾರರ ಕೂಟಕ್ಕೆ ಸ್ವಂತ ಜಾಗ: ಶಾಸಕರಿಗೆ ಮನವಿ

KannadaprabhaNewsNetwork |  
Published : May 07, 2026, 02:00 AM IST
ಕ್ಯಾಪ್ಷನ6ಕೆಡಿವಿಜಿ43 ದಾವಣಗೆರೆಯಲ್ಲಿ ಜಿಲ್ಲಾ ವರದಿಗಾರರ ಕೂಟದಿಂದ ನೂತನ ಶಾಸಕ ಸಮರ್ಥ ಶಾಮನೂರು ಅವರಿಗೆ ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಸಮರ್ಥ ಎಂ. ಶಾಮನೂರು ಅವರಿಗೆ ಬುಧವಾರ ಜಿಲ್ಲಾ ವರದಿಗಾರರ ಕೂಟದಿಂದ ಅಭಿನಂದಿಸಿ, ಶುಭ ಕೋರಲಾಯಿತು.

- ಜಿಲ್ಲಾ ವರದಿಗಾರರ ಕೂಟದಿಂದ ಗೌರವ ಸ್ವೀಕರಿಸಿದ ಸಮರ್ಥ ಶಾಮನೂರು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಸಮರ್ಥ ಎಂ. ಶಾಮನೂರು ಅವರಿಗೆ ಬುಧವಾರ ಜಿಲ್ಲಾ ವರದಿಗಾರರ ಕೂಟದಿಂದ ಅಭಿನಂದಿಸಿ, ಶುಭ ಕೋರಲಾಯಿತು.

ಶಾಸಕ ಸಮರ್ಥ ಈ ಸಂದರ್ಭ ಮಾತನಾಡಿ, ಮಾಧ್ಯಮದವರ ಜೊತೆಗೆ ತಾವು ಸದಾ ಇರುವುದಾಗಿ, ಸರ್ಕಾರದಿಂದ ಸಿಗಬಹುದಾದ ಸೌಲಭ್ಯ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಭರವಸೆ ನೀಡಿದರು.

ಜಿಲ್ಲಾ ವರದಿಗಾರರ ಕೂಟ ಕಳೆದ 18 ವರ್ಷದಿಂದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಈ ವಿಚಾರ ಈಗಷ್ಟೇ ತಮ್ಮ ಗಮನಕ್ಕೆ ಬಂದಿದೆ. ಜಿಲ್ಲಾ ಸಚಿವರು, ಸಂಸದರ ಜೊತೆಗೆ ಚರ್ಚಿಸಿ ಆದಷ್ಟು ಬೇಗನೇ ಜಾಗ ಒದಗಿಸಲು ಶ್ರಮಿಸುವೆ. ಉದ್ದೇಶಿತ ಜಾಗದಲ್ಲಿ ವಾಸ್ತು ಪ್ರಕಾರವೇ ಕೂಟಕ್ಕೆ ಸ್ವಂತ ಸೂರು ಕಟ್ಟುವ ಕೆಲಸ ಮಾಡೋಣ ಎಂದು ತಿಳಿಸಿದರು.

ಕೂಟದ ಪದಾಧಿಕಾರಿಗಳು ಮಾತನಾಡಿ, ವರದಿಗಾರರ ಕೂಟಕ್ಕೆ ಸುಸಜ್ಜಿತ ಕಟ್ಟಡ ನಿರ್ಮಿಸಲು ಈಗಾಗಲೇ ಜಾಗವನ್ನು ಸಚಿವರು ನೋಡಿದ್ದು, ಅದೇ ಜಾಗವನ್ನು ಅಂತಿಮಗೊಳಿಸಿ ಮಂಜೂರು ಮಾಡಿಕೊಡಬೇಕು. ಜಿಲ್ಲಾ ವರದಿಗಾರರ ಕೂಟ ಅಸ್ತಿತ್ವಕ್ಕೆ ಬಂದು 18 ವರ್ಷಗಳು ಕಳೆದರೂ ಇದುವರೆಗೂ ಸ್ವಂತ ನಿವೇಶನ ಇಲ್ಲ. ಈ ಕುರಿತು ಜಿಲ್ಲಾ ಸಚಿವರು ಹಾಗೂ ಸಂಸದರಿಗೂ ಮನವಿ ಸಲ್ಲಿಸಿದ್ದೇವೆ‌. ಈ ಹಿಂದೆ ನೋಡಿದ ಜಾಗವನ್ನೇ ಕೂಟಕ್ಕೆ ನಿ ಹಸ್ತಾಂತರಿಸಲು ಕ್ರಮ ಕೈಗೊಳ್ಳ ಬೇಕು ಎಂದು ಕೋರಿದರು.

ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕ ಸಮರ್ಥ ಶಾಮನೂರು, ತಂದೆ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ತಾಯಿ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನರ ಜೊತೆ ಚರ್ಚಿಸಿ, ಅಗತ್ಯ ಜಾಗ ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಆದಷ್ಟು ಬೇಗ ಸಿಹಿ ಸುದ್ದಿ ನೀಡುತ್ತೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭ ಕೂಟದ ಪ್ರಧಾನ ಕಾರ್ಯದರ್ಶಿ ಎಂ.ವೈ. ಸತೀಶ್, ಪದಾಧಿಕಾರಿಗಳಾದ ಸಿಕಂದರ್, ಬಸವರಾಜ ದೊಡ್ಮನಿ, ಪಿಆರ್‌ಒ ಲೋಕೇಶ, ಟಿ.ಎಸ್. ತಿಪ್ಪೇಸ್ವಾಮಿ, ಎ.ಎನ್. ನಿಂಗಪ್ಪ, ಚನ್ನವೀರಯ್ಯ ಸೇರಿದಂತೆ ಕೂಟದ ಸದಸ್ಯರು ಉಪಸ್ಥಿತರಿದ್ದರು.

- - -

-6ಕೆಡಿವಿಜಿ43:

ದಾವಣಗೆರೆಯಲ್ಲಿ ದಕ್ಷಿಣ ಕ್ಷೇತ್ರದ ನೂತನ ಶಾಸಕ ಸಮರ್ಥ ಶಾಮನೂರು ಅವರಿಗೆ ಜಿಲ್ಲಾ ವರದಿಗಾರರ ಕೂಟದಿಂದ ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೂಡ್ಸ್‌ ಶೆಡ್ ಲಾರಿ ನಿಲುಗಡೆ ಜಾಗ ಉಳಿಸಿ
ಶೀಘ್ರ ಕಾಮಗಾರಿ ಪೂರ್ಣಗೊಳಿಸಿ: ರಾವ್