ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಪಟ್ಟಣದ ಹೃದಯ ಭಾಗದ ಡಿ.ದೇವರಾಜ ಅರಸ್ ಕ್ರೀಡಾಂಗಣದಲ್ಲಿನ ಹೈಮಾಸ್ಟ್ ಲೈಟ್ ಉರಿಯದೆ ಕತ್ತಲಲ್ಲಿ ಮುಳುಗಿದೆ.ಕಳೆದ ತಿಂಗಳಿನಿಂದ ಹೈಮಾಸ್ಟ್ ಲೈಟ್ ದುರಸ್ತಿಗೆ ಪುರಸಭೆ ಮುಂದಾಗಿಲ್ಲದ ಕಾರಣ ಬೆಳಗಿನ ಜಾವ ಹಾಗೂ ಸಂಜೆಯ ಬಳಿಕ ವಾಯು ವಿಹಾರಿಗಳು ಕತ್ತಲೆಯಲ್ಲೆ ವಾಕಿಂಗ್ ಮಾಡುತ್ತಿದ್ದಾರೆ. ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದ ನೈರುತ್ಯ ದಿಕ್ಕಿನಲ್ಲಿ ಗರುಡ ಗಂಭದಂತೆ ಎಂಬತ್ತಡಿಯಷ್ಟು ಎತ್ತರದ ಹೈಮಾಸ್ಟ್ ಲೈಟ್‌ನ ಕಂಬ ನಿಂತಿದೆ. ಆದರೆ ಬೆಳಕು ಮಾತ್ರ ಇಲ್ಲ.
ಡಿ.ದೇವರಾಜ ಅರಸು ಕ್ರೀಡಾಂಗಣದ ಹೈಮಾಸ್ಟ್ ಲೈಟ್‌ನ ಕೇಬಲ್ ಖಾಸಗಿ ನಿವೇಶನದಲ್ಲಿದೆ. ನಿವೇಶನದಾರರು ಮನೆ ಕಟ್ಟಬೇಕು, ಕೇಬಲ್ ಬದಲಿಸಿ ಎಂದ ಕಾರಣ ಹೈಮಾಸ್ಟ್ ಲೈಟ್ ಉರಿಯುತ್ತಿಲ್ಲ. ಕೇಬಲ್ ಬದಲಿಸಲು ಕ್ರಮ ವಹಿಸುವಂತೆ ಪುರಸಭೆಗೆ ಸೂಚಿಸುವೆ.-ಕಿರಣ್ ಗೌಡ, ಪುರಸಭೆ ಸದಸ್ಯ, ಗುಂಡ್ಲುಪೇಟೆ
ಡಿ.ದೇವರಾಜ ಅರಸು ಕ್ರೀಡಾಂಗಣ ಗುಂಡ್ಲುಪೇಟೆಗೆ ಭೂಷಣ. ದಿವಂಗತ ಎಚ್.ಎಸ್.ಮಹದೇವಪ್ರಸಾದ್ ಕಾಲದಲ್ಲಿ ನಿರ್ಮಾಣವಾಗಿದೆ. ವಾಯು ವಿಹಾರದ ತಾಣವಾಗಿದೆ. ಹೈಮಾಸ್ಟ್ ಲೈಟ್ ಬೆಳಕು ನೀಡುತ್ತಿಲ್ಲ. ಪುರಸಭೆ ಕೂಡಲೇ ಗಮನಹರಿಸಲಿ.-ಬಿ.ಎಂ.ಮಂಜಪ್ಪ, ಶಿವಪುರ ನಿವಾಸಿ