ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಒಕ್ಕೂಟದ ಪದಾಧಿಕಾರಿಗಳು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿ ಕಚೇರಿ ಸಹಾಯಕರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ವಕ್ಫ್ ಕಾಯಿದೆಯಿಂದ ರಾಜ್ಯದ ಸಾವಿರಾರು ರೈತರ ಜಮೀನುಗಳು ಮಠ-ಮಂದಿರಗಳು, ಸ್ಮಶಾನಗಳು, ಸಾರ್ವಜನಿಕ ಆಸ್ತಿ, ಸರ್ಕಾರಿ ಶಾಲೆಗಳು ಹೀಗೆ ಸಮಾಜದ ಎಲ್ಲಾ ವಿಭಾಗಗಳ ಆಸ್ತಿಗಳನ್ನು ವಕ್ಫ್ ಮಂಡಳಿ ಕಬಳಿಸುತ್ತಿದೆ. ಇದು ನಮ್ಮ ರಾಜ್ಯದ ಸಮಸ್ಯೆಯಲ್ಲ. ದೇಶದ ಸಮಸ್ಯೆ. ಈ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಮಂಡಿಸುತ್ತಿರುವಾಗ ರಾಜ್ಯ ಸರ್ಕಾರ ವಿಧಾನ ಮಂಡಲದಲ್ಲಿ ಕಾಯಿದೆಗೆ ತಿದ್ದುಪಡಿ ತರಬಾರದು ಎಂದು ನಿರ್ಣಯ ತೆಗೆದುಕೊಂಡಿರುವುದು ರೈತ ವಿರೋಧಿ, ಜನವಿರೋಧಿ ನಿರ್ಣಯವಾಗಿದೆ ಎಂದು ಕಿಡಿಕಾರಿದರು.ಮುಸ್ಲಿಂ ಮತ ಬ್ಯಾಂಕ್ ಉದ್ದೇಶಕ್ಕೆ, ಮುಸಲ್ಮಾನರನ್ನು ಓಲೈಸಲು ರಾಜ್ಯದ ರೈತರು ಹಾಗೂ ಬಹುಸಂಖ್ಯಾತರಿಗೆ ಸರ್ಕಾರ ದ್ರೋಹ ಮಾಡುತ್ತಿದೆ. ಹಿಂದುಳಿದ ವರ್ಗ, ಪ.ಜಾತಿ, ಪಂಗಡ ಹೀಗೆ ಎಲ್ಲಾ ವರ್ಗದವರ ಜಮೀನುಗಳನ್ನು ವಕ್ಫ್ ಮಂಡಳಿ ಕಬಳಿಸುತ್ತಿರುವಾಗ ಸರ್ಕಾರ ಇಂತಹದೊಂದು ನಿರ್ಣಯ ಕೈಗೊಂಡಿರುವುದು ಸಂವಿಧಾನ ವಿರೋಧಿ ಕಾಯ್ದೆಯನ್ನು ಬೆಂಬಲಿಸುತ್ತಿದೆ. ರಾಜ್ಯ ಸರ್ಕಾರ ಅಂಗೀಕರಿಸಿರುವ ನಿರ್ಣಯವನ್ನು ಅನುಮೋದಿಸದಂತೆ ರಾಜ್ಯಪಾಲರನ್ನು ಒತ್ತಾಯಿಸಿದರು.