ಡಾ. ಶ್ರೀನಿವಾಸ ಜೋಶಿಗೆ ರೆಟ್‌ ಬಕ್ಲರ್‌ ಅವಾರ್ಡ್‌

KannadaprabhaNewsNetwork |  
Published : Jul 22, 2026, 02:15 AM IST
ರೆಟ್‌ ಬಕ್ಲರ್‌ ಅವಾರ್ಡ್‌ ಪಡೆದುಕೊಂಡ ಡಾ.ಶ್ರೀನಿವಾಸ ಜೋಶಿ | Kannada Prabha

ಸಾರಾಂಶ

"ಆಸ್ಕರ್‌ ಆಫ್‌ ರೆಟಿನಾ " ಎಂದೇ ಕರೆಯುವ ಈ ಪ್ರಶಸ್ತಿಯನ್ನು ಶ್ರೀನಿವಾಸ ಜೋಶಿ ಅವರು ಸತತ 8ನೇ ಬಾರಿಗೆ ಗೆದ್ದಿದ್ದಾರೆ. ಈ ಪ್ರಶಸ್ತಿ ಗೆದ್ದ ಭಾರತದ ಏಕೈಕ ಹಾಗೂ ವಿಶ್ವದ 3ನೇ ಶಸ್ತ್ರಚಿಕಿತ್ಸಕರು ಎನ್ನುವುದು ಹೆಮ್ಮೆಯ ವಿಷಯ.

ಹುಬ್ಬಳ್ಳಿ:

ಇಲ್ಲಿನ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಶ್ರೀನಿವಾಸ ಎಂ. ಜೋಶಿ ಅವರಿಗೆ ವಿಶ್ವಮಟ್ಟದ "ರೆಟ್‌ ಬಕ್ಲರ್‌ ಅವಾರ್ಡ್‌ " ಲಭಿಸಿದೆ. ಕೆನಡಾದ ಮಾಂಟ್ರಿಯಲ್‌ನಲ್ಲಿ ನಡೆದ ರೇಟಿನಾ ಶಸ್ತ್ರಚಿಕಿತ್ಸಕರ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

"ಆಸ್ಕರ್‌ ಆಫ್‌ ರೆಟಿನಾ " ಎಂದೇ ಕರೆಯುವ ಈ ಪ್ರಶಸ್ತಿಯನ್ನು ಶ್ರೀನಿವಾಸ ಜೋಶಿ ಅವರು ಸತತ 8ನೇ ಬಾರಿಗೆ ಗೆದ್ದಿದ್ದಾರೆ. ಈ ಪ್ರಶಸ್ತಿ ಗೆದ್ದ ಭಾರತದ ಏಕೈಕ ಹಾಗೂ ವಿಶ್ವದ 3ನೇ ಶಸ್ತ್ರಚಿಕಿತ್ಸಕರು ಎನ್ನುವುದು ಹೆಮ್ಮೆಯ ವಿಷಯ.

ಅಮೆರಿಕನ್‌ ಸೊಸೈಟಿ ಆಫ್‌ ರೆಟಿನಲ್‌ ಸ್ಪೆಷಲಿಸ್ಟ್‌ಸ್‌ (ASRS- American Society of Retinal Specialists) ವಾರ್ಷಿಕ ಸಮ್ಮೇಳನದಲ್ಲಿ ರೆಟ್‌ ಬಕ್ಲರ್‌ ಪ್ರಶಸ್ತಿಯೂ ಜೋಶಿ ಅವರು ಪ್ರದರ್ಶಿಸಿದ ಅತ್ಯುತ್ತಮ ಶಸ್ತ್ರಚಿಕಿತ್ಸಾ ವಿಡಿಯೋಗಾಗಿ ಲಭಿಸಿದೆ. ಎಎಸ್‌ಆರ್‌ಎಸ್‌ ಎಂಬುದು ಜಾಗತಿಕ ಸಂಸ್ಥೆ. ವಿಶ್ವದ ಬೇರೆ ಬೇರೆ ದೇಶಗಳ ರೆಟಿನಲ್‌ ಶಸ್ತ್ರಚಿಕಿತ್ಸಕರು ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿ, ಸಂಕೀರ್ಣ ವಿಟ್ರಿಯೋ-ರೆಟಿನಲ್ ಶಸ್ತ್ರಚಿಕಿತ್ಸೆಗಳ ಇತ್ತೀಚಿನ ಸಾಧನೆ ಪ್ರದರ್ಶಿಸಬೇಕು. ಜತೆಗೆ ಶಸ್ತ್ರಚಿಕಿತ್ಸೆಯಲ್ಲಿನ ತಮ್ಮ ಸಾಧನೆ, ಜ್ಞಾನವನ್ನೂ ಹಂಚಿಕೊಳ್ಳಬೇಕು. ಜತೆಗೆ ಸಮ್ಮೇಳನದಲ್ಲಿ ಎಎಸ್‌ಆರ್‌ಎಸ್‌ (ASRS) ಫಿಲ್ಮ್‌ ಫೆಸ್ಟಿವಲ್‌ನ್ನು ಆಯೋಜಿಸುತ್ತದೆ. ಈ ಫೆಸ್ಟಿವಲ್‌ನಲ್ಲಿ ವಿಶ್ವದ ಪ್ರಸಿದ್ಧ "ವಿಟ್ರಿಯೋ-ರೆಟಿನಲ್ ಶಸ್ತ್ರಚಿಕಿತ್ಸಕರು " ತಮ್ಮ ಅತ್ಯುತ್ತಮ ಶಸ್ತ್ರಚಿಕಿತ್ಸಾ ಹಂತ ವಿಡಿಯೋ ಮೂಲಕ ಪ್ರದರ್ಶಿಸಬೇಕು. ಅದರಲ್ಲಿ ಅತ್ಯುತ್ತಮ ವಿಡಿಯೋಗೆ "ರೇಟ್-ಬಕ್ಲರ್ ಪ್ರಶಸ್ತಿ'''''''' ನೀಡಲಾಗುತ್ತದೆ. ಈ ಟ್ರೋಪಿ 8 ಪೌಂಡ್ ತೂಕದ, 24 ಕ್ಯಾರೆಟ್ ಚಿನ್ನದ ಲೇಪಿತ ಪ್ರತಿಮೆ ಆಗಿದೆ. ಆಸ್ಕರ್ ಪ್ರಶಸ್ತಿ ತಯಾರಿಸುವ ಆರ್‌.ಎಸ್‌. ಓವನ್ಸ್‌ ಕಂಪನಿಯೇ ಈ ಪ್ರಶಸ್ತಿ ಸಿದ್ಧಪಡಿಸುತ್ತದೆ. ಹೀಗಾಗಿಯೇ ಇದನ್ನು "ರೆಟಿನಲ್ ಶಸ್ತ್ರಚಿಕಿತ್ಸೆಯ ಆಸ್ಕರ್'''''''' (Oscar of Retina) ಎಂದೇ ಕರೆಯಲಾಗುತ್ತದೆ.

ಈ ಪ್ರಶಸ್ತಿ ವಿಟ್ರಿಯೋ-ರೆಟಿನಲ್ ಶಸ್ತ್ರಚಿಕಿತ್ಸಾ ಕ್ಷೇತ್ರದ ಅತ್ಯಂತ ಪ್ರತಿಷ್ಠಿತ ಗೌರವವಾಗಿದೆ. ಡಾ. ಶ್ರೀನಿವಾಸ ಎಂ. ಜೋಶಿ ಅವರು ಈ ಪ್ರಶಸ್ತಿಯನ್ನು ಬರೋಬ್ಬರಿ ಎಂಟು ಬಾರಿ ಸತತವಾಗಿ ಗೆದ್ದಿರುವ ಅಪರೂಪದ ಸಾಧನೆ ಮಾಡಿದ್ದಾರೆ.

ಭಾರತದ ನೇತ್ರ ವೈದ್ಯಕೀಯ ಕ್ಷೇತ್ರಕ್ಕೆ ಅತ್ಯಂತ ಸಂತೋಷಕರ ಹಾಗೂ ಹೆಮ್ಮೆಯ ವಿಷಯವಾಗಿದೆ. ಪ್ರಶಸ್ತಿ ಲಭಿಸಿದ್ದಕ್ಕೆ ಶ್ರೀನಿವಾಸ ಜೋಶಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಪುಟದಲ್ಲಿ ಹೊಸಬರಿಗೆ ಅವಕಾಶ ಹೈಕಮಾಂಡ್‌ಗೆ ಬಿಟ್ಟದ್ದು: ಜಾರಕಿಹೊಳಿ
ರೈತರಲ್ಲಿ ಒಡಕು ಮೂಡಿಸುತ್ತಿರುವ ಸರ್ಕಾರ: ವೀರೇಶ ಸೊಬರದಮಠ