ತಂತ್ರಜ್ಞಾನವನ್ನು ರೈತರಿಗೆ ತಲುಪಿಸುವ ಜವಾಬ್ದಾರಿ ಮಾರಾಟಗಾರರದ್ದು: ಬಿ.ಎಸ್. ಚಂದ್ರಶೇಖರ್

KannadaprabhaNewsNetwork |  
Published : Feb 29, 2024, 02:02 AM IST
1 | Kannada Prabha

ಸಾರಾಂಶ

ಹೊಸ ಕೀಟನಾಶಕ, ರಸಗೊಬ್ಬರವನ್ನು ಯಾವ ಪ್ರಮಾಣದಲ್ಲಿ ಬಳಸಬೇಕು ಎಂಬುದನ್ನು ಮೊದಲು ಮಾರಾಟಗಾರರು ಅರಿತು ಕೃಷಿಕರಿಗೆ ತಿಳಿಹೇಳಬೇಕು. ಮಾರುಕಟ್ಟೆಗೆ ಬಂದ ಹೊಸ ತಂತ್ರಜ್ಞಾನ ಬಗ್ಗೆ ಇಲಾಖೆಯಿಂದ ಮಾಹಿತಿ ಪಡೆಯಬೇಕು. ಮಾರುಕಟ್ಟೆಗೆ ಬರುವ ಕೀಟನಾಶಕಗಳನ್ನು ಶಿಫಾರಸು ಮಾಡುವ ಅಧಿಕಾರ ಅಧಿಕಾರಿಗಳಿಗೆ ಇಲ್ಲ. ಮಾರಾಟಗಾರರು ಶಿಫಾರಸು ಮಾಡುವ ಉತ್ಪನ್ನಗಳನ್ನು ರೈತರು ಬಳಸುತ್ತಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಕೃಷಿ ತಂತ್ರಜ್ಞಾನ ಮಾಹಿತಿಯನ್ನು ಕೃಷಿಕರಿಗೆ ತಲುಪಿಸುವುದು ಪರಿಕರ ಮಾರಾಟಗಾರರ ಕರ್ತವ್ಯ ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಎಸ್. ಚಂದ್ರಶೇಖರ್ ಕಿವಿಮಾತು ಹೇಳಿದರು.

ಮೈಸೂರು ಮತ್ತು ಚಾಮರಾಜಗನರ ಜಿಲ್ಲೆಗಳ ರಸಗೊಬ್ಬರ, ಬಿತ್ತನೆ ಬೀಜ ಮತ್ತು ಕ್ರಿಮಿನಾಶಕ ಮಾರಾಟಗಾರರ ಸಂಘವು ಬುಧವಾರ ಜಯನಗರದ ಶ್ರೀಧಾಮ ಹಾಲ್ನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಾರ್ಷಿಕ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಹೊಸ ಕೀಟನಾಶಕ, ರಸಗೊಬ್ಬರವನ್ನು ಯಾವ ಪ್ರಮಾಣದಲ್ಲಿ ಬಳಸಬೇಕು ಎಂಬುದನ್ನು ಮೊದಲು ಮಾರಾಟಗಾರರು ಅರಿತು ಕೃಷಿಕರಿಗೆ ತಿಳಿಹೇಳಬೇಕು. ಮಾರುಕಟ್ಟೆಗೆ ಬಂದ ಹೊಸ ತಂತ್ರಜ್ಞಾನ ಬಗ್ಗೆ ಇಲಾಖೆಯಿಂದ ಮಾಹಿತಿ ಪಡೆಯಬೇಕು. ಮಾರುಕಟ್ಟೆಗೆ ಬರುವ ಕೀಟನಾಶಕಗಳನ್ನು ಶಿಫಾರಸು ಮಾಡುವ ಅಧಿಕಾರ ಅಧಿಕಾರಿಗಳಿಗೆ ಇಲ್ಲ. ಮಾರಾಟಗಾರರು ಶಿಫಾರಸು ಮಾಡುವ ಉತ್ಪನ್ನಗಳನ್ನು ರೈತರು ಬಳಸುತ್ತಾರೆ ಎಂದರು.

ನಂತರ ಕೀಟನಾಶಕಗಳ ಪ್ರಯೋಜನಗಳ ಕುರಿತು ಸಲಹೆ ಪಡೆಯಬೇಕು. ಆ ಮೂಲಕ ಉತ್ಪನ್ನದ ಮೌಲ್ಯಮಾಪನ ಮಾಡಬೇಕು. ಯಶಸ್ವಿ ರೈತರನ್ನು ಮಾತನಾಡಿಸಬೇಕು ಎಂದರು.

ಕಳೆದ ಐದು ವರ್ಷದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಮಾರಾಟಗಾರರ ಸಂಖ್ಯೆ ಮೂರ್ನಾಲ್ಕು ಪಟ್ಟು ಹೆಚ್ಚಾಗಿದೆ. ತಂತ್ರಜ್ಞಾನ ಮುಂದುವರಿದಷ್ಟು ಕೃಷಿಕರು ಹಾಗೂ ಮಾರಾಟಗಾರರಿಗೆ ಅನುಕೂಲ. ಆದಾಗ್ಯು ಕೃಷಿಕರ ಸಂಖ್ಯೆಗೆ ಹೋಲಿಸಿದರೆ ಪರಿಕರ ಮಾರಾಟಗಾರರ ಸಂಖ್ಯೆ ಕಡಿಮೆ ಇದೆ ಎಂದು ಅವರು ಹೇಳಿದರು.

ಚಾಮರಾಜನಗರ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಡಾ.ಎಸ್.ಎಸ್. ಆಬೀದ್, ಮೈಸೂರು ವಿಭಾಗದ ಜಾಗೃತ ಕೋಶದ ಜಂಟಿ ಕೃಷಿ ನಿರ್ದೇಶಕ ಡಾ.ಕೆ. ಮಧುಸೂದನ್ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಇಲಾಖೆಯ ಉಪ ನಿರ್ದೇಶಕ ರುದ್ರೇಶ್, ಸಂಘದ ಗೌರವಾಧ್ಯಕ್ಷ ನಂಜಪ್ಪ, ಅಧ್ಯಕ್ಷ ಶಿವಪ್ರಕಾಶ್, ಉಪಾಧ್ಯಕ್ಷ ಜಿ. ಸಿದ್ಧರಾಮಣ್ಣ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾ.27ಕ್ಕೆ ಜಿಬಿಎ ಮೊದಲ ಬಜೆಟ್‌ ಮಂಡನೆ: ಹಲವು ನಿರೀಕ್ಷೆ
ಐಪಿಎಲ್ ಪಂದ್ಯಾ‍‍ವಳಿ ಭದ್ರತೆಗೆ 2000 ಪೊಲೀಸರ ನಿಯೋಜನೆ