ಬೇಲೂರು ಪುರಸಭೆ ವಾಣಿಜ್ಯ ಮಳಿಗೆ ಮರು ಟೆಂಡರ್‌ ಕರೆಯಲು ಮನವಿ

KannadaprabhaNewsNetwork |  
Published : Apr 03, 2025, 12:33 AM IST
2ಎಚ್ಎಸ್ಎನ್11 : ಪುರಸಭಾ ವಾಣಿಜ್ಯ ಮಳಿಗೆಗಳನ್ನು ಮರು ಹರಾಜು ಕರೆಯುವಂತೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದು ಇದಕ್ಕೆ ಸಂಬಂಧಪಟ್ಟಂತೆ ಪುರಸಭೆ ಮುಖ್ಯ ಅಧಿಕಾರಿಗಳಿಗೆ ಸಾಮಾಜಿಕ ಹೋರಾಟಗಾರರು ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಬೇಲೂರು ಪುರಸಭೆ ಮಳಿಗೆಯಲ್ಲಿ ಅಕ್ರಮವಾಗಿ ನಡೆದಿದ್ದ ಇ -ಟೆಂಡರ್ ಹರಾಜು ಪ್ರಕ್ರಿಯೆ ಸರಿಇಲ್ಲ ಎಂದು ಸಾಮಾಜಿಕ ಹೋರಾಟಗಾರರಾದ ವೆಂಕಟೇಶ್, ಸತೀಶ್, ತೊಟೇಶ್ ಸೇರಿದಂತೆ ಇತರರು ನ್ಯಾಯಾಲಯದಲ್ಲಿ ಹೊಸದಾಗಿ ಟೆಂಡರ್ ಪ್ರಕ್ರಿಯೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅದರಂತೆ ನ್ಯಾಯಾಲಯದ ಆದೇಶದ ಮೇರೆಗೆ ತೀರ್ಪು ಹೊರಬಂದಿದ್ದು, ಹಿಂದೆ ನಡೆದ ಇ ಟೆಂಡರ್ ಪ್ರಕ್ರಿಯೆ ಸರಿಇಲ್ಲದೆ ಇರುವುದರಿಂದ ಅದನ್ನು ರದ್ದುಮಾಡಲಾಗಿ ಮರು ಹೊಸ ಟೆಂಡರ್ ಪ್ರಕ್ರಿಯೆ ನಡೆಸುವಂತೆ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು

ಪುರಸಭಾ ವಾಣಿಜ್ಯ ಮಳಿಗೆಗಳನ್ನು ಮರು ಹರಾಜು ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದು, ಇದಕ್ಕೆ ಸಂಬಂಧಪಟ್ಟಂತೆ ಪುರಸಭೆ ಮುಖ್ಯ ಅಧಿಕಾರಿಗಳು ಅಗತ್ಯ ಕಾನೂನು ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕು ಎಂದು ಸಾಮಾಜಿಕ ಹೋರಾಟಗಾರರು ಮನವಿ ಸಲ್ಲಿಸಿದರು.

ಪಟ್ಟಣದ ಪುರಸಭೆ ಮಳಿಗೆಯಲ್ಲಿ ಅಕ್ರಮವಾಗಿ ನಡೆದಿದ್ದ ಇ -ಟೆಂಡರ್ ಹರಾಜು ಪ್ರಕ್ರಿಯೆ ಸರಿಇಲ್ಲ ಎಂದು ಸಾಮಾಜಿಕ ಹೋರಾಟಗಾರರಾದ ವೆಂಕಟೇಶ್, ಸತೀಶ್, ತೊಟೇಶ್ ಸೇರಿದಂತೆ ಇತರರು ನ್ಯಾಯಾಲಯದಲ್ಲಿ ಹೊಸದಾಗಿ ಟೆಂಡರ್ ಪ್ರಕ್ರಿಯೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅದರಂತೆ ನ್ಯಾಯಾಲಯದ ಆದೇಶದ ಮೇರೆಗೆ ತೀರ್ಪು ಹೊರಬಂದಿದ್ದು, ಹಿಂದೆ ನಡೆದ ಇ ಟೆಂಡರ್ ಪ್ರಕ್ರಿಯೆ ಸರಿಇಲ್ಲದೆ ಇರುವುದರಿಂದ ಅದನ್ನು ರದ್ದುಮಾಡಲಾಗಿ ಮರು ಹೊಸ ಟೆಂಡರ್ ಪ್ರಕ್ರಿಯೆ ನಡೆಸುವಂತೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಸಾಮಾಜಿಕ ಹೋರಾಟಗಾರರಿಂದ ಈ ವಿಚಾರವಾಗಿ ಯಾವ ರೀತಿ ಕ್ರಮ ಕೈಗೊಂಡಿದ್ದೀರ ಎಂದು ಲಿಖಿತ ಹೇಳಿಕೆ ನೀಡುವಂತೆ ಪುರಸಭೆ ಮುಖ್ಯಾಧಿಕಾರಿಗಳಾದ ಸುಜಯ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಮಾಜಿಕ ಹೋರಾಟಗಾರರಾದ ವೆಂಕಟೇಶ್, ಸತೀಶ್ , ತೊಟೇಶ್, ಮಾಜಿ ಪುರಸಭೆ ಉಪಾಧ್ಯಕ್ಷ ಅರುಣ್ ಕುಮಾರ್, ಇದೇ ವರ್ಷ ಜನವರಿ 2ರಂದು ನಡೆದಿದ್ದ 63 ಪುರಸಭಾ ಮಳಿಗೆಗಳ ಇ-ಟೆಂಡರ್ ಪ್ರಕ್ರಿಯೆಯನ್ನು ರದ್ದುಪಡಿಸಿ ಮರು ಟೆಂಡರ್ ಕರೆಯುವಂತೆ ಜಿಲ್ಲಾಧಿಕಾರಿಗಳು ಮಾರ್ಚ್‌ 14ರಂದು ನಿಮಗೆ ಆದೇಶ ರವಾನಿಸಿರುತ್ತಾರೆ, ಮತ್ತು ಮಾರ್ಚ್‌ 20ರಂದು ಬೇಲೂರಿನ ಪುರಸಭಾ ಮಳಿಗೆಗಳಿಗೆ ಕೂಡಲೇ ಮರು ಹರಾಜು ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಯೋಜನ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿಕೋಶ, ಹಾಸನ ಇವರು ಸಹ ನಿಮಗೆ ಆದೇಶ ರವಾನಿಸಿರುತ್ತಾರೆ ಆದುದರಿಂದ ನೀವುಗಳು ಪುರಸಭಾ ಮಳಿಗೆಗಳಿಗೆ ಮರು ಹರಾಜು ನಡೆಸುವ ಸಲುವಾಗಿ ಯಾವರೀತಿಯ ಕ್ರಮ ಕೈಗೊಂಡಿರುತ್ತೀರ ಮತ್ತು ಈ ಹಿಂದೆ ನಡೆದಿದ್ದ ಇ-ಹರಾಜು ಪ್ರಕ್ರಿಯೆಗೆ ಭಾಗವಹಿಸಿದವರು ಕಟ್ಟಿದ್ದ ಇಎಂಡಿ ಹಣವನ್ನು ಇದುವರೆಗೂ ಯಾಕೆ ಬಿಡುಗಡೆ ಗೊಳಿಸಿಲ್ಲ ಎಂಬುದರ ಬಗ್ಗೆ ಲಿಖಿತ ಹೇಳಿಕೆ ನೀಡಬೇಕು ಎಂದು ಈ ಮೂಲಕ ಪುರಸಭೆ ಮುಖ್ಯಾಧಿಕಾರಿಗಳಿಗೆ ಕೇಳಿಕೊಂಡಿದ್ದೇವೆ ಎಂದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ