ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ 159ನೇ ಜಯಂತಿ ಮಹೋತ್ಸವದ ಪ್ರಯುಕ್ತ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ, ಗೋಣಿಬೀಡು ಹಾಗೂ ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮೂಡಿಗೆರೆ ತಾಲೂಕು ಘಟಕದ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.
ಕಾಲೇಜು ವಿಭಾಗ: ಪರಿಣಿತಾ ಪಿ. (88) ಪ್ರಥಮ, ನಾಗಭೂಷಣ ಪ್ರಕಾಶ (85) ಹಾಗೂ ಅಮೃತ ಎಚ್.ಎಂ. (85) ಜಂಟಿ ದ್ವಿತೀಯ, ಸಿಂಧು (82) ತೃತೀಯ ಸ್ಥಾನ ಪಡೆದಿದ್ದಾರೆ.
ದಿವ್ಯಾ ಆತ್ಮಾರಾಮ ಸಹಾನೆ, ಶರವಾನಾ ಎಸ್. ಹಲವಾರ್, ಮಹಿಮಾ ಆರ್.ಕೆ., ಡಾ. ಬಸವರಾಜ ಕೋಟಿ, ಪುಷ್ಪಾ ಸನ್ನಸಿದ್ದನ್ನವರ, ದಾನೇಶ್ವರಿ ನಾಡಗೌಡ ಹಾಗೂ ಭೈರೇಗೌಡ ಸನ್ನಸಿದ್ದನ್ನವರ ಅವರಿಗೆ ವಿಶೇಷ ಮೆಚ್ಚುಗೆ ಬಹುಮಾನ ಲಭಿಸಿದೆ.
ಶಾಲಾ ವಿಭಾಗ: ಮನ್ವಿತ ಎ.ಎಂ. (86) ಪ್ರಥಮ, ವೀರೇಶ್ ಆರ್. ಮಿಠಾಯಿಗರ (83) ದ್ವಿತೀಯ ಹಾಗೂ ದೇವಿ ವಿ. (82) ತೃತೀಯ ಸ್ಥಾನ ಪಡೆದಿದ್ದಾರೆ.
ಮನಸ್ವಿ ಆರ್.ಕೆ., ತಬ್ಸುಮ, ಸೇವಂತಿ ನಾಗರಾಜ ಕೊಟಬಾಗಿ, ಚಿನ್ಮಯಿ ಎಂ. ಭಗವಾನ ಹಾಗೂ ವಿಜಯಲಕ್ಷ್ಮಿ ಬಿ. ಅವರಿಗೆ ವಿಶೇಷ ಮೆಚ್ಚುಗೆ ಬಹುಮಾನ ನೀಡಲಾಗಿದೆ.
ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನ, ಸಾಧನೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆ ಕುರಿತು ನಡೆದ ಸ್ಪರ್ಧೆಯಲ್ಲಿ ರಾಜ್ಯದ ವಿವಿಧೆಡೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿಷಯಗ್ರಹಿಕೆ, ತಥ್ಯನಿಖರತೆ, ಅಧ್ಯಯನ, ಸ್ವಂತ ಚಿಂತನೆ, ಭಾಷಾ ಅಭಿವ್ಯಕ್ತಿ ಹಾಗೂ ಸಮಾಜಮುಖಿ ದೃಷ್ಟಿಕೋನ ಆಧರಿಸಿ ತಜ್ಞರು ಮೌಲ್ಯಮಾಪನ ನಡೆಸಿದರು ಎಂದು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಉಮಾ ಮೋಹನ್ ತಿಳಿಸಿದ್ದಾರೆ.
ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸುವ ಕಾರ್ಯಕ್ರಮದ ದಿನಾಂಕ ಮತ್ತು ಸ್ಥಳವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಡಾ.ಮೋಹನ್ ರಾಜಣ್ಣ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.