ಕನ್ನಡ ಪ್ರಭ ವಾರ್ತೆ ಮುಧೋಳ
ನಗರದಲ್ಲಿ ತಹಸೀಲ್ದಾರ್ ವಿನೋದ ಹತ್ತಳ್ಳಿ ಹಾಗೂ ನೀರಾವರಿ ಇಲಾಖೆಯ (ಜಿಎಲ್‌ಬಿಸಿ) ಎಇಇ ಹೆಚ್.ಆರ್. ಮಾಹರಡ್ಡಿ ಅವರಿಗೆ ಮನವಿ ಸಲ್ಲಿಸುವ ಮೂಲಕ ಸರ್ಕಾರ ಒತ್ತಾಯಿಸಿದ್ದಾರೆ.
ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ನಾಗೇಶ ಸೋರಗಾಂವಿ ಹಾಗೂ ತಾಲೂಕಾಧ್ಯಕ್ಷ ದುಂಡಪ್ಪ ಯರಗಟ್ಟಿ ಅವರು ಮಾತನಾಡಿ, ಘಟಪ್ರಭ ನದಿಯ ನೀರು ಸಂಪೂರ್ಣ ಬರಿದಾಗಿದೆ. ಇದರಿಂದ 30ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗಲಿದೆ. ಕಾರಣ ಈ ಕೂಡಲೇ ನದಿಗೆ ನೀರು ಹರಿಸಬೇಕೆಂದು ಒತ್ತಾಯಿಸಿದರು.ರೈತ ನಾಯಕರಾದ ಮಹೇಶಗೌಡ ಪಾಟೀಲ, ಮುತ್ತು ಹೊಸಕೋಟಿ, ಸುರೇಶ ಅಕ್ಕಿಮರಡಿ, ಮುದ್ದೇಶ ಗಾಯಕವಾಡ ಹಾಗೂ ಕಬ್ಬು ಬೆಳೆಗಾರರು, ರೈತರು ಮುಖಂಡರು ಉಪಸ್ಥಿತರಿದ್ದರು.