ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಇಲ್ಲಿಗೆ ಸಮೀಪದ ಉಕ್ಕಡಗಾತ್ರಿ ಶ್ರೀ ಕರಿಬಸವೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರಜಾ ಸೇವಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ಸಾರ್ವಜನಿಕರು ತಮ್ಮ ಸಮಸ್ಯೆಗಳ ಬಗ್ಗೆ ಅರ್ಜಿ ಸಲ್ಲಿಸುತ್ತಾರೆ. ತಾಲೂಕು ಆಡಳಿತದಿಂದ ಪರಿಹರಿಸುವಂತಹ ಸಮಸ್ಯೆಗಳಿಗೆ ಪರಿಹಾರ ಸೂಚಿಸಲಾಗುವುದು. ಉಳಿದವುಗಳನ್ನು ಜಿಲ್ಲಾಡಳಿತಕ್ಕೆ ಶಿಫಾರಸು ಮಾಡಲಾಗುವುದು. ಒಟ್ಟಾರೆ ಜನಸಾಮಾನ್ಯರ ನೆರವಿಗೆ ಎಲ್ಲ ಇಲಾಖೆಗಳು ಸ್ಪಂದಿಸುತ್ತವೆ. ಸಂಜೆ 4 ಗಂಟೆವರೆಗೂ ಪ್ರಜಾ ಸೇವಾ ಅರ್ಜಿಗಳನ್ನು ಪಡೆಯಲಾಗುವುದು ಎಂದು ತಿಳಿಸಿದರು.
ಕುಡಿಯುವ ನೀರು, ರಸ್ತೆ, ಗ್ರಾಮದ ಚರಂಡಿಗಳಿಂದ ಕೊಳಚೆ ನೀರು ತುಂಗಭದ್ರಾ ನದಿಗೆ ಸೇರುತ್ತಿದೆ. ಅದನ್ನು ಶುದ್ಧಗೊಳಿಸಿ ನದಿಗೆ ಬಿಡುವಂತಾಗಬೇಕು ಎಂದು ತಿಳಸಿದ ಶ್ರೀ ಕರಿಬಸವೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಎಸ್.ಸುರೇಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಿಗಳಿ ಚಂದ್ರಗೌಡ ಮತ್ತು ಸದಸ್ಯರು ಅಧಿಕಾರಿಗಳ ಗಮನ ಸೆಳೆದರು. ಅದಕ್ಕೆ ಸ್ಪಂದಿಸಿದ ಅಧಿಕಾರಿಗಳು ಸೂಕ್ತ ಕ್ರಮ ವಹಿಸುವುದಾಗಿ ತಿಳಿಸಿದರು.ಅಸಮರ್ಪಕ ವಿದ್ಯುತ್ ಪೂರೈಕೆ, ರಸ್ತೆ, ಆರೋಗ್ಯ ಮುಂತಾದ ವಿಚಾರಗಳ ಬಗ್ಗೆ 55 ಅರ್ಜಿಗಳು ಸ್ವೀಕೃತಿಗೊಂಡವು. ವಿಧಾನ ಪರಿಷತ್ ನೀತಿ ಸಂಹಿತೆ ಇರುವುದರಿಂದ ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಿರಲಿಲ್ಲ.
- - -