ಚಾಮರಾಜನಗರ:
ತಮಿಳುನಾಡಿನ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ 25 ಕ್ಕೂ ಅಧಿಕ ಜಾನುವಾರುಗಳನ್ನು ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಕ್ಷಿಸಿರುವ ಘಟನೆ ಬೆಂಗಳೂರು- ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರ ತಾಲೂಕಿನ ಅಂಕಶೆಟ್ಟಿಪುರ ಬಳಿ ನಡೆದಿದೆ.ಟಿ.ನರಸೀಪುರ ಕಡೆಯಿಂದ ತಮಿಳುನಾಡಿನ ಕಸಾಯಿಖಾನೆಗೆ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿಯಿಂದ ಹಿಂದೂ ಸಂಘಟನೆ ಕಾರ್ಯಕರ್ತರು 5 ವಾಹನಗಳನ್ನು ತಡೆದು 25 ಕ್ಕೂ ಅಧಿಕ ಎಮ್ಮೆ, ಹಸುಗಳನ್ನು ರಕ್ಷಣೆ ಮಾಡಿದ್ದಾರೆ.
ಹಿಂದೂ ಕಾರ್ಯಕರ್ತರು ಜಾನುವಾರು ಸಾಗಾಟ ತಡೆದಿರುವ ಮಾಹಿತಿ ಪಡೆದ ಚಾಮರಾಜನಗರ ಪೂರ್ವ ಠಾಣೆ ಪೊಲೀಸರು 5 ಗೂಡ್ಸ್ ವಾಹನ ಮತ್ತು 8 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.ಕೊಂಬಿನಲ್ಲೇ ತಿವಿಯಲು ಬಂದರಂತೆ:
ಸಂಘಟನೆಯ ರಾಮಕೃಷ್ಣ ಕಾರ್ಯಾಚರಣೆ ಬಗ್ಗೆ ಮಾತನಾಡಿ, ವಾಹನಗಳಲ್ಲಿ ಜಾನುವಾರುಗಳ ಕೊಂಬುಗಳನ್ನು ಕತ್ತರಿಸಿ ಇಟ್ಟುಕೊಂಡಿದ್ದು ವಾಹನಗಳನ್ನು ತಡೆಯಲು ಮುಂದಾದ ವೇಳೆ ಕೊಂಬಿನಲ್ಲೇ ದಾಳಿ ಮಾಡಲು ಮುಂದಾದರು. ಒಟ್ಟು 7 ವಾಹನಗಳಲ್ಲಿ 2 ವಾಹನ ಪರಾರಿಯಾಗಿದೆ, ರೈತರ ಸೋಗಿನಲ್ಲಿ ಕಸಾಯಿಖಾನೆಗೆ ಗೋ ಸಾಗಾಟ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಗಾಯತ್ರಿ ಎಂಬವರು ಮಾತನಾಡಿ, ಚಾಮರಾಜನಗರ ಎಸ್ಪಿ, ಐಜಿ ಹಾಗೂ ಡಿಐಜಿ ಅವರಿಗೂ ಅಕ್ರಮ ಗೋ ಸಾಗಾಟದ ಮಾಹಿತಿ ಕೊಟ್ಟಿದ್ದೆವು. 20 ದಿನವಾದರೂ ಕನಿಷ್ಠ ಪ್ರತ್ಯುತ್ತರ ಬರಲಿಲ್ಲ, ಚಾಮರಾಜನಗರ ಎಸ್ಪಿಗೆ ಅಕ್ರಮ ಗೋ ಸಾಗಾಟದ ಬಗ್ಗೆ ಮಾಹಿತಿ ಕೊಟ್ಟರೂ ಕ್ರಮ ಆಗದ ಹಿನ್ನೆಲೆ ನಾವೇ ಜಾನುವಾರುಗಳನ್ನು ರಕ್ಷಿಸಿದ್ದೇವೆ ಎಂದರು.
ಚಾಮರಾಜನಗರ ಪೂರ್ವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಈ ಸಂಬಂಧ ದೂರು ದಾಖಲಾಗಿದೆ.25ಸಿಎಚ್ಎನ್22
ಸುಮಾರು 25 ಕ್ಕೂ ಅಧಿಕ ಜಾನುವಾರನ್ನು ಹಿಂದೂ ರಾಷ್ಟ್ರ ರಕ್ಷಣಾ ಪಡೆ ಚಾಮರಾಜನಗರ ತಾಲೂಕಿನ ಅಂಕಶೆಟ್ಟಿಪುರ ಬಳಿ ರಕ್ಷಿಸಿದೆ.