ಕನ್ನಡಪ್ರಭವಾರ್ತೆ ತೀರ್ಥಹಳ್ಳಿ
ಮಂಡಲ ಬಿಜೆಪಿ ವತಿಯಿಂದ ಸೋಮವಾರ ಪಟ್ಟಣದ ವಿಧ್ಯಾಧಿರಾಜ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಸಭೆಯಲ್ಲಿ ಮಾತನಾಡಿ, ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸುಭದ್ರ ಸರ್ಕಾರ ಹಾಗೂ ಭಾರತದ ನಿರ್ಮಾಣದ ಸಲುವಾಗಿ ಪಕ್ಷದ ಕಾರ್ಯಕರ್ತರು ಹಿಂದಿನ ಸರ್ಕಾರದ ಸಾಧನೆಗಳನ್ನು ತಿಳಿಸುವ ಸಲುವಾಗಿ ಮತದಾರರ ಮನೆಗಳಿಗೆ ತೆರಳಿ ಪಕ್ಷ ಗೆಲ್ಲಿಸುವಲ್ಲಿ ಮಾಡಿರುವ ಕಾರ್ಯ ಸ್ಮರಣೀಯವಾಗಿದ್ದು ಕಾರ್ಯಕರ್ತರಿಗೆ ಋಣಿಯಾಗಿದ್ದೇನೆ ಎಂದು ಹೇಳಿದರು.
ಮತದಾರರಿಂದ ತಿರಸ್ಕೃತಗೊಂಡಿರುವ ಕಾಂಗ್ರೆಸ್ಸಿಗರು ಜನರಿಗೆ ನೀಡಿರುವ ಸವಲತ್ತು ತೆರಿಗೆ ಹಣದಿಂದ ಎಂಬುದನ್ನು ಮರೆತು, ಸೋಲಿನ ಹತಾಶೆಯಲ್ಲಿ ಕ್ಷುಲ್ಲಕ ಹೇಳಿಕೆ ನೀಡುತ್ತಿದ್ದಾರೆ. ಭ್ರಷ್ಟಾಚಾರದ ಹಣವನ್ನು ತೆಲಂಗಾಣಕ್ಕೆ ಸಾಗಿಸಿದ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೂ ವೇತನ ನೀಡಲಾಗದ ಜನವಿರೋಧಿ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ ಎಂದರು.ಸಂಸದರಿಗೆ ವಾರ್ಷಿಕ ₹5 ಕೋಟಿ ಅನುದಾನ ನೀಡಲಾಗುತ್ತದೆ. ಈ ಅನುದಾನದಲ್ಲಿ ರಾಷ್ಟ್ರೀಯ ಹೆದ್ದಾರಿಯಂತಹ ಪ್ರಮುಖ ಕಾರ್ಯಗಳಿಗೆ ಆದ್ಯತೆ ನೀಡಬೇಕಾಗಿದೆ. ಉಳಿದ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನ ಅವಲಂಬಿಸುವುದು ಅನಿವಾರ್ಯ ಸಂಸದರ ಹೊಣೆ ಮುಖ್ಯವಾಗಿ ದೇಶದ ಅಗತ್ಯಗನುಗುಣವಾಗಿ ಕಾನೂನು ರಚನೆ ಮಾಡುವುದು ಎಂದು ಹೇಳಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಕುಣಜೆ ಕಿರಣ್ ಮಾತನಾಡಿ, ಜೆಡಿಎಸ್ ಎಲ್ಲಿದೆ ಎಂದು ಕೇಳಿದವರಿಗೆ ಈ ಚುನಾವಣೆ ಫಲಿತಾಂಶ ಉತ್ತರ ನೀಡಿದೆ. ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮೋಸದಿಂದ ಒಂದು ಸ್ಥಾನ ಗೆದ್ದಿದೆ. ಈ ಚುನಾವಣೆಯಲ್ಲಿ ಬಿಜೆಪಿ ಜೊತೆ ಸೇರಿ ಕೆಲಸ ಮಾಡುವ ಸೌಭಾಗ್ಯ ದೊರೆತಿದ್ದು ಬಿಜೆಪಿಯವರು ಕೊಡುತ್ತಿರುವ ಪ್ರೀತಿಗೆ ಮನಸೋತಿದ್ದೇವೆ. ಮತ್ತು ಈ ಹೊಂದಾಣಿಕೆ ಶಾಶ್ವತವಾಗಿ ಮುಂದುವರೆಯಲಿದೆ ಎಂದರು.
ವಿಧಾನಪರಿಷತ್ ಸದಸ್ಯ ಭೋಜೇಗೌಡ ಮಾತನಾಡಿ, ದೇಶಕ್ಕೆ ನರೇಂದ್ರ ಮೋದಿಯವರ ನೇತೃತ್ವ ಅನಿವಾರ್ಯವಾಗಿದೆ. ಈ ಹಿನ್ನೆಲೆ ಬಿಜೆಪಿ ಜೆಡಿಎಸ್ ಮೈತ್ರಿ ಸಹಕಾರಿಯಾಗಿದ್ದು ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ಕಾರ್ಯಕರ್ತರ ಭಾವನೆಗಳಿಗೂ ಸ್ಪಂದಿಸುವ ಅಗತ್ಯವಿದೆ. ಮತ್ತು ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ನಿರ್ನಾಮ ಮಾಡಬೇಕಿದೆ ಎಂದರು.
ವೇದಿಕೆಯಲ್ಲಿ ರಾಘವೇಂದ್ರ ನಾಯಕ್, ಬಿ.ಸ್ವಾಮಿರಾವ್, ಮಹೇಶ್ ಹುಲ್ಕುಳಿ, ರತ್ನಾಕರ ಶೆಣೈ, ಬೇಗುವಳ್ಳಿ ಸತೀಶ್, ಜೆಡಿಎಸ್ ಗುರುದತ್, ಸಾಲೇಕೊಪ್ಪ ರಾಮಚಂದ್ರ, ಶೈಲಾ ನಾಗರಾಜ್, ಯಶೋದಾ ಮಂಜುನಾಥ್ ಇದ್ದರು. ಮೋಹನ ಭಟ್ ಸ್ವಾಗತಿಸಿ ರಕ್ಷಿತ್ ಮೇಗರವಳ್ಳಿ ನಿರೂಪಿಸಿದರು.