ಕಾಲಮಿತಿಯಲ್ಲಿ ಅಹವಾಲು ಪರಿಹರಿಸಿ: ಲಾಡ್

KannadaprabhaNewsNetwork |  
Published : Jun 27, 2024, 01:07 AM IST
26ಡಿಡಬ್ಲೂಡಿ3ಕಿವಿ ಕೇಳದ ಮಗಳಿಗೆ ಮೊರಾರ್ಜಿ ದೇಸಾಯಿ ಶಾಲೆಯ ಪ್ರವೇಶಕ್ಕಾಗಿ ಜನತಾ ದರ್ಶನದಲ್ಲಿ ತಾಯಿಯೊಬ್ಬರು ಸಚಿವರಲ್ಲಿ ಅರ್ಜಿ ಸಲ್ಲಿಸಿದರು.  | Kannada Prabha

ಸಾರಾಂಶ

ಜನತಾ ದರ್ಶನದಲ್ಲಿ ಜಿಲ್ಲೆಯ ವಿವಿಧ ಸ್ಥಳಗಳಿಂದ ಆಗಮಿಸಿದ ಸಾರ್ವಜನಿಕರು, ಸಂಘ-ಸಂಸ್ಥೆ ಪ್ರತಿನಿಧಿಗಳು ತಮ್ಮ ಸಮಸ್ಯೆಗಳ ಬಗ್ಗೆ ಸಹಾಯ ಸೌಲಭ್ಯಗಳ ಬಗ್ಗೆ 175 ಅಹವಾಲು ಸಲ್ಲಿಸಿದರು.

ಧಾರವಾಡ:

ಜಿಲ್ಲಾಡಳಿತದ ವತಿಯಿಂದ ಬುಧವಾರ ಜಿಲ್ಲಾ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ 5ನೇ ಜನತಾ ದರ್ಶನದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಒಟ್ಟು 175 ಅಹವಾಲು ಸ್ವೀಕರಿಸಲಾಯಿತು. ಎಲ್ಲವನ್ನು ಪರಿಶೀಲಿಸಿ ಕಾಲಮಿತಿಯಲ್ಲಿ ಅಹವಾಲು ಪರಿಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧಿಕಾರಿಗಳಿಗೆ ಸೂಚಿಸಿದರು.

ಜನತಾ ದರ್ಶನದಲ್ಲಿ ಜಿಲ್ಲೆಯ ವಿವಿಧ ಸ್ಥಳಗಳಿಂದ ಆಗಮಿಸಿದ ಸಾರ್ವಜನಿಕರು, ಸಂಘ-ಸಂಸ್ಥೆ ಪ್ರತಿನಿಧಿಗಳು ತಮ್ಮ ಸಮಸ್ಯೆಗಳ ಬಗ್ಗೆ ಸಹಾಯ ಸೌಲಭ್ಯಗಳ ಬಗ್ಗೆ 175 ಅಹವಾಲು ಸಲ್ಲಿಸಿದರು. ಬೆಳಗ್ಗೆ 11.30ರಿಂದ ಮಧ್ಯಾಹ್ನ 3.30ರ ವರೆಗೆ ಸತತ ನಾಲ್ಕು ಗಂಟೆ ವರೆಗೆ ವೇದಿಕೆಯಲ್ಲಿ ನಿಂತು ಸರದಿಯಲ್ಲಿ ಬರುವ ಸಾರ್ವಜನಿಕರ ಸಮಸ್ಯೆಯನ್ನು ಸಚಿವ ಸಂತೋಷ ಲಾಡ್ ಹಾಗೂ ಜಿಲ್ಲಾಧಿಕಾರಿ ದಿವ್ಯಪ್ರಭು ತಾಳ್ಮೆಯಿಂದ ಆಲಿಸಿ ಅವರಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.

ಕಂದಾಯ ಇಲಾಖೆ 47, ನಗರಾಭಿವೃದ್ಧಿ ಇಲಾಖೆ 27, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಇಲಾಖೆ 30, ಶಿಕ್ಷಣ ಇಲಾಖೆ 16, ಲೋಕೋಪಯೋಗಿ ಇಲಾಖೆ 8, ಸಮಾಜ ಕಲ್ಯಾಣ ಇಲಾಖೆ 6, ಗೃಹ ಇಲಾಖೆ 5, ಕೃಷಿ ಇಲಾಖೆ 4, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 3, ಸಾರಿಗೆ ಇಲಾಖೆ 3, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 3, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ 3, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ 2, ಡಿಪಿಎಆರ್‌ 2, ಉನ್ನತ ಶಿಕ್ಷಣ ಇಲಾಖೆ 2, ವಸತಿ ಇಲಾಖೆ 2, ಕಾರ್ಮಿಕ ಇಲಾಖೆ 3, ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ 2, ಪಾಲಿಕೆ 1, ಹಣಕಾಸು ಇಲಾಖೆ 1, ಜಲಸಂಪನ್ಮೂಲ ಇಲಾಖೆ 1 ಹೀಗೆ ಒಟ್ಟು 175 ಅಹವಾಲು ಸ್ವೀಕರಿಸಲಾಯಿತು.

ಜನತಾ ದರ್ಶನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾನೂನಾತ್ಮಕ ಹಾಗೂ ಸ್ಥಳೀಯವಾಗಿ ಬಗೆಹರಿಸಬಹುದಾದ ಅಹವಾಲುಗಳನ್ನು ಜಿಲ್ಲಾಡಳಿತದ ಮಟ್ಟದಲ್ಲಿ ಬಗೆಹರಿಸಲಾಗುವುದು. ಉಳಿದವುಗಳಿಗೆ ಹಿಂಬರಹ ನೀಡಲಾಗುವುದು. ಅವಳಿ ನಗರಗಳಲ್ಲಿ ವಿವಿಧೆಡೆ ಕಾನೂನುಬಾಹಿರ ಅನಧೀಕೃತ ಬಡಾವಣೆ ನಿರ್ಮಿಸಿ ಜನರಿಗೆ ತೊಂದರೆಗಳಾಗಿವೆ. ಹೊಸ ಕಾನೂನುಗಳನ್ವಯ ಅನಧೀಕೃತ ಬಡಾವಣೆಗಳ ಸಮಸ್ಯೆ ಬಗೆಹರಿಸಲು ಸರ್ಕಾರದ ಗಮನಕ್ಕೆ ತರಲಾಗುವುದು. ಜಿಲ್ಲೆಯಲ್ಲಿ ಕಳೆದೊಂದು ವರ್ಷದಿಂದ ಕೈಗೊಂಡ ವಿವಿಧ ಇಲಾಖೆಗಳ ಕಾಮಗಾರಿಗಳನ್ನು ಸ್ವಂತ ತಾವೇ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಲಾಗುವುದೆಂದು ತಿಳಿಸಿದರು.

ಇದೇ ವೇಳೆ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಮೇಲ್ವಿಚಾರಕರಿಗೆ ಸಚಿವರು ಸ್ಮಾರ್ಟ್‌ ಫೋನ್ ವಿತರಿಸಿದರು. ಜಿಲ್ಲಾಧಿಕಾರಿ ದಿವ್ಯಪ್ರಭು, ಮಹಾನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಎಸ್ಪಿ ಡಾ. ಗೋಪಾಲ ಬ್ಯಾಕೋಡ, ಜಿಪಂ ಸಿಇಒ ಸ್ವರೂಪ ಟಿ.ಕೆ., ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಹುಡಾ ಆಯುಕ್ತ ಸಂತೋಷ ಬಿರಾದಾರ ವೇದಿಕೆಯಲ್ಲಿದ್ದರು. ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಜನತಾದರ್ಶನದಲ್ಲಿ ಭಾಗವಹಿಸಿದ್ದರು.ಜನತಾ ದರ್ಶನದಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿದ್ದು ಹೆಚ್ಚು ರಸ್ತೆ ನಿರ್ಮಾಣ, ಅಕ್ಕಪಕ್ಕದ ರಸ್ತೆಗಳ ವ್ಯಾಜ್ಯಗಳಿವೆ. ಸರ್ವೇ ಇಲಾಖೆ, ಉಪ ನೋಂದಣಿ, ಕಂದಾಯ ಇಲಾಖೆಗೆ ಸಂಬಂಧಿಸಿದ ವ್ಯಾಜ್ಯಗಳು ಹೆಚ್ಚಿವೆ. ಸ್ಥಳದಲ್ಲೇ ಎರಡ್ಮೂರು ಅರ್ಜಿ ಇತ್ಯರ್ಥವಾಗಿದ್ದು, ಮಾರ್ಗಸೂಚಿ ಪ್ರಕಾರ ತಿಂಗಳೊಳಗೆ ಪರಿಹಾರ ನೀಡುತ್ತೇವೆ ಎಂದು ಸಚಿವ ಸಂತೋಷ ಲಾಡ್‌ ಹೇಳಿದರು.

ಏನೇನು ಸಮಸ್ಯೆಗಳು

ಬಾಲಬಳಗ ಶಾಲೆಯ ಶಿಕ್ಷಕಿಯೊಬ್ಬರನ್ನು ಅಮಾನತು ಮಾಡಿರುವ ವಿಷಯವಾಗಿ ಡಿಡಿಪಿಐ ಎಸ್‌.ಎಸ್‌. ಕೆಳದಿಮಠ ಅವರನ್ನು ಸಚಿವ ಲಾಡ್‌, ಜಿಲ್ಲಾಧಿಕಾರಿ ದಿವ್ಯಪ್ರಭು ತರಾಟೆಗೆ ತೆಗೆದುಕೊಂಡರು. ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ನೀಡದೇ ವಿಳಂಬ ಮಾಡುತ್ತಿರುವುದು ಏತಕ್ಕೆ? ಶಾಲೆ ಹಾಗೂ ಶಿಕ್ಷಕಿಯನ್ನು ಕೂರಿಸಿ ಸಮಸ್ಯೆಗೆ ಪರಿಹಾರ ಒದಗಿಸಲು ಸೂಚಿಸಿದರು. ಸಮುದಾಯದ ಅನುದಾನಕ್ಕೆ ನಾಗೇಶ ಮಾನ್ವಿ ಮನವಿ ನೀಡಿದರೆ, ಪ್ರೇಮಾ ಬೆಂಡಿಗೇರಿ ಅವರು ಮಗಳಿಗೆ ಕಿವಿ ಕೇಳೋದಿಲ್ಲ. ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಪ್ರವೇಶ ಕಲ್ಪಿಸಿಕೊಡಲು ಸಚಿವರಲ್ಲಿ ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ