ಮಕ್ಕಳ ಭಾವನೆಗಳಿಗೆ ಸ್ಪಂದಿಸಿ ಒಳ್ಳೆಯ ವಾತಾವರಣ ನಿರ್ಮಿಸಿ: ಸುಮಾ

KannadaprabhaNewsNetwork |  
Published : Aug 14, 2026, 02:00 AM IST
ಇಲ್ಲಿಯ ಲೊಯೋಲಾ ವಿಕಾಸ ಕೇಂದ್ರದಲ್ಲಿ ಮಕ್ಕಳ ಸುರಕ್ಷತಾ ಕ್ರಮಗಳ ಕುರಿತು ಜಿಲ್ಲಾ ಮಟ್ಟದ ಕಾರ್ಯಾಗಾರ ಜರುಗಿತು. | Kannada Prabha

ಸಾರಾಂಶ

ತಾಯಿಯಾದವಳು ಮಕ್ಕಳ ಮನಸನ್ನು ಅರಿತು ಮಕ್ಕಳ ಭಾವನೆಗಳಿಗೆ ಸ್ಪಂದಿಸಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡಿ ಕೊಟ್ಟರೆ ಸದ್ಗುಣ, ಸನ್ಮಾರ್ಗದಲ್ಲಿ, ಸಕಾರಾತ್ಮಕ ಭಾವನೆಗಳಿಂದ ಲವಲವಿಕೆಯಿಂದ ಮಕ್ಕಳು ಬೆಳೆಯುತ್ತವೆ.

ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿದ ಬಿಇಒ

ಕನ್ನಡಪ್ರಭ ವಾರ್ತೆ ಮುಂಡಗೋಡ

ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳ ಮನಸ್ಥಿತಿ ತುಂಬಾ ಹದಗೆಡುತ್ತಿದೆ. ಇದಕ್ಕೆ ತಾಯಿಯಾದವಳು ಮಕ್ಕಳ ಮನಸನ್ನು ಅರಿತು ಮಕ್ಕಳ ಭಾವನೆಗಳಿಗೆ ಸ್ಪಂದಿಸಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡಿ ಕೊಟ್ಟರೆ ಸದ್ಗುಣ, ಸನ್ಮಾರ್ಗದಲ್ಲಿ, ಸಕಾರಾತ್ಮಕ ಭಾವನೆಗಳಿಂದ ಲವಲವಿಕೆಯಿಂದ ಮಕ್ಕಳು ಬೆಳೆಯುತ್ತವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಸುಮಾ ಹೇಳಿದರು.

ಇಲ್ಲಿಯ ಲೊಯೋಲಾ ವಿಕಾಸ ಕೇಂದ್ರದಲ್ಲಿ ಮಕ್ಕಳ ಸುರಕ್ಷತಾ ಕ್ರಮಗಳ ಕುರಿತು ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರಿಗೆ ಸೇಫ್‌ ಟಚ್, ಅನ್ ಸೇಫ್‌ ಟಚ್ ಬಗ್ಗೆ ಅರಿವು ಇರಬೇಕು. ಸ್ನೇಹಮಯ ವಾತಾವರಣ ಇರುವಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಹಸಿವಿನ ದಾಹ, ಅನ್ನದ ಬೆಲೆ ಗೊತ್ತಿರಬೇಕು, ಹಣದ ಮೌಲ್ಯ ತಿಳಿಸಿ ಆಡಂಬರಕ್ಕೆ ಮಾರುಹೋಗದೆ, ಮೊಬೈಲ್ ಬಳಕೆಗೆ ಕಡಿವಾಣ ಹಾಕಬೇಕು. ಮಕ್ಕಳಿಂದ ಪಾಲಕರನ್ನು ಗುರುತಿಸುವಂತೆ ಆತ್ಮ ವಿಶ್ವಾಸ ತುಂಬಿರಿ ಎಂದು ಕರೆ ನೀಡಿದರು.

ಲೊಯೋಲಾ ವಿಕಾಸ ಕೆಂದ್ರ ನಿರ್ದೇಶಕ ಅನಿಲ್ ಡಿಸೊಜ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಹಕ್ಕುಗಳ ಕುರಿತಾದ ಕಾಯ್ದೆ ಕಾನೂನು, ಅವುಗಳ ಜಾರಿ ಹಾಗೂ ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ಇರುವ ವಿವಿಧ ವ್ಯವಸ್ಥೆಗಳ ಕುರಿತು ಜಿಲ್ಲಾ ಮಟ್ಟದ ಕಾರ್ಯಾಗಾರ ಇದಾಗಿದ್ದು, ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್‌ ಪ್ರಕಾರ ಮುಂಡಗೋಡ ತಾಲೂಕು ಹಿಂದುಳಿದಿದೆ. ಆದ್ದರಿಂದ ತರಬೇತಿ ಪಡೆದ ಶಿಬಿರಾರ್ಥಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡಲು ಸಾಮರ್ಥ್ಯ ಪಡೆದುಕೊಳ್ಳಿ ಎಂದು ಹೇಳಿದರು.

ಡಾ. ರಾಘವೆಂದ್ರ ಭಟ್, ವಾಗು ಕೋಕರೆ, ಗೀತಾ ಸಾಲಸ್ಕರ, ದೀಪಾ ಕೋಳೂರು, ಭರಮಣ್ಣ ಚಕ್ರಸಾಲಿ ಮುಂತಾದವರು ಮಾತನಾಡಿದರು. ತೇಜಸ್ವಿನಿ ಬೇಗೂರು ಸಂವಿದಾನ ಪೀಠಿಕೆ ಬೋಧಿಸಿದರು. ಲಕ್ಷ್ಮಣ ಮೂಳೆ ಸ್ವಾಗತಿಸಿದರು. ಮಲ್ಲಮ್ಮ ನೀರಲಗಿ ನಿರೂಪಿಸಿದರು. ನಾಗರಾಜ ಕಟ್ಟಿಮನಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಕ್ಷಗಾನ ಅಕಾಡೆಮಿ ಪ್ರಶಸ್ತಿಗೆ ದುರ್ಗಾಪರಮೇಶ್ವರಿ ಕುಕ್ಕಿಲ ಆಯ್ಕೆ
(ವೆಬ್ಬಿಗೆ)) ಪಿಂಚಣಿದಾರರ ಸಮಸ್ಯೆಗಳ ಪರಿಹಾರಕ್ಕೆ ಪ್ರತಿಭಟನೆ