ಸೋಮವಾರಪೇಟೆ: ಎಟಿಎಂ ಕಳ್ಳತನ ಯತ್ನ

KannadaprabhaNewsNetwork |  
Published : Sep 06, 2026, 03:00 AM IST
ಸೋಮವಾರಪೇಟೆ ಎಸ್‌ಬಿಐ ಬ್ಯಾಂಕ್‌ನ ಎ.ಟಿ.ಎಂ. ದರೋಡೆಗೆ ವಿಫಲ ಯತ್ನ ನಡೆಸುತ್ತಿರುವ ಕಳ್ಳರು. | Kannada Prabha

ಸಾರಾಂಶ

ಪಟ್ಟಣದ ಎಂ.ಜಿ ರಸ್ತೆಯಲಿರುವ ಎಸ್.ಬಿ.ಐ ಬ್ಯಾಂಕ್‌ನ ಎ.ಟಿ.ಎಂ ಕಳ್ಳತನಕ್ಕೆ ಯತ್ನ ನಡೆಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಸೋಮವಾರಪೇಟೆ: ಪಟ್ಟಣದ ಎಂ.ಜಿ ರಸ್ತೆಯಲಿರುವ ಎಸ್.ಬಿ.ಐ ಬ್ಯಾಂಕ್‌ನ ಎ.ಟಿ.ಎಂ ಕಳ್ಳತನಕ್ಕೆ ಯತ್ನ ನಡೆಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಶುಕ್ರವಾರ ರಾತ್ರಿ ೨.೦೫ ರ ಸಮಯಕ್ಕೆ ಕಾರಿನಲ್ಲಿ ಬಂದ ಇಬ್ಬರು ಮುಸುಕುದಾರಿಗಳು ಬ್ಯಾಂಕ್ ಕಟ್ಟಡಕ್ಕೆ ಹೊಂದಿಕೊಂಡಿರುವ ಎ.ಟಿ.ಎಂ ಗೆ ತೆರಳಿ ಕಬ್ಬಿಣದ ಸಲಾಕೆಯಿಂದ ಮೇಲಿನ ಕವಚವನ್ನು ಮೀಟಿ ಕಳಚಿದ್ದಾರೆ. ಇನ್ನೊಂದು ಪದರವನ್ನು ಕಳಚುವ ಸಂದರ್ಭ ಯಾರೋ ಬಂದಂತೆ ಭಾಸವಾದ ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾರೆ. ಎ.ಟಿ.ಎಂ ಒಡೆಯುವ ದೃಶ್ಯ ಅಲ್ಲಿನ ಸಿ.ಸಿ ಕ್ಯಾಮರದಲ್ಲಿ ಸೆರೆಯಾಗಿದ್ದು ಇದನ್ನು ಆಧಾರಿಸಿ ಪೊಲೀಸರು ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಇದಲ್ಲದೆ ಕಳೆದ ೧೫ ದಿನಗಳ ಹಿಂದೆ ಪಟ್ಟಣದ ಬಾಣವಾರ ರಸ್ತೆಯಲ್ಲಿರುವ ಮೂಡಲಗಿರಿ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಕಳ್ಳರ ಗ್ಯಾಂಗ್ ಮನೆಗೆ ಕನ್ನ ಹಾಕಿದ್ದು, ಮನೆಯ ಹಿಂಬಾಗಿಲಿನ ಬೀಗ ಒಡೆದು ಮನೆಗೆ ನುಗ್ಗಿದ್ದು ಕಳ್ಳರು ಮನೆಯಲ್ಲಿದ್ದ ೫೦ ಗ್ರಾಂ ನ ಬೆಳ್ಳಿಯ ಗಣಪತಿ ವಿಗ್ರಹ, ೫೦ ಗ್ರಾಂ ನ ಬೆಳ್ಳಿಯ ಸರಸ್ಪತಿ ವಿಗ್ರಹ, ೫೦ ಗ್ರಾಂ ನ ಬೆಳ್ಳಿಯ ಲಕ್ಷ್ಮಿ, ೬೦ ಗ್ರಾಂ ತೂಕದ ೨ ಜೊತೆ ಬೆಳ್ಳಿ ದೀಪ, ೫೦ಗ್ರಾಂ ತೂಕದ ಕುಂಕುಮ ಬಟ್ಟಲು, ಇವುಗಳನ್ನು ಕಳ್ಳತನ ಮಾಡಿದ್ದಾರೆ. ಬೆಡ್ ರೂಂ ನ ಲಾಕರ್‌ನಲ್ಲಿದ್ದ ೨೦ ಗ್ರಾಂ ಬೆಳ್ಳಿ ಕಾಲು ಚೈನ್ ಮತ್ತು ೨೦೦೦೦ ರೂ. ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳ ಶಿಸ್ತು, ಬದ್ಧತೆಯಿಂದಲೇ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ: ಡಾ.ರವೀಶ್‌ ತುಂಗಾ
ಅತ್ತಾವರ ವಾರ್ಡ್‌ನಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ