ಮುನಿರಾಬಾದ್: ತುಂಗಭದ್ರಾ ಮಂಡಳಿಯ ಮುಖ್ಯ ಅಭಿಯಂತರ ಹನುಮಂತಪ್ಪ ದಾಸರ ನಿವೃತ್ತರಾದ ಹಿನ್ನೆಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.
ಕಳೆದ ವರ್ಷ ಅಗಸ್ಟ್ ತಿಂಗಳಲ್ಲಿ ತುಂಗಭದ್ರಾ ಜಲಾಶಯದ ಗೇಟು ಕಿತ್ತುಕೊಂಡು ಹೋದ ಸಂದರ್ಭದಲ್ಲಿ ಮುಖ್ಯ ಅಭಿಯಂತರರಾಗಿ ಅಧಿಕಾರ ವಹಿಸಿಕೊಂಡ ಹನುಮಂತಪ್ಪ ದಾಸರ ಪರಿಸ್ಥಿತಿಯಲ್ಲಿ ಸಮರ್ಥವಾಗಿ ನಿರ್ವಹಿಸಿದರು ಹಾಗೂ ಕಿತ್ತಿಕೊಂಡ ಹೋದ ತುಂಗಭದ್ರಾ ಜಲಾಶಯದ ಗೇಟ್ ನಂ. 19 ಅನ್ನು ಒಂದು ವಾರದಲ್ಲಿ ದುರಸ್ತಿಗೊಳಿಸಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಎರಡು ಬೆಳೆಗೆ ನೀರು ಲಭ್ಯವಾಗುವಂತೆ ಮಾಡಿದರು. ಅವರು ಅಲ್ಪಾವಧಿಯಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿ ರೈತರಿಗಾಗಿ ಉತ್ತಮ ಕೆಲಸ ಮಾಡುವ ಮೂಲಕ ರೈತರ ಮನಸ್ಸನ್ನು ಗೆದ್ದಿದ್ದಾರೆ ಎಂದು ಹೇಳಿದರು.
ರೈತ ಜಾಕಬ್ ದೊಡ್ಡಮನಿ ಮಾತನಾಡಿ, ವಿಜ್ಞಾನ ಇಷ್ಟೊಂದು ಮುಂದುವರಿದಿದೆ, ಅದರೆ ಕೊನೆಯ ಭಾಗದ ರೈತರ ಗದ್ದೆಗಳಿಗೆ ನೀರು ತಲುಪುತ್ತಿಲ್ಲ. ಸರ್ಕಾರ ಭೂಮಿಯಲ್ಲಿ ಸುರಂಗ ಮಾರ್ಗದ ಮೂಲಕ ಕೊನೆಯ ಭಾಗದ ರೆತರಿಗೆ ನೀರನ್ನು ತಲುಪಿಸುವಂತೆ ಮಾಡಬೇಕು ಎಂದು ಸಲಹೆ ನೀಡಿದರು.ಪ್ರಭಾರಿ ಮುಖ್ಯ ಅಭಿಯಂತರ ಬಸವರಾಜ, ಕಾರ್ಯಪಾಲಕ ಅಭಿಯಂತ ಗಿರೀಶ ಮೇಟಿ, ನಿವೃತ್ತ ಅಧೀಕ್ಷಕ ಅಭಿಯಂತರ ಶಿವಶಂಕರ, ಯೋಜನಾ ಶಾಖೆಯ ನೌಕರ ಸಂಘದ ಅಧ್ಯಕ್ಷ ಬಸಪ್ಪ ಜಾನಕರ್, ರಜಿಸ್ಟರ್ ಉಮೇಶ ಸಜ್ಜನರ, ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಒ.ಆರ್.ಕೆ. ರೆಡ್ಡಿ, ರೈತ ಮುಖಂಡ ಶರಣಪ್ಪ ದೊಡ್ಡಮನಿ, ಅಮರೇಶ ಚಾಗಭಾವಿ ಉಪಸ್ಥಿತರಿದ್ದರು.
ಅಚ್ಚುಕಟ್ಟು ಪ್ರದೇಶದ ರೈತರು ನಿವೃತ್ತಿ ಹೊಂದಿದ ಮುಖ್ಯಅಭಿಯಂತರ ಹನುಮಂತಪ್ಪ ದಾಸರ ಅವರನ್ನು ಸನ್ಮಾನಿಸಿದರು.