ಕನ್ನಡಪ್ರಭ ವಾರ್ತೆ ಚಿತ್ತಾಪುರ
ಪಟ್ಟಣದ ಕಿಂಗ್ ಫ್ಯಾಲೇಸ್ ಫಂಕ್ಷನ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಎಎಸ್‌ಐ ಬಲವಂತರೆಡ್ಡಿ ಸೇವಾ ನಿವೃತ್ತಿ ಸಮಾರಂಭದಲ್ಲಿ ಮಾತನಾಡಿದ ಅವರು, ಇವರು ಸೇವೆ ಸಲ್ಲಿಸುವ ಠಾಣೆಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿ ಸಂಬವಿಸುತ್ತಿರಲಿಲ್ಲ. ಅಪರಾಧ ಪ್ರಕರಣಗಳು ನಡೆದರೂ ಅದನ್ನು ಬೇರು ಮಟ್ಟದಿಂದ ಮಟ್ಟಹಾಕಿ ಹಿರಿಯ ಅಧಿಕಾರಿಗಳಿಂದ ಅನೇಕ ಪ್ರಕರಣಗಳಲ್ಲಿ ಸೈ ಎನಿಸಿಕೊಂಡಿದ್ದರು. ತಮ್ಮ ಸೇವಾವಧಿಯ ಬಹುಪಾಲು ಸೇವೆಯನ್ನು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿಯೇ ಸಲ್ಲಿಸಿರುವ ಅವರು ಇಲ್ಲಿಯ ಜನರ ಅಚ್ಚು ಮೆಚ್ಚಿನ ಪೊಲೀಸ್ ಅಧಿಕಾರಿಯಾಗಿದ್ದರು ಇವರ ಸೇವಾ ನಿವೃತ್ತಿಯಿಂದ ಪೊಲೀಸ್ ಇಲಾಖೆ ಒಬ್ಬ ದಕ್ಷ ಅಧಿಕಾರಿಯನ್ನು ಕಳೆದುಕೊಂಡಾತಾಗಿದೆ ಎಂದರು.
ಚಿತ್ತಾಪುರ ಸಿಪಿಐ ಚಂದ್ರಶೇಖರ ತಿಗಡಿ, ಶಹಬಾದ ಸಿಪಿಐ ನಟರಾಜ ಲಾಡೆ, ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ನ್ಯಾಯವಾದಿ ಚಂದ್ರಶೇಖರ ಅವಂಟಿ, ಮುಖಂಡರಾದ ನಾಗರಾಜ ಬಂಕಲಗಾ, ಮುಕ್ತಾರ ಪಟೇಲ್, ಬಾಬು ಕಾಶಿ ಮಾತನಾಡಿದರು.ಗೃಹ ರಕ್ಷಕ ದಳದ ಮುಖ್ಯಸ್ಥ ಮೆಹಮೂದ ಪುಲಾರೆ, ಮುಖಂಡರಾದ ಶಿವಕಾಂತ ಬೆಣ್ಣೂರಕರ್, ಮಲ್ಲಿಕಾರ್ಜುನ ಕಾಳಗಿ, ನಾಗರಾಜ ಹೂಗಾರ, ಬಾಲಾಜಿ ಬುರಬುರೆ, ವಿನೊದ ಗುತ್ತೆದಾರ, ಸಂಜು ಕೊಟ್ರಕಿ, ಆನಂದ ಪಾಟೀಲ್ ನರಬೊಳಿ ಚಿತ್ತಾಪುರ, ಮಾಡಬೂಳ, ವಾಡಿ, ಕಾಳಗಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಸೇವಾ ನಿವೃತ್ತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.