ಸಂಶೋಧನೆ: ಶ್ರೀಶಾಗೆ ತೃತೀಯ ಬಹುಮಾನ

KannadaprabhaNewsNetwork |  
Published : Nov 26, 2026, 02:45 AM IST
ಕೊಡಗು ಜಿಲ್ಲೆಯ ಜವಾಹರ್ ನವೋದಯ ವಿದ್ಯಾಲಯ ಮಡಿಕೇರಿ ಗಾಳಿಬೀಡುವಿನ ವಿದ್ಯಾರ್ಥಿನಿ ಎ.ಎಸ್.ಶ್ರೀಶಾ ತೃತೀಯ ಬಹುಮಾನ | Kannada Prabha

ಸಾರಾಂಶ

ಬೆಂಗಳೂರಿನ ಚಾಣಕ್ಯ ವಿಶ್ವ ವಿದ್ಯಾನಿಲಯದಲ್ಲಿ ಆಯೋಜಿಸಲಾದ ವಿಕಸಿತ ಭಾರತಕ್ಕಾಗಿ ನವಿನ ಪಕೃತಿ ವಿಚಾರ ಸಂಕಿರಣದಲ್ಲಿ ‘ಕಾವೇರಿ ನದಿಯ ತೀರಗಳುʼ ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ರಾಷ್ಟ್ರಮಟ್ಟದಲ್ಲಿ 3ನೇ ಸ್ಥಾನವನ್ನು ಮಡಿಕೇರಿ ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯ ವಿದ್ಯಾರ್ಥಿನಿ ಎ.ಎಸ್.ಶ್ರೀಶಾ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.

ಸುಂಟಿಕೊಪ್ಪ : ಬೆಂಗಳೂರಿನ ಚಾಣಕ್ಯ ವಿಶ್ವ ವಿದ್ಯಾನಿಲಯದಲ್ಲಿ ಆಯೋಜಿಸಲಾದ ವಿಕಸಿತ ಭಾರತಕ್ಕಾಗಿ ನವಿನ ಪಕೃತಿ ವಿಚಾರ ಸಂಕಿರಣದಲ್ಲಿ ‘ಕಾವೇರಿ ನದಿಯ ತೀರಗಳುʼ ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ರಾಷ್ಟ್ರಮಟ್ಟದಲ್ಲಿ 3ನೇ ಸ್ಥಾನವನ್ನು ಮಡಿಕೇರಿ ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯ ವಿದ್ಯಾರ್ಥಿನಿ ಎ.ಎಸ್.ಶ್ರೀಶಾ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.

18 ರಿಂದ 20 ರವರೆಗೆ ಬೆಂಗಳೂರಿನ ಪ್ರತಿಷ್ಠಿತ ವಿಶ್ವವಿದ್ಯಾಲಯವಾದ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ನಡೆದ ‘ವಿಕಸಿತ ಭಾರತಕ್ಕಾಗಿ ನವೀನ ಪ್ರಕೃತಿ ಆಧಾರಿತ ತಂತ್ರಜ್ಞಾನಗಳೊಂದಿಗೆ ಜೌಗು ಪ್ರದೇಶಗಳ ಸಂರಕ್ಷಣೆ, ಸಾಂಪ್ರದಾಯಿಕ ಜ್ಞಾನದ 15ನೇ ದ್ವೈವಾರ್ಷಿಕ ಸರೋವರ ವಿಚಾರ ಸಂಕಿರಣ’ ಕಾರ್ಯಕ್ರಮವಾದ ‘ಸರೋವರ 2026’ ಈ ಕಾರ್ಯಕ್ರಮದ ಆಯೋಜಕರು ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು, ಸ್ಕೂಲ್ ಆಫ್ ಇಂಜಿನಿಯರಿಂಗ್ ಚಾಣಕ್ಯ ವಿಶ್ವವಿದ್ಯಾಲಯ ಬೆಂಗಳೂರು, ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರ (ಸಿಇಎಸ್‌ ಎಸ್‌), ಇಂಧನ ಮತ್ತು ನಗರ ಸಂಶೋಧನಾ ಗುಂಪು (ಆರ್‌ ಸಿಜಿಎಸ್‌ ಐಡಿ ಎಂ), ಐಐಟಿ ಖರಗ್ಪುರ, ಕರ್ನಾಟಕ ಪರಿಸರ ಸಂಶೋಧನಾ ಪ್ರತಿಷ್ಠಾನ, ಪ್ರಕೃತಿ ವಿಜ್ಞಾನ ಮತ್ತು ಸುಸ್ಥಿರತೆಯಲ್ಲಿ ಶಿಕ್ಷಣ ಮತ್ತು ಸಂಶೋಧನೆಗಾಗಿ ಪ್ರತಿಷ್ಠಾನ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ಇವರು ಸುಂಟಿಕೊಪ್ಪದ ನಿವಾಸಿ ಶ್ರೀಜು ಮತ್ತು ಸಂದ್ಯಾ ದಂಪತಿ ಪುತ್ರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5394 ಕೋಟೀಲಿ 2875 ಕಿಮೀ ರಸ್ತೆ ಅಭಿವೃದ್ಧಿ: ಕೃಷ್ಣ
ಭದ್ರಾ ಡ್ಯಾಂ ಬಲ, ಎಡದಂಡೆ ನಾಲೆಗಳಿಗೆ ನೀರು ಹರಿಸಿ