
ನಿಡುವಳ್ಳಿ ಗ್ರಾಮದಲ್ಲಿ ಹೋಬಳಿ ಮಟ್ಟದ ‘ಪ್ರಜಾಸೇವೆ ಆಂದೋಲನ’ ಉದ್ಘಾಟನೆ
ಕಡೂರು ತಾಲೂಕಿನ ಪಂಚನಹಳ್ಳಿ ಹೋಬಳಿ ನಿಡುವಳ್ಳಿ ಗ್ರಾಮದ ಶ್ರೀ ಕರಿಯಮ್ಮ ದೇವಿ ದೇವಾಲಯ ಆವರಣದಲ್ಲಿ ಶನಿವಾರ ನಡೆದ ಹೋಬಳಿ ಮಟ್ಟದ ‘ಪ್ರಜಾಸೇವೆ ಆಂದೋಲನ’ ಉದ್ಘಾಟಿಸಿ ಮಾತನಾಡಿದರು. ಸರ್ಕಾರದ ‘ಪ್ರಜಾ ಸೇವೆ’ ಆಂದೋಲನದಡಿ ಪ್ರತಿ ಶನಿವಾರ ಒಂದೊಂದು ಹೋಬಳಿಯಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಜನರ ಬಳಿಗೆ ತೆರಳಿ ಸಮಸ್ಯೆ ಆಲಿಸುತ್ತಿದ್ದಾರೆ. ಕಡೂರು ಕ್ಷೇತ್ರದಲ್ಲಿ ಕಳೆದ ಒಂದು ವರ್ಷದಿಂದ ‘ಶಾಸಕರ ನಡೆ ಪಂಚಾಯಿತಿ ಕಡೆ’ ಕಾರ್ಯಕ್ರಮದ ಮೂಲಕ ೨೬ ಗ್ರಾಪಂಗಳಲ್ಲಿ ೩೦ಕ್ಕೂ ಹೆಚ್ಚು ಇಲಾಖೆಗಳ ಅಧಿಕಾರಿಗಳೊಂದಿಗೆ ಸಾರ್ವಜನಿಕರ ಕುಂದುಕೊರತೆ ಆಲಿಸಿ ಪರಿಹರಿಸಲಾಗಿದೆ ಎಂದರು.
ಪಂಚನಹಳ್ಳಿ ಹೋಬಳಿಯಲ್ಲಿ ವೈದ್ಯರ ಕೊರತೆ ನಿವಾರಣೆ, ಕ್ರೀಡಾಂಗಣದಲ್ಲಿದ್ದ ವಿದ್ಯುತ್ ಕಂಬಗಳ ತೆರವು, ಬಸವದೇವ ರಸ್ತೆ ಸಮಸ್ಯೆ ಪರಿಹಾರ ಹಾಗೂ ಸುಮಾರು ₹೨ ಕೋಟಿ ವೆಚ್ಚದಲ್ಲಿ ಪಂಚನಹಳ್ಳಿಯಿಂದ ನಿಡುವಳ್ಳಿ-ತಾಂಡ್ಯಕ್ಕೆ ರಸ್ತೆ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ನಿಡುವಳ್ಳಿಯಲ್ಲಿ ಆಹಾರ, ಬಿಸಿಎಂ, ಕೆಇಬಿ, ಅರಣ್ಯ, ಪೊಲೀಸ್, ಕುಡಿವ ನೀರು, ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸೇರಿ ದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಜರಿದ್ದು, ಸಾರ್ವಜನಿಕರು ಯಾವುದೇ ಹಿಂಜರಿಕೆಯಿಲ್ಲದೆ ಸಮಸ್ಯೆ ಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಪಡೆಯಬೇಕು ಎಂದು ಹೇಳಿದರು.
ನಿಡುವಳ್ಳಿ ವ್ಯಾಪ್ತಿಯಲ್ಲಿ ₹೨೨ ಕೋಟಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ಕಾಮಗಾರಿ ಆರಂಭವಾಗಿದ್ದು, ₹೨೦ ಕೋಟಿ ವೆಚ್ಚದಲ್ಲಿ ಪಂಚನಹಳ್ಳಿ-ಸಿಂಗಟಗೆರೆ ರಸ್ತೆ ಅಭಿವೃದ್ಧಿ ಹಾಗೂ ₹೨ ಕೋಟಿ ವೆಚ್ಚದಲ್ಲಿ ನಿಡುವಳ್ಳಿ ತಾಂಡ್ಯ-ಪಂಚನಹಳ್ಳಿ ರಸ್ತೆ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು.ಕಡೂರಿನಲ್ಲಿ ಗಾರ್ಮೆಂಟ್ಸ್ ಕಾರ್ಖಾನೆ ಆರಂಭವಾಗಿದೆ. ಸುಮಾರು ೬,೫೦೦ ಮಹಿಳೆಯರು ಉದ್ಯೋಗ ಪಡೆದಿದ್ದಾರೆ. ಉದ್ಯೋಗ ಸೃಷ್ಟಿ ಹಾಗೂ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.
ತಹಸೀಲ್ದಾರ್ ಪೂರ್ಣಿಮಾ, ಡಿಎಫ್‌ಒ ಬೋರಲಿಂಗಯ್ಯ, ತಾಪಂ ಇಒ ಪ್ರವೀಣ್, ಕಾರ್ಯಪಾಲಕ ಅಭಿಯಂತರ ಚಿದಾ ನಂದ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಯೋಗಾನಂದ್, ಎಪಿಎಂಸಿ ಅಧ್ಯಕ್ಷ ಜಿ.ಎಸ್. ಗೌಡ, ಬಿಸಿಎಂ ಅಧಿಕಾರಿ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.