ಮಳೆಹಾನಿ ಪ್ರದೇಶಗಳಿಗೆ ಡಿಸಿ ಭೇಟಿ ಇಲ್ಲ ಎಂದು ರೇವಣ್ಣ ಅಸಮಾಧಾನ

KannadaprabhaNewsNetwork |  
Published : Oct 29, 2025, 01:00 AM IST
28ಎಚ್ಎಸ್ಎನ್4 :  | Kannada Prabha

ಸಾರಾಂಶ

ಜಿಲ್ಲಾಧಿಕಾರಿ ವಿರುದ್ಧ ಹರಿಹಾಯ್ದ ಶಾಸಕರು ರೈತರ ನೆರವಿಗೆ ಬಾರದಿರುವುದು ಸರಿಯಲ್ಲ ಎಂದರು. ಜಿಲ್ಲಾಧಿಕಾರಿ ಎಲ್ಲ ತಾಲೂಕುಗಳಿಗೂ ಭೇಟಿ ನೀಡಬೇಕು. ತಮ್ಮ ಕಚೇರಿಯಲ್ಲಿ ಬಾಕಿ ಉಳಿಸಿಕೊಂಡಿರುವ ಫೈಲ್‌ಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕು, ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಹಾಸನಾಂಬ ದೇವಿಯ ದರ್ಶನದ ವೇಳೆ ಅತಿಗಣ್ಯರಿಗೆಂದು ಹೊರರಾಜ್ಯದಿಂದ ಕೋಚ್ ಬಸ್‌ಗಳನ್ನು ತರಿಸಲಾಗಿತ್ತು, ನಮ್ಮ ರಾಜ್ಯದಲ್ಲಿ ಬಸ್‌ಗಳು ಇರಲಿಲ್ವಾ ಎಂದು ಪ್ರಶ್ನಿಸಿದ ಅವರು, ಈ ವೇಳೆ ಬಂದ ಹಣದ ಲೆಕ್ಕ ಮಾತ್ರ ಹೇಳಿದ್ದು ಖರ್ಚು ಮಾಡಿದ್ದನ್ನೂ ಸಾರ್ವಜನಿಕರ ಮುಂದಿಡಬೇಕು ಎಂದು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಕಳೆದ ೧೫-೨೦ ದಿನಗಳಿಂದ ಜಿಲ್ಲಾದ್ಯಂತ ಮಳೆ ಸುರಿಯುತ್ತಿದ್ದು, ಇದರಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದರೂ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡದೆ ಜಿಲ್ಲಾ ಕೇಂದ್ರದಲ್ಲಿಯೇ ಠಿಕಾಣಿ ಹೂಡಿದ್ದಾರೆ ಎಂದು ಶಾಸಕ ಎಚ್.ಡಿ. ರೇವಣ್ಣ ದೂರಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ದಂಡಿಗನಹಳ್ಳಿ ಹೋಬಳಿಯ ಪ್ರಗತಿ ಪರಿಶೀಲನೆ ಸಭೆ ವೇಳೆ ಜಿಲ್ಲಾಧಿಕಾರಿ ವಿರುದ್ಧ ಹರಿಹಾಯ್ದ ಶಾಸಕರು ರೈತರ ನೆರವಿಗೆ ಬಾರದಿರುವುದು ಸರಿಯಲ್ಲ ಎಂದರು. ಜಿಲ್ಲಾಧಿಕಾರಿ ಎಲ್ಲ ತಾಲೂಕುಗಳಿಗೂ ಭೇಟಿ ನೀಡಬೇಕು. ತಮ್ಮ ಕಚೇರಿಯಲ್ಲಿ ಬಾಕಿ ಉಳಿಸಿಕೊಂಡಿರುವ ಫೈಲ್‌ಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕು, ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಹಾಸನಾಂಬ ದೇವಿಯ ದರ್ಶನದ ವೇಳೆ ಅತಿಗಣ್ಯರಿಗೆಂದು ಹೊರರಾಜ್ಯದಿಂದ ಕೋಚ್ ಬಸ್‌ಗಳನ್ನು ತರಿಸಲಾಗಿತ್ತು, ನಮ್ಮ ರಾಜ್ಯದಲ್ಲಿ ಬಸ್‌ಗಳು ಇರಲಿಲ್ವಾ ಎಂದು ಪ್ರಶ್ನಿಸಿದ ಅವರು, ಈ ವೇಳೆ ಬಂದ ಹಣದ ಲೆಕ್ಕ ಮಾತ್ರ ಹೇಳಿದ್ದು ಖರ್ಚು ಮಾಡಿದ್ದನ್ನೂ ಸಾರ್ವಜನಿಕರ ಮುಂದಿಡಬೇಕು ಎಂದು ಒತ್ತಾಯಿಸಿದರು.ಕೆಲವು ಅಧಿಕಾರಿಗಳು ನಮ್ಮ ರಾಜಕಾರಣ ಮುಗಿಯಿತು ಎಂದು ಭಾವಿಸಿರಬಹುದು. ಅವರಿಗೆ ಆ ಕಡೆ ಗಮನ ಬೇಡ. ದೊರೆತ ಅವಕಾಶವನ್ನು ಒಳ್ಳೆಯ ಕೆಲಸ ಮಾಡಲು ಬಳಕೆ ಎಂದು ಕಿವಿಮಾತು ಹೇಳಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡರು ಸಮರ್ಥರಿದ್ದಾರೆ. ಅವರು ಜಿಲ್ಲಾಧಿಕಾರಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು. ನಮ್ಮ ಕ್ಷೇತ್ರಕ್ಕೆ ಯಾವಾಗ ಬರುತ್ತಾರೆಂದು ತಿಳಿಸಿದರೆ ಅವರ ಸ್ವಾಗತಕ್ಕೆ ನಾನೇ ನಿಲ್ಲುತ್ತೇನೆ ಎಂದರು.ಕೆಲವು ಇಲಾಖೆಗಳಲ್ಲಿ ಅಧಿಕಾರಿಗಳು ನಮ್ಮನ್ನು ಬಿಟ್ಟು ಕಾರ್ಯಕ್ರಮ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದು ಮುಂದುವರಿದರೆ ಅದರ ಪರಿಣಾಮವನ್ನು ನೀವೇ ಎದುರಿಸಬೇಕಾಗುತ್ತದೆ. ಅಧಿಕಾರಿಗಳು ಕಾನೂನಿಗೆ ಹೊರತಾಗಿ ಏನನ್ನೂ ಮಾಡಬಾರದು. ಯಾರದೇ ಒತ್ತಡಕ್ಕೂ ಮಣಿಯಬಾರದು. ತೊಟ್ಟಿ ಸಾಗುವಳಿ ಚೀಟಿಗಳೇನಾದರೂ ಕಂಡುಬಂದರೆ ಅವುಗಳನ್ನು ಮುಲಾಜಿಲ್ಲದೆ ತಿರಸ್ಕರಿಸಬೇಕು. ಎಲ್ಲ ಇಲಾಖೆಗಳ ಪ್ರಗತಿಯಲ್ಲಿ ದಂಡಿಗನಹಳ್ಳಿ ಹೋಬಳಿ ಮೊದಲ ಸ್ಥಾನದಲ್ಲಿರಬೇಕು ಎಂದರು. ಉದಯಪುರ, ಶಾಂತಿಗ್ರಾಮ, ಮೊಸಳೆಹೊಸಹಳ್ಳಿ ಗ್ರಾಮಗಳ ಆಸ್ಪತ್ರೆಗಳ ಕಟ್ಟಡ ನಿರ್ಮಾಣಕ್ಕೆ ೫.೭೫ ಕೋಟಿ ರು. ನೀಡಲಾಗುವುದು. ಉದಯಪುರ ಆಸ್ಪತ್ರೆಯಲ್ಲಿ ಚುಚ್ಚುಮದ್ದು ನೀಡುವ ಸಿರಿಂಜ್‌ಗಳನ್ನು ಜನರಿಗೆ ಹೊರಗಿನಿಂದ ತರುವಂತೆ ಚೀಟಿ ಬರೆದುಕೊಡುತ್ತಿರುವ ಅಂಗಡಿಯಿಂದಲೇ ದೂರು ಕೇಳಿಬರುತ್ತಿದೆ. ಆಸ್ಪತ್ರೆಗಳಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಸೂಚನಾಫಲಕದಲ್ಲಿ ಸಾರ್ವಜನಿಕರಿಗೆ ತಿಳಿಯುವಂತೆ ಪ್ರಕಟಿಸಬೇಕು ಎಂದರು.ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ತಹಸೀಲ್ದಾರ್ ಜಿ. ಎಸ್.ಶಂಕರಪ್ಪ, ತಾಪಂ ಇಒ ಜಿ.ಆರ್. ಹರೀಶ್, ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!