ತಂದೆ- ತಾಯಿಗಳನ್ನು ಗೌರವದಿಂದ ಕಾಣಿ: ಮಾಧವಾನಂದ ಭಾರತೀ ಸ್ವಾಮಿಗಳು

KannadaprabhaNewsNetwork |  
Published : Dec 01, 2024, 01:33 AM IST
ಫೋಟೊಪೈಲ್- ೩೦ಎಸ್ಡಿಪಿ೪- ಸಿದ್ದಾಪುರ ತಾಲೂಕಿನ ನೆಲೆಮಾವು ಮಠದಲ್ಲಿ ನಡೆದ ಪ್ರತಿಬಿಂಬ ಕಾರ್ಯಕ್ರಮವನ್ನು ಶ್ರೀಮನ್ನೆಲೆಮಾವಿನ  ಶ್ರೀ ಮಾಧವಾನಂದ ಭಾರತೀ ಸ್ವಾಮೀಗಳು ಉದ್ಘಾಟಿಸಿ ಆಶೀರ್ವಚನ ನೀಡಿದರು. | Kannada Prabha

ಸಾರಾಂಶ

ಕಲೆ, ಸಾಹಿತ್ಯ, ಸಂಗೀತವನ್ನು ಸತತ ಪರಿಶ್ರಮದೊಂದಿಗೆ ರೂಢಿಸಿಕೊಳ್ಳಬೇಕಾಗುತ್ತದೆ. ಪ್ರತಿಬಿಂಬ ಕಾರ್ಯಕ್ರಮದ ಮೂಲಕ ಹವ್ಯಕರ ಕಲಾ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯ.

ಸಿದ್ದಾಪುರ: ತಮ್ಮ ಆಚಾರ, ವಿಚಾರ, ಸಂಸ್ಕೃತಿಯನ್ನು ಹವ್ಯಕರು ಉಳಿಸಿಕೊಂಡು ಬರಬೇಕು. ಊರನ್ನು ವೃದ್ಧಾಶ್ರಮವನ್ನಾಗಿ ರೂಪಿಸಬೇಡಿ. ತಂದೆ- ತಾಯಿಗಳ ಬಗ್ಗೆ ಗೌರವದ ಭಾವನೆ ಇಟ್ಟುಕೊಂಡು ಸನ್ನಡತೆಯನ್ನು ರೂಢಿಸಿಕೊಳ್ಳುವಂತೆ ಶ್ರೀಮನ್ನೆಲೆಮಾವಿನ ಮಾಧವಾನಂದ ಭಾರತೀ ಸ್ವಾಮಿಗಳು ತಿಳಿಸಿದರು.ಶ್ರೀಮಠ ನೆಲೆಮಾವಿನಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾ ವತಿಯಿಂದ ಏರ್ಪಡಿಸಿದ್ದ ಪ್ರತಿಬಿಂಬ ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರೆವೇರಿಸಿ ಸಾನ್ನಿಧ್ಯ ವಹಿಸಿ ಮಾತನಾಡಿದರು.ಕಲೆ, ಸಾಹಿತ್ಯ, ಸಂಗೀತವನ್ನು ಸತತ ಪರಿಶ್ರಮದೊಂದಿಗೆ ರೂಢಿಸಿಕೊಳ್ಳಬೇಕಾಗುತ್ತದೆ. ಪ್ರತಿಬಿಂಬ ಕಾರ್ಯಕ್ರಮದ ಮೂಲಕ ಹವ್ಯಕರ ಕಲಾ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯ. ಉನ್ನತವಾದ ವ್ಯಕ್ತಿತ್ವ ಸಂಪಾದನೆ ನಮ್ಮ ಗುರಿಯಾಗಿರಬೇಕು. ಸಮುದಾಯದ ಒಳಿತಿನ ಪ್ರಜ್ಞೆ ಜಾಗೃತವಾಗಲಿ ಎಂದರು.ಶಿಕ್ಷಣ ಪ್ರಸಾರದ ಸಮಿತಿ ಅಧ್ಯಕ್ಷ ಡಾ. ಶಶಿಭೂಷಣ ಹೆಗಡೆ ದೊಡ್ಮನೆ ಮಾತನಾಡಿ, ಮೂವರು ಸ್ವಾಮಿಗಳ ಮಾರ್ಗದರ್ಶನದಲ್ಲಿ ಹವ್ಯಕ ಸಂಘಟನೆ ಸಾಗುತ್ತಿದೆ. ಸ್ವಾಮಿಗಳು ಸಮಾಜದ ಕಣ್ಣುಗಳಿದ್ದಂತೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗಬೇಕು ಎಂದರು.ನೆಲೆಮಾವು ಮಠದ ಆಡಳಿತ ಸಮಿತಿ ಅಧ್ಯಕ್ಷ ಜಿ.ಎಂ. ಹೆಗಡೆ ಹೆಗ್ಗನೂರು ಮಾತನಾಡಿದರು. ಅಧ್ಯಕ್ಷತೆಯನ್ನು ಅಖಿಲ ಹವ್ಯಕ ಮಹಾ ಸಭಾದ ಉಪಾಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ವಹಿಸಿದ್ದರು.ವೇದಿಕೆಯಲ್ಲಿ ಅಖಿಲ ಹವ್ಯಕ ಮಹಾಸಭಾ ಉಪಾಧ್ಯಕ್ಷ ಶ್ರೀಧರ ಜೆ. ಭಟ್ಟ ಕೆಕ್ಕರು, ಗಣಪತಿ ಈಶ್ವರ ಹೆಗಡೆ ಉಂಬಳಮನೆ, ಸೇ.ಸ. ಸಂಘ ನೆಲೆಮಾವು ಅಧ್ಯಕ್ಷ ಮತ್ತು ರಾಜಾರಾಮ ಹೆಗಡೆ ಬಿಳೇಕಲ್ ಅಧ್ಯಕ್ಷರು ಗ್ರಾಪಂ ನಿಲ್ಕುಂದ ಹಾಗೂ ಪ್ರತಿಬಿಂಬ ಸಿದ್ದಾಪುರ ಸಂಚಾಲಕ ಜಿ.ಜಿ. ಹೆಗಡೆ ಬಾಳಗೋಡ ಉಪಸ್ಥಿತರಿದ್ದರು.ಹವ್ಯಕ ಮಹಾಸಭಾ ನಿರ್ದೇಶಕ ಜಿ.ಎಂ. ಹೆಗಡೆ ಕಾಜಿನಮನೆ ಸ್ವಾಗತಿಸಿದರು. ಅಖಿಲ ಹವ್ಯಕ ಮಹಾಸಭೆದ ಕಾರ್ಯದರ್ಶಿ ಪ್ರಶಾಂತ ಕುಮಾರ ಭಟ್ಟ ಮಳವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕ ಜಿ.ಆರ್. ಭಾಗವಾತ್ ತ್ಯಾರ್ಗಲ್ ಮಂದಿಸಿದರು. ವಿನಾಯಕ ಭಟ್ಟ ನೆಲೆಮಾವ ಹಾಗೂ ಜಿ.ಎಸ್. ಹೆಗಡೆ ನಿರೂಪಿಸಿದರು. ೩ರಿಂದ ಕಿರವತ್ತಿಯಲ್ಲಿ ಹತ್ತಿ ಮಾರಾಟದ ಟೆಂಡರ್

ಯಲ್ಲಾಪುರ: ತಾಲೂಕಿನ ಕಿರವತ್ತಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪ- ಮಾರುಕಟ್ಟೆಯಲ್ಲಿ ಡಿ. ೩ರಿಂದ ವಾರದ ಪ್ರತಿ ಮಂಗಳವಾರ ದಿನ ಹತ್ತಿ ಟೆಂಡರ್ ಮಾರಾಟ ವ್ಯವಹಾರ ಮಾಡಲು ಉದ್ದೇಶಿಸಲಾಗಿದೆ.ಟೆಂಡರ್ ಪದ್ಧತಿಯಲ್ಲಿ ಹತ್ತಿ ಮಾರಾಟವಾಗುತ್ತಿದ್ದು, ದಲಾಲರು ವಿದ್ಯುನ್ಮಾನ ತೂಕದ ಯಂತ್ರವನ್ನು ಉಪಯೋಗಿಸುತ್ತಿದ್ದಾರೆ. ರೈತರು ಹತ್ತಿಯನ್ನು ಟೆಂಡರಿಗೆ ಇಡಲು ಮತ್ತು ವ್ಯಾಪಾರದ ಪೂರ್ವದಲ್ಲಿ ತೂಕಕ್ಕೆ ಅನುಕೂಲವಾಗುವಂತೆ ಮಾಡಲು ಪ್ರತಿ ಮಂಗಳವಾರ ನಡೆಯುವ ಟೆಂಡರಿಗೆ ಮುಂಚಿತವಾಗಿ ಪ್ರತಿ ಸೋಮವಾರ ಸಂಜೆಯೊಳಗೆ ತಮ್ಮ ಹುಟ್ಟುವಳಿಯನ್ನು ತಂದು ದಲಾಲರ ಅಂಗಡಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಸಮಿತಿ ಆಡಳಿತಾಧಿಕಾರಿಗಳು ಹಾಗೂ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು