ಸತ್ಯದ ಹುಡುಕಾಟವೇ ಸಂಶೋಧನೆ: ಡಾ. ಹನುಮಾಕ್ಷಿ ಗೋಗಿ

KannadaprabhaNewsNetwork |  
Published : May 18, 2026, 03:30 AM IST
ಎಚ್೧೭.೫-ಡಿಎನ್‌ಡಿ೨: ನಗರದ ಸರಕಾರಿ ಪ್ರಥಮ ದರ್ಜಿ ಕಾಲೇಜನಲ್ಲಿ ಪಿ.ಎಂ.ಉಷಾ ಮತ್ತು ಐಕ್ಯೂಎಸಿ ಅಡಿಯಲ್ಲಿನ ಕಾರ್ಯಕ್ರಮ. | Kannada Prabha

ಸಾರಾಂಶ

ಸಂಶೋಧನೆ ಎಂದರೆ ಸತ್ಯದ ಹುಡಕಾಟ ಮತ್ತು ಜ್ಞಾನದ ನಿರ್ಮಾಣ. ಇದಕ್ಕೆ ಸತ್ಯವನ್ನು ಹೇಳುವ ಧೈರ್ಯ ಮತ್ತು ಹೊಸದನ್ನು ಸೃಷ್ಟಿಸುವ ಮಹತ್ವಾಕಾಂಕ್ಷೆ ಬೇಕು.

ಬಹು ಶಿಸ್ತುಗಳಲ್ಲಿ ಸಂಶೋಧನಾ ವಿಧಾನಗಳು ಎಂಬ ವಿಷಯದ ಕುರಿತು ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ದಾಂಡೇಲಿ

ಸಂಶೋಧನೆ ಎಂದರೆ ಸತ್ಯದ ಹುಡಕಾಟ ಮತ್ತು ಜ್ಞಾನದ ನಿರ್ಮಾಣ. ಇದಕ್ಕೆ ಸತ್ಯವನ್ನು ಹೇಳುವ ಧೈರ್ಯ ಮತ್ತು ಹೊಸದನ್ನು ಸೃಷ್ಟಿಸುವ ಮಹತ್ವಾಕಾಂಕ್ಷೆ ಬೇಕು ಎಂದು ಹಿರಿಯ ಸಂಶೋಧಕಿ ಡಾ. ಹನುಮಾಕ್ಷಿ ಗೋಗಿ ಹೇಳಿದರು.ನಗರದ ಸರಕಾರಿ ಪ್ರಥಮ ದರ್ಜಿ ಕಾಲೇಜನಲ್ಲಿ ಪಿ.ಎಂ. ಉಷಾ ಮತ್ತು ಐಕ್ಯೂಎಸಿ ಅಡಿಯಲ್ಲಿ ಆಯೋಜಿಸಿದ್ದ ಬಹು ಶಿಸ್ತುಗಳಲ್ಲಿ ಸಂಶೋಧನಾ ವಿಧಾನಗಳು ಎಂಬ ವಿಷಯದ ಕುರಿತು ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಸಂಶೋಧಕರಾಗಲು ಕುತೂಹಲ, ಪ್ರಾಮಾಣಿಕತೆ, ನಿರಂತರ ಕ್ರಿಯಾಶೀಲತೆ ಬೇಕು, ವಿದ್ಯಾರ್ಥಿ ಯುವಜನ ಸಂಶೋಧಕರಾಗುವ ಮೂಲಕ ದೇಶದ ಜ್ಞಾನಶಕ್ತಿ ಹೆಚ್ಚಿಸಬೇಕು ಎಂದು ಕರೆನೀಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎಂ.ಡಿ. ಒಕ್ಕುಂದ ಆದಿಮಾನವ ಕಾಲದಿಂದ ಕೃತಕ ಬುದ್ದಿಮತ್ತೆಯವರೆಗೆ ಬೆಂಕಿ ಚಕ್ರಡಿಂದ ಹಿಡಿಸು ಸಮಾಜಿಕ ಜಾಲತಾಣದವರೆಗೆ ಹೊಸದನ್ನು ಮನುಕುಲ ಸಂಶೋಧಿಸುತ್ತಲೇ ಬಂದಿದೆ. ಹೀಗಾಗಿ ಮಾನವ ಕುಲದ ಚರಿತ್ರೆ ಎಂದರೆ ಸಂಶೋಧನೆ ಚರಿತ್ರೆಯೇ ಆಗಿದೆ ಎಂದರು.ಪ್ರಾಸ್ತಾವಿಕ ಮಾತನಾಡಿದ ಡಾ. ವಿನಯಾ ನಾಯಕ ಸಂಶೋಧನೆಯ ಅಗತ್ಯ ಮತ್ತು ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದ ಆರಂಭದಲ್ಲಿ ವರ್ಷಾ ಕೋಲೆ ಪ್ರಾರ್ಥಿಸಿದರು. ತಸ್ಲೀಮಾ ಜೋರುಂ ಸ್ವಾಗತಿಸಿದರು. ಮನೋಹರ ಉಡಚಂಚಿ ಕಾರ್ಯಕ್ರಮ ನಿರೂಪಿಸಿದರು. ಡಾ. ಚಂದ್ರಶೇಖರ ಲಮಾಣಿ ವಂದಿಸಿದರು.ಮೂರು ಸಮಾಂತರ ಗೋಷ್ಠಿಗಳು ನಡೆದವು. ಡಾ. ರಂಗನಾಥ ಕಂಟಕನಕುಂಟೆ ಭಾಷೆ ಮತ್ತು ಸಾಹಿತ್ಯದಲ್ಲಿ ಸಂಶೋಧನಾ ವಿಧಾನಗಳು ಎಂಬ ವಿಷಯದ ಕುರಿತು, ಡಾ. ಪ್ರವೀಣ ಶಿಂಧೆ ವಾಣಿಜ್ಯ ಶಾಸ್ತ್ರದಲ್ಲಿ ಸಂಶೋಧನಾ ವಿಧಾನಗಲು ಎಂಬ ವಿಷಯದ ಕುರಿತು, ಇಬ್ರಾಹಿಂ ಸೌದಾಗರ ಸಮಾಜ ವಿಜ್ಞಾನದಲ್ಲಿ ಸಂಶೋಧನಾ ವಿದಾನಗಳು ಎಂಬ ವಿಷಯದ ಕುರಿತು ಮತ್ತು ಡಾ. ಸಾಗರ ಮಾನಗಾವೆ ವಿಜ್ಞಾನ ಹಾಗೂ ಸಂಶೋಧನಾ ವಿಧಾನಗಳು ಎಂಬ ವಿಷಯದ ಕುರಿತು ಕಾರ್ಯಾಗಾರ ನಡೆಸಿಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೀನಕೆರೆ ಗ್ರಾಮದಲ್ಲಿ 3 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ
ಡೆಂಘೀ, ಮಲೇರಿಯಾ ಮುಕ್ತ ಜಿಲ್ಲೆಯಾಗಲು ಶ್ರಮಿಸಿ: ಡಿಸಿ ಕವಿತಾ ಎಸ್.ಮನ್ನಿಕೇರಿ