ಕುಕನೂರು:
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕುಕನೂರ-ಯಲಬುರ್ಗಾ ತಾಲೂಕಿನ ಮಾದಿಗ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರು ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿ ಆ. 1ಕ್ಕೆ ಒಂದು ವರ್ಷ ಕಳೆದಿದೆ. ಈ ವರೆಗೂ ಕಾಲಹರಣ ಮಾಡುತ್ತಾ ಬಂದಿರುವ ಸರ್ಕಾರ ಜಾತಿ ಗಣತಿ, ಆಯೋಗ ರಚನೆ ಮಾಡಿ ದತ್ತಾಂಶ ಪಡೆದು ಒಳ ಮೀಸಲಾತಿ ಜಾರಿಗೆ ಮಾಡುತ್ತೇವೆ ಎಂದು ಹಸಿ ಸುಳ್ಳು, ಭರವಸೆ ನೀಡಿದೆ. ಹೀಗಾಗಿ ಮಾದಿಗ ಸಮುದಾಯದ ಮುಖಂಡರು, ಯುವಕರು ಆ. 1ರಂದು ಜಿಲ್ಲಾಧಿಕಾರಿಗೆ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಮನವಿ ಸಲ್ಲಿಸಲಿದ್ದೇವೆ ಎಂದರು.
ಹಿರಿಯ ಮುಖಂಡ ಬಸವರಾಜ ನಡುಲಮನಿ ಮಾತನಾಡಿ, ಎರಡು ತಾಲೂಕಿನ ಸಮುದಾಯವು ಮತ್ತೊಮ್ಮೆ ದೊಡ್ಡಮಟ್ಟದ ಹೋರಾಟಕ್ಕೆ ಸಿದ್ಧರಾಗಬೇಕು. ರಾಜ್ಯ ಸರ್ಕಾರ ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಇದೇ ಅಧಿವೇಶನದಲ್ಲಿ ಒಳ ಮೀಸಲಾತಿ ಜಾರಿ ಮಾಡದಿದ್ದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ವಕೀಲ ರವಿಚಂದ್ರ ಮಾಟಲದಿನ್ನಿ ಮಾತನಾಡಿ, ಒಳ ಮೀಸಲಾತಿ ಹೋರಾಟಕ್ಕೆ ಸಹಕಾರ ಅಗತ್ಯವಾಗಿದೆ ಎಂದರು.
ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಆ. 1ರಂದು ಕೊಪ್ಪಳದಲ್ಲಿ ನಡೆಯುವ ಹೋರಾಟಕ್ಕೆ ಮಾದಿಗ ಸಮುದಾಯದವರು ಪಕ್ಷಾತೀತವಾಗಿ ಬೆಂಬಲಿಸಿ, ಪಾಲ್ಗೊಳ್ಳಬೇಕು ಎಂದು ಮಾತಂಗ ಮಹಾಸಭಾದ ತಾಲೂಕು ಅಧ್ಯಕ್ಷ ನಿಂಗಪ್ಪ ಪೂಜಾರ ಹೇಳಿದರು.
ಜಿಪಂ ಮಾಜಿ ಸದಸ್ಯ ಪರಶುರಾಮ, ಪ್ರಮುಖರಾದ ಹನುಮಂತಪ್ಪ ಡಗ್ಗಿ, ಸುಭಾಷ ಕಂದಕೂರು, ಹನುಮಂತ ಬಸರಿಗಿಡ, ಶಾಂತಪ್ಪ ಬಸರಿಗಿಡ, ಸಣ್ಣ ಹನುಮಂತಪ್ಪ ಮರಳಿ, ಸಣ್ಣ ಹನುಮಂತ ಹುಲಿಹೈದರ್, ರಮೇಶ ಕಾಟಾಪುರ, ಕನಕಪ್ಪ ಮ್ಯಾಗಡೆ, ಯಮನೂರಪ್ಪ, ದುರಗಪ್ಪ ದೊಡ್ಡಮನಿ, ಗಂಗಾಧರ ಈಚನಾಳ, ಮರಿಯಪ್ಪ ಸಿರಿವಾರ, ವೀರೇಶ ನವಲಿ, ವೆಂಕಟೇಶ ಪೂಜಾರ, ಕಂಠೆಪ್ಪ ಮ್ಯಾಗಡೆ, ದುರುಗಪ್ಪ ಗೋರಾಳಕೇರಿ ಇತರರಿದ್ದರು.