ಪರಿಸರ ನಿರ್ಲಕ್ಷ್ಯದಿಂದ ಸಂಪನ್ಮೂಲ ಕೊರತೆ

KannadaprabhaNewsNetwork |  
Published : Jun 18, 2024, 12:49 AM IST
ಸಿಂದಗಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ: ಪರಿಸರವನ್ನು ರಕ್ಷಿಸುವ ಜವಾಬ್ದಾರಿ ಪ್ರತಿ ನಾಗರಿಕರ ಮೇಲೆಯೂ ಇದೆ. ಆದರೆ ಬಹುಪಾಲು ಜನರು ಪರಿಸರ ರಕ್ಷಣೆ ಮಾಡುತ್ತಿಲ್ಲ. ಇದರಿಂದ ಇಂದು ಸಂಪನ್ಮೂಲಗಳ ಕೊರತೆಯನ್ನು ಅನುಭವಿಸುತ್ತಿದ್ದೇವೆ ಎಂದು ಕರ್ನಾಟಕ ಜನ ಜಾಗೃತಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನೀಲಮ್ಮ ಯಡ್ರಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ:

ಪರಿಸರವನ್ನು ರಕ್ಷಿಸುವ ಜವಾಬ್ದಾರಿ ಪ್ರತಿ ನಾಗರಿಕರ ಮೇಲೆಯೂ ಇದೆ. ಆದರೆ ಬಹುಪಾಲು ಜನರು ಪರಿಸರ ರಕ್ಷಣೆ ಮಾಡುತ್ತಿಲ್ಲ. ಇದರಿಂದ ಇಂದು ಸಂಪನ್ಮೂಲಗಳ ಕೊರತೆಯನ್ನು ಅನುಭವಿಸುತ್ತಿದ್ದೇವೆ ಎಂದು ಕರ್ನಾಟಕ ಜನ ಜಾಗೃತಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನೀಲಮ್ಮ ಯಡ್ರಾಮಿ ಹೇಳಿದರು.

ಕರ್ನಾಟಕ ಜನ ಜಾಗೃತಿ ಮಹಿಳಾ ಘಟಕದಿಂದ ಪಟ್ಟಣದ ಶಿವಶಂಕರ ಬಡಾವಣೆಯ ಶ್ರೀ ಅಂಬಾಬಾಯಿ ದೇವಸ್ಥಾನದಲ್ಲಿ ವಿಶ್ವ ಪರಿಸರ ದಿನಾಚಾರಣೆಯ ಅಂಗವಾಗಿ ಸೋಮವಾರ ಗಿಡ ನೆಟ್ಟು,ಜೀವ ಉಳಿಸಿ ಕಾರ್ಯಕ್ರಮಕ್ಕೆ ಸಸಿಗಳನ್ನು ವಿತರಿಸಿ ಮಾತನಾಡಿದರು. ಗಿಡ ಮರಗಳನ್ನು ಬೆಳೆಸುವ ಕಾರ್ಯ ಕೇವಲ ಒಂದು ದಿನಕ್ಕೆ ಸಿಮೀತವಾಗಬಾರದು. ಪ್ರಾಥಮಿಕ ಶಾಲಾ ಶಿಕ್ಷಣದ ಹಂತದಲ್ಲಿಯೇ ಪರಿಸರದ ಬಗ್ಗೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಪಠ್ಯದಲ್ಲಿ ಕಡ್ಡಾಯವಾಗಿ ಮೂಡಿಬರಬೇಕು. ಇಂದಿನ ವೈಜ್ಞಾನಿಕ ಜಗತ್ತಿನಲ್ಲಿ ಮಾನವ ತನ್ನ ಸ್ವಾರ್ಥಕ್ಕೆ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಈ ಕಾರ್ಯ ಹೀಗೆ ಮುಂದುವರೆದಲ್ಲಿ ನಮ್ಮ ಅಸ್ಥಿತ್ವವನ್ನು ನಾವೇ ಕಳೆದುಕೊಳ್ಳುತ್ತೇವೆ ಎಂದು ಕಳವಳ ವ್ಯಕ್ತಪಡಿಸಿದರು.ಈ ವೇಳೆ ಘಟಕದ ಜಿಲ್ಲಾ ಖಜಾಂಚಿ ಅನುಸುಯಾ ಪರಗೊಂಡ ಮಾತನಾಡಿ, ಮಾನವನ ಕಲ್ಯಾಣಕ್ಕೆ ಪರಿಸರ ಎಲ್ಲವನ್ನು ನೀಡುತ್ತಿದೆ. ಆದರೆ ಪರಿಸರವನ್ನು ಮಾನವ ಪ್ರೀತಿಸುತ್ತಿಲ್ಲ. ನಮ್ಮ ಎಲ್ಲ ಜೀವನ ಪರಿಸರದ ಮೇಲೆಯೆ ನಿಂತಿದ್ದು, ಪರಿಸರದ ಆಂದೋಲನಗಳನ್ನು ರೂಪಿಸಬೇಕಿದೆ. ಪ್ರತಿಯೊಬ್ಬರು ಗಿಡ ಮರಗಳನ್ನು ನೆಟ್ಟು ಅವುಗಳ ಪಾಲನೆ ಪೋಷಣೆಯನ್ನು ಮಾಡಬೇಕು ಎಂದು ಕರೆ ನೀಡಿದರು.

ಈ ಸಂಧರ್ಭದಲ್ಲಿ ಸುಮಾರು 150 ಕ್ಕೂ ಹೆಚ್ಚು ಸಸಿಗಳನ್ನು ವಿತರಣೆ ಮಾಡಲಾಯಿತು. ಕಾರ್ಯಾಕ್ರಮದಲ್ಲಿ ತೇಜಶ್ವಿನಿ, ಲಕ್ಕಮ್ಮ ಬಿರಾದಾರ, ಸತಿಯಾ ಶೇಖ, ಸರಸ್ವತಿ ಮಾಶ್ಯಾಳ, ಲಕ್ಷ್ಮೀ ಕಲಾಲ, ಸುಮಿತ್ರಾ ನಿಪ್ಪಾಣಿ, ಸವಿತಾ ಗಾನೂರ, ಸುಮಾ ಗುಳ್ಳೂರ, ಸಾವಿತ್ರಿ ಬಂಡರಕೋಟೆ, ಮಹಾದೇವಿ ದಿಂಡವಾರ, ಮಲಕಮ್ಮ ಬಟಕೇರಿ, ನೀಲಮ್ಮ ಪ್ಯಾಟಿ ಸೇರಿದಂತೆ ಇತರರು ಇದ್ದರು.ಪರಿಸರವನ್ನು ರಕ್ಷಿಸುವ ಜವಾಬ್ದಾರಿ ಪ್ರತಿ ನಾಗರಿಕರ ಮೇಲೆಯೂ ಇದೆ. ಆದರೆ ಬಹುಪಾಲು ಜನರು ಪರಿಸರ ರಕ್ಷಣೆ ಮಾಡುತ್ತಿಲ್ಲ. ಇದರಿಂದ ಇಂದು ಸಂಪನ್ಮೂಲಗಳ ಕೊರತೆಯನ್ನು ಅನುಭವಿಸುತ್ತಿದ್ದೇವೆ ಎಂದು ಕರ್ನಾಟಕ ಜನ ಜಾಗೃತಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನೀಲಮ್ಮ ಯಡ್ರಾಮಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಿಥಿ ಚಿತ್ರದ ನಟ ‘ಸೆಂಚುರಿ’ಗೌಡ ಸೊಂಟದ ಮೂಳೆ ಮುರಿದು ನಿಧನ
ರಾಜ್ಯ ರಾಜಕಾರಣದಲ್ಲಿ ನನ್ನ ಕ್ಷೇತ್ರ ಚಾಮರಾಜನಗರ : ಪ್ರತಾಪ್‌ ಸಿಂಹ