ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಪುರಸಭಾ ಕಚೇರಿ ಮುಂದೆ ಸೇರಿದ ವೇದಿಕೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಟಿಪ್ಪು ಆಳ್ವಿಕೆ ಕಾಲದಲ್ಲಿ ವೀರ ಮದಕರಿ ನಾಯಕನನ್ನು ಬಂಧಿಸಿ ಇಲ್ಲಿನ ಜೈಲಿನಲ್ಲಿಟ್ಟು ಆತನಿಗೆ ವಿಷ ಪ್ರಾಶನ ಮಾಡಿಸಿದ್ದರಿಂದ ಮರಣ ಹೊಂದಿದ್ದರು ಎಂಬ ಇತಿಹಾಸವಿದೆ ಎಂದರು.
ಹಲವು ವರ್ಷಗಳಿಂದ ಮದಕರಿ ನಾಯಕನ ಹೆಸರಿನಲ್ಲಿ ಸಾರ್ವಜನಿಕವಾಗಿ ಕಾರ್ಯಕ್ರಮ ನಡೆಸಿಕೊಂಡು ಬರಲಾಗಿದೆ. ಹಲವು ಬಾರಿ ವೀರ ಮದಕರಿ ನಾಯಕ ಮರಣ ಹೊಂದಿದ ಸ್ಥಳದಲ್ಲಿ ಸ್ಮಾರಕ ನಿರ್ಮಿಸಲು ಪುರಸಭೆ ಕಚೇರಿಗೆ ಮನವಿ ಸಲ್ಲಿಸಲಾಗಿದ್ದರೂ ಈವರೆಗೆ ಸ್ಮಾರಕ ನಿರ್ಮಾಣ ಕೈಗೆತ್ತಿಕೊಂಡಿಲ್ಲ ಎಂದು ಆರೋಪಿಸಿದರು.ಈಗಲಾದರೂ ಪುರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಮಾರಕ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿ ಪ್ರಭಾರ ಅಧ್ಯಕ್ಷ ಎಂ.ಎಲ್ ದಿನೇಶ್ ಗೆ ಮನವಿ ಸಲ್ಲಿಸಿದರು.
ಈ ವೇಳೆ ಪುರಸಭೆ ಸದಸ್ಯರಾದ ಗಂಜಾಂ ಕೃಷ್ಣಪ್ಪ, ನಾಯಕ ಸಮಾಜದ ಮುಖಂಡರಾದ ಪೈಲ್ವಾನ್ ರಂಗಸ್ವಾಮಿ , ಶೇಖರ್, ಹಿಂದೂ ಜಾಗರಣ ವೇದಿಕೆ ಧರಸಗುಪ್ಪೆ ಸತೀಶ್, ಶ್ರೀರಂಗಪಟ್ಟಣ ನಗರ ಜೆಡಿಎಸ್ ಅಧ್ಯಕ್ಷ ಸಂಜು, ಯುವ ಕಾಂಗ್ರೆಸ್ ಅಧ್ಯಕ್ಷ ರಂಜು, ಮಂಡ್ಯದ ಮಾದೇಗೌಡ, ವಕೀಲರಾದ ಪ್ರಸನ್ನ, ಪಿ. ರಾಘು, ಲಕ್ಷ್ಮೀನಾರಾಯಣ, ಜೀವಧಾರೆ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ನಟರಾಜ್, ಕೆಂಪೇಗೌಡ ಯುವ ಒಕ್ಕಲಿಗರ ವೇದಿಕೆ ಅಧ್ಯಕ್ಷ ಮಹೇಶ್, ಶ್ರೀನಿವಾಸ್, ತ್ಯಾಗರಾಜ್, ರಾಜೇಶ್, ಶಾಂತು, ಉದಯ್ ಸೇರಿದಂತೆ ಇತರರು ಇದ್ದರು.