ಶಿಕಾರಿಪುರ: ಮಹಿಳೆಯರ ಕಾರ್ಯ ಶಕ್ತಿ ಅದ್ಬುತವಾಗಿದ್ದು, ಕೇವಲ ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತವಾಗಿದ್ದ ಮಹಿಳೆಯರು ಪ್ರಸ್ತುತ ಎಲ್ಲ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಯಿಂದ ಸಮರ್ಥ ರೀತಿಯಲ್ಲಿ ಸಾಧಿಸಿ ತೋರಿಸುವುದಾಗಿ ಈಗಾಗಲೇ ನಿರೂಪಿಸಿದ್ದಾರೆ ಎಂದು ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ವ್ಯವಸ್ಥಾಪಕ ರಾಮ ನಾಗಪ್ಪ ಮೊಗೇರಾ ಹೆಮ್ಮೆ ವ್ಯಕ್ತಪಡಿಸಿದರು.
ಮಹಿಳಾ ದಿನಾಚರಣೆ ಮಹಿಳೆಯರ ಆತ್ಮಸ್ಥೈರ್ಯ ಹೆಚ್ಚಳಗೊಳಿಸುವ ಸುಸಂದರ್ಭವಾಗಿದ್ದು, ಸಮಾಜದಲ್ಲಿ ಮಹಿಳೆಯರು ಅಬಲೆಯರಲ್ಲ ಸಬಲೆಯರು ಎಂದು ಅರಿವು ಮೂಡಿಸಿ ಮಹಿಳೆಯರ ಅಂತಃಶಕ್ತಿಯನ್ನು ಜಾಗೃತಗೊಳಿಸಲು ಆಯೋಜಿಸಲಾಗಿದೆ ಎಂದ ಅವರು ಹೆಣ್ಣು ಮಕ್ಕಳು ಕೀಳರಿಮೆಯಿಂದ ಹೊರಬಂದು ಎಂತಹದ್ದೇ ಸಮಸ್ಯೆ ಇರಲಿ ಅದನ್ನು ಎದುರಿಸಿ ಸಾಧಿಸಿ ತೋರಿಸುತ್ತೇವೆ ಎಂಬ ದೃಡ ಸಂಕಲ್ಪ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಶಿರಾಳಕೊಪ್ಪ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ರಿಜಿಸ್ಟರ್ ನಾಗರತ್ನ ಸಿ, ಬ್ಯಾಂಕಿನ ಸಿಬ್ಬಂದಿ ಎನ್.ಶಶಾಂಕ್, ನವೀನ್ ಕುಮಾರ್, ಎಚ್.ಆರ್.ಆದರ್ಶ, ಶಬಾನ, ರಂಜಿತ, ಸುನಿತಾ, ಐಶ್ವರ್ಯ, ಪ್ರಿಯಾಂಕ, ಪ್ರಭಾವತಿ, ಚಂದನ, ಸುಷ್ಮಾ, ವಸಂತನಾಯ್ಕ ಸಹಿತ ಬ್ಯಾಂಕಿನ ಸಿಬ್ಬಂದಿ ಹಾಗೂ ಗ್ರಾಹಕರು ಹಾಜರಿದ್ದರು.