ಧಾರವಾಡ:
ಇಲ್ಲಿಯ ಸಂಪಿಗೆ ನಗರದ ಬಸವರಡ್ಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಉಪನ್ಯಾಸದಲ್ಲಿ ಮಾತನಾಡಿದರು.
ಹೂವಿಗೆ ಪರಿಮಳವಿದ್ದಂತೆ ವ್ಯಕ್ತಿಗಳಿಗೂ ವ್ಯಕ್ತಿತ್ವ ಮುಖ್ಯ. ವ್ಯಕ್ತಿಗೆ ಬೆಲೆ ಕೊಡುವುದಕ್ಕಿಂತ ಅವನಲ್ಲಿರುವ ಮೌಲ್ಯಾಧಾರಿತ ವ್ಯಕ್ತಿತ್ವಕ್ಕೆ ಬೆಲೆ ಕೊಡುವುದು ಮುಖ್ಯ. ಸುಂದರವಾದ ವ್ಯಕ್ತಿತ್ವ ರೂಪಿಸಿಕೊಳ್ಳಬೇಕಾದರೆ ವಿದ್ಯಾರ್ಥಿಗಳು ಏಕಾಗ್ರತೆ, ಆತ್ಮವಿಶ್ವಾಸ, ಶ್ರದ್ಧೆ, ಪರೋಪಕಾರ, ಸಾರ್ಥಕ ಜೀವನ, ದೇಶಪ್ರೇಮ, ಪೌರಪ್ರಜ್ಞೆಗಳನ್ನು ವಿದ್ಯಾರ್ಥಿ ಜೀವನದಲ್ಲಿಯೇ ಅಳವಡಿಸಿಕೊಳ್ಳಬೇಕು ಎಂದರು.ವಿದ್ಯಾರ್ಥಿಗಳು ಬಾಹ್ಯ ಸೌಂದರ್ಯಕ್ಕೆ ಬೆರಗಾಗದೆ, ಹೃದಯ ಸೌಂದರ್ಯಕ್ಕೆ ಹಾಗೂ ಸಮಯ ಪರಿಪಾಲನೆಗೆ ಆದ್ಯತೆ ನೀಡಬೇಕು. ವಿನಾಕಾರಣ ಹಾಳುಹರಟೆ ಸಲ್ಲದು. ಸಿಕ್ಕಸಮಯ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಜನೆ ಮಾಡಿ ಶಾಂತಿ, ಸಮಾಧಾನ ಗುಣ ವ್ಯಕ್ತಿತ್ವಕ್ಕೆ ಮೆರಗು ತರುತ್ತದೆ ಎಂದು ಹೇಳಿದರು.
ಬಸವರಡ್ಡಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶಶಿಕಲಾ ಬಸವರಡ್ಡಿ, ಬೌದ್ಧಿಕ ಸಾಮರ್ಥ್ಯ ಹೆಚ್ಚಿಸುವ ಬಗೆ ಕುರಿತು ವಿವರಿಸಿದರು. ಪ್ರಾಚಾರ್ಯ ಪ್ರೊ. ರಮೇಶ ಮಡಿವಾಳರ ಪ್ರಾಸ್ತಾವಿಕ ಮಾತನಾಡಿದರು. ಸುಹಾಸಿನಿ ಕುಮಸೀಕರ ಸ್ವಾಗತಿಸಿದರು. ಶ್ವೇತಾ ಬಡವಣ್ಣವರ ವಂದಿಸಿದರು. ರಾಜು ನರೇಗಲ್ಲ. ಎಸ್.ಎಸ್. ಜಯಸುಧಾ ಇದ್ದರು.