ಸಮುದ್ರದ ಸುಳಿಗೆ ಸಿಲುಕಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ

KannadaprabhaNewsNetwork |  
Published : Oct 04, 2026, 02:30 AM IST
ಇಬ್ಬರು ಪ್ರವಾಸಿಗರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ. | Kannada Prabha

ಸಾರಾಂಶ

ಬೆಂಗಳೂರು ಮೂಲದ ಹರಿಬಾಬು(೩೦), ಶರವಾನ್(೩೦) ಜೀವಾಪಾಯದಿಂದ ಪಾರಾಗಿ ಬಂದ ಪ್ರವಾಸಿಗರಾಗಿದ್ದಾರೆ.

ಗೋಕರ್ಣ: ಸಮುದ್ರದ ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದ ಇಬ್ಬರು ಪ್ರವಾಸಿಗರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಕುಡ್ಲೆ ಕಡಲತೀರದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಮೂವರು ಪ್ರವಾಸಿಗರು ಈಜಾಡಲು ಸಮುದ್ರಕ್ಕೆ ತೆರಳಿದ್ದು, ಈ ವೇಳೆ ಇಬ್ಬರು ಸುಳಿಗೆ ಸಿಲುಕಿ ಜೀಪಾಯದಲ್ಲಿದ್ದರು. ಇದನ್ನು ಗಮನಿಸಿದ ಜೀವರಕ್ಷಕ ಸಿಬ್ಬಂದಿಗಳಾದ ಮಂಜುನಾಥ ಹರಿಕಂತ್ರ, ನಾಗೇಂದ್ರ ಕೂರ್ಲೆ ತಕ್ಷಣ ರಕ್ಷಣೆಗೆ ಧಾವಿಸಿದ್ದು, ಜೆಸ್ಕಿ ಡ್ರೈವರ್ ಪ್ರಕಾಶ ಲಮಾಣಿ ಜೊತೆಯಾಗಿ ದಡಕ್ಕೆ ತಂದು ಜೀವ ಉಳಿಸಿದ್ದಾರೆ.

ಪ್ರವಾಸಿ ಮಿತ್ರ ಸತೀಶ್ ನಾಯ್ಕ, ಮೈ ಸ್ಟಿಕ್ ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ರಕ್ಷಣಾ ಕಾರ್ಯಕ್ಕೆ ಸಹಾಯ ಮಾಡಿದ್ದಾರೆ. ಬೆಂಗಳೂರು ಮೂಲದ ಹರಿಬಾಬು(೩೦), ಶರವಾನ್(೩೦) ಜೀವಾಪಾಯದಿಂದ ಪಾರಾಗಿ ಬಂದ ಪ್ರವಾಸಿಗರಾಗಿದ್ದಾರೆ. ತಮ್ಮ ಜೀವದ ಹಂಗು ತೊರೆದು ಪ್ರವಾಸಿಗರ ಜೀವ ಉಳಿಸಿದ ರಕ್ಷಣಾ ತಂಡಕ್ಕೆ ಸಾರ್ವಜನಿಕರು, ಪ್ರವಾಸಿಗರು ಪ್ರಶಂಸಿಸಿದ್ದಾರೆ. ರಚನಾ ಗೌಡರ್‌ಗೆ ಬಂಗಾರದ ಪದಕ

ಸಿದ್ದಾಪುರ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಾರ್ಷಿಕ ಘಟಿಕೋತ್ಸವದಲ್ಲಿ ತಾಲೂಕಿನ ತ್ಯಾರ್ಸಿಯ ರಚನಾ ಪ್ರಕಾಶ ಗೌಡರ್ ರಾಜ್ಯಪಾಲರಿಂದ ಬಂಗಾರದ (ಗೋಲ್ಡ್ ಮೆಡಲ್) ಪಡೆದುಕೊಂಡಿದ್ದಾರೆ.ದಾವಣಗೆರೆಯ ಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇಂಡಸ್ಟ್ರಿಯಲ್ ಮತ್ತು ಪ್ರೊಡಕ್ಷನ್ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದ ರಚನಾ ಅವರಿಗೆ ರಾಜ್ಯದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಾರ್ಷಿಕ ಘಟಿಕೋತ್ಸವದಲ್ಲಿ ಕರ್ನಾಟಕದ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಹಾಗೂ ಉಪಮುಖ್ಯಮಂತ್ರಿ ‌ಜಿ. ಪರಮೇಶ್ವರ ಪ್ರಮಾಣಪತ್ರ ಹಾಗೂ ಪದಕ ಪ್ರದಾನ ಮಾಡಿದರು. ರಚನಾ ತ್ಯಾರ್ಸಿಯ ಪ್ರಕಾಶ ಗೌಡ ಹಾಗೂ ರೇಖಾ ದಂಪತಿಯ ಪುತ್ರಿ. ರಚನಾ ಅವರ ಸಾಧನೆಗೆ ಪಾಲಕರು, ಸಂಬಂಧಿಕರು, ಹಿತೈಷಿಗಳು ಹಾಗೂ ತ್ಯಾರ್ಸಿಯ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕಾಯ್ದೆ ತಿದ್ದುಪಡಿಗೆ ತೀವ್ರ ವಿರೋಧ
ಮೇವು ಕೊರತೆ: ರೈತರಲ್ಲಿ ಆತಂಕ