ಕನ್ನಡಪ್ರಭ ವಾರ್ತೆ ಮಂಗಳೂರು
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ.ಶ್ರೀಕೃಷ್ಣ ಭಟ್, ಹಿರಿಯರನ್ನು ಗುರುತಿಸಿ ಗೌರವಿಸುವುದು ಸತ್ಸಂಪ್ರದಾಯ. ಮಂಗಳೂರು ಸಾಹಿತ್ಯ ಪರಿಷತ್ತು ಇಂತಹ ಕಾರ್ಯಕ್ರಮ ಕೈಗೊಳ್ಳುತ್ತಿರುವುದು ಪ್ರಶಂಸನೀಯ. ಇದರಿಂದ ಸಾಹಿತ್ಯ ಪರಿಷತ್ತು ಇನ್ನಷ್ಟು ಬೆಳೆಯಲು ಸಾಧ್ಯವಾಗುತ್ತದೆ. ಸಾಹಿತ್ಯಾಭಿಮಾನಿಗಳಾದ ತಾವೆಲ್ಲರೂ ನಮ್ಮ ಮನೆಯವರೆಗೂ ಬಂದಿರುವುದು ನಿಜವಾಗಿಯೂ ಸಂಭ್ರಮದ ವಿಚಾರ ಎಂದರು.
ಪ್ರೊ.ಶ್ರೀ ಕೃಷ್ಣ ಭಟ್‌ರ ಶಿಷ್ಯೆ ಹಾಗೂ ಪರಿಷತ್ತಿನ ಮಹಿಳಾ ಪ್ರತಿನಿಧಿ ಡಾ.ಮೀನಾಕ್ಷಿ ರಾಮಚಂದ್ರ ಸನ್ಮಾನಿತರ ವ್ಯಕ್ತಿತ್ವ ಪರಿಚಯ ಮಾಡಿದರು.ಕಸಾಪ ಮಂಗಳೂರು ತಾಲೂಕು ಅಧ್ಯಕ್ಷ ಡಾ.ಮಂಜುನಾಥ ರೇವಣಕರ, ಕಸಾಪ ಜಿಲ್ಲಾ ಸದಸ್ಯರಾದ ಸನತ್ ಕುಮಾರ್ ಜೈನ್, ಪ್ರೊ.ಶ್ರೀಕೃಷ್ಣ ಭಟ್‌ರ ಪತ್ನಿ ಹೇಮಾವತಿ ಭಟ್ ಮತ್ತಿತರರು ಇದ್ದರು.
ಕಸಾಪ ಮಂಗಳೂರು ತಾಲೂಕು ಪ್ರಧಾನ ಕಾರ್ಯದರ್ಶಿ ಗಣೇಶ ಪ್ರಸಾದ ಜೀ ವಂದಿಸಿದರು. ಕೋಶಾಧಿಕಾರಿ ಸುಬ್ರಾಯ ಭಟ್ ನಿರೂಪಿಸಿದರು.------