ಲಂಡನ್‌ ಮಹದೇವಯ್ಯ- ಎ.ಸಿ.ಲಕ್ಷ್ಮಣ್‌ ಭೇಟಿ

KannadaprabhaNewsNetwork |  
Published : Jan 09, 2026, 01:15 AM IST
24 | Kannada Prabha

ಸಾರಾಂಶ

ಬೆಂಗಳೂರು ಬಳಿಯ ಕನ್ನಳ್ಳಿಯವರಾದ ಮಹದೇವಯ್ಯ 1960 ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಪದವಿ ಪಡೆದವರು.

ಕನ್ನಡಪ್ರಭ ವಾರ್ತೆ ಮೈಸೂರು

ಅಂತಾರಾಷ್ಟ್ರೀಯ ಬಸವ ಫೌಂಡೇಷನ್‌ ರಚಿಸಿಕೊಂಡು ಲಂಡನ್‌ನಲ್ಲಿ ಬಸವ ತತ್ವ ಪ್ರಚಾರ ಮಾಡುತ್ತಿರುವ ಮಹದೇವಯ್ಯ ಅವರು ಗುರುವಾರ ಮೈಸೂರಿನಲ್ಲಿ ಅರಣ್ಯ ಇಲಾಖೆಯ ನಿವೃತ್ತ ಕಾರ್ಯದರ್ಶಿ ಎ.ಸಿ. ಲಕ್ಷ್ಮಣ್‌ ಅವರನ್ನು ಭೇಟಿ ಮಾಡಿದ್ದರು.

ಬೆಂಗಳೂರು ಬಳಿಯ ಕನ್ನಳ್ಳಿಯವರಾದ ಮಹದೇವಯ್ಯ 1960 ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಪದವಿ ಪಡೆದವರು. ಲಕ್ಮಣ್‌ ಸಹ ಕೃಷಿ ವಿವಿಯಲ್ಲಿ ಓದುವಾಗ ಸಹಪಾಠಿ. ನಂತರ ಅರಣ್ಯ ಇಲಾಖೆ ಸೇರಿ ಬಿದಿರು ಬೆಳೆಯಲು ನೀಡಿದ ಉತ್ತೇಜನದಿಂದ ಬಂಬೂ ಲಕ್ಷ್ಮಣ್‌ ಎಂದೇ ಹೆಸರಾದವರು.

ಆಫ್ರೋ- ಏಷ್ಯನ್‌ ಸಮುದಾಯಕ್ಕೆ ಮಹದೇವಯ್ಯ ಅವರು ನೀಡಿರುವ ಕೊಡುಗೆ ಅಪಾರ. ತಮ್ಮ ಆದಾಯದ ಬಹುತೇಕ ಪಾಲನ್ನು ಸಾಮಾಜಿಕ ಕಾರ್ಯಗಳಿಗೆ ಬಳಸುತ್ತಿದ್ದಾರೆ ಎಂದು ಲಕ್ಷ್ಮಣ್‌ ಹರ್ಷಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೆಲಕ್ಕೆ ಬೇಕಾಗುವ ಚಿಂತನೆ ಮಾಡೋದು ಸಾಹಿತ್ಯದ ಕೆಲಸ; ವೈ.ಎಂ.ಯಾಕೊಳ್ಳಿ
ನಿಡಗುಂದಿಯಲ್ಲಿ ಬೃಹತ್‌ ಶೋಭಾಯಾತ್ರೆ, ಕೇಸರಿಮಯ