ಮಳೆ ನೀರು ಸರಾಗ ಹರಿವಿಗೆ ಚರಂಡಿ ಹೂಳೆತ್ತಿದ ನಿವೃತ್ತ ಯೋಧ

KannadaprabhaNewsNetwork |  
Published : Jun 29, 2024, 12:40 AM IST
ಕುಬೆವೂರು ಶಿಮಂತೂರು ರಸ್ತೆ ಚರಂಡಿ ಅವ್ಯವಸ್ಥೆ  ದುರಸ್ತಿ ಪಡಿಸಿದ ನಿವೃತ್ತ ಯೋಧ | Kannada Prabha

ಸಾರಾಂಶ

ನಿವೃತ್ತ ಯೋಧ ನಾರಾಯಣ ರೈ ಅವರು ಹಾರೆ ಹಾಗೂ ಕತ್ತಿಯಿಂದ ಚರಂಡಿಯ ಹೂಳೆತ್ತಿ ಹಾಗೂ ಗಿಡ ಗಂಟಿಗಳನ್ನು ಸ್ವತಃ ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹಾದು ಹೋಗುವಂತೆ ಶ್ರಮದಾನ ಮಾಡಿದರು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಭಾರಿ ಮಳೆಗೆ ಕಿಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಬೆವೂರು- ಶಿಮಂತೂರು ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ಮಳೆಯ ನೀರು ಹರಿದು ಕೆಸರುಮಯವಾಗಿ ಪರಿಣಮಿಸಿತ್ತು. ಪಂಚಾಯಿತಿಗೆ ಅನೇಕ ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಿವೃತ್ತ ಯೋಧ ನಾರಾಯಣ ರೈ ಅವರು ಹಾರೆ ಹಾಗೂ ಕತ್ತಿಯಿಂದ ಚರಂಡಿಯ ಹೂಳೆತ್ತಿ ಹಾಗೂ ಗಿಡ ಗಂಟಿಗಳನ್ನು ಸ್ವತಃ ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹಾದು ಹೋಗುವಂತೆ ಶ್ರಮದಾನ ಮಾಡಿದರು.

ಈ ಭಾಗದ ರಸ್ತೆಯ ಜಾರಂದಾಯ ದೈವಸ್ಥಾನದ ದ್ವಾರದ ಬಳಿ ಅವೈಜ್ಞಾನಿಕ ಕಿರು ಮೋರಿ ಕಾಮಗಾರಿಯಿಂದ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಹೊಂಡಮಯವಾಗಿ ಪರಿಸರದಲ್ಲಿ ಕೃತಕ ನೆರೆ ಉಂಟಾಗಿತ್ತು. ಪಂಚಾಯಿತಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗದ ಕಾರಣ ಕಿಲ್ಪಾಡಿ ರಾಘವೇಂದ್ರ ಮಠದ ಗುಡ್ಡೆಯಿಂದ ಬರುವ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ಸ್ಥಳೀಯ ವಾಸಿಗಳಿಗೆ ತೀವ್ರ ತೊಂದರೆಯಾಗಿದೆ. ನಿವೃತ್ತ ಯೋಧರ ಕಾರ್ಯಕ್ಕೆ ಸ್ಥಳೀಯರು ಶ್ಲಾಘಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಜೆಸ್ಟಿಕ್‌ನಲ್ಲಿ ಸಿಂಗಾಪುರ ಮೀರಿಸುವ ಪ್ರಾಜೆಕ್ಟ್‌ ಮೆಜೆಸ್ಟಿಕ್‌
ಬೀಗ ಹಾಕಿದ ಮನೆಗಳಿಗೆ ಕನ್ನಹಾಕುತ್ತಿದ್ದ ಐವರು ಕಳ್ಳರ ಸೆರೆ