ವಕ್ಫ್‌ಗೆ ಲಕ್ಷಾಂತರ ಎಕರೆ ದಾನ ಮಾಡಿದವರ ಹೆಸರು ಬಹಿರಂಗಪಡಿಸಿ

KannadaprabhaNewsNetwork |  
Published : Oct 30, 2024, 12:45 AM IST
ಲಕ್ಷಾಂತರ ಎಕರೆ ವಕ್ಫ್‌ಗೆ ದಾನಮಾಡಿದವರ ಹೆಸರು ಬಹಿರಂಗಪಡಿಸಿ: ರಾಘವ್ ಅಣ್ಣಿಗೇರಿ ಸವಾಲು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜಿಲ್ಲೆಯಲ್ಲಿನ 15,000 ಎಕರೆ, ರಾಜ್ಯದ 1,12,000 ಎಕರೆ ಹಾಗೂ ದೇಶದಲ್ಲಿನ 9,46,000 ಎಕರೆ ಜಮೀನನ್ನು ಯಾವ ಮುಸ್ಲಿಮರು ವಕ್ಫ್‌ ಬೋರ್ಡ್‌ಗೆ ದಾನ ನೀಡಿದರು? ಯಾವಾಗ ನೀಡಿದರು? 2009ರಲ್ಲಿ 4,00,000 ಎಕರೆ ಇದ್ದ ವಕ್ಫ್ ಆಸ್ತಿ ಇಂದು 9,46,000 ಎಕರೆ ಹೇಗಾಯಿತು? ಎಂಬುದನ್ನು ಬಹಿರಂಗಪಡಿಸಬೇಕು ಎಂದು ಸ್ವಾಮಿ ವಿವೇಕಾನಂದ ಸೇನೆ ರಾಜ್ಯಾಧ್ಯಕ್ಷ ರಾಘವ ಅಣ್ಣಿಗೇರಿ ಕಾಂಗ್ರೆಸ್‌ಗೆ ಆಗ್ರಹಪಡಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯಲ್ಲಿನ 15,000 ಎಕರೆ, ರಾಜ್ಯದ 1,12,000 ಎಕರೆ ಹಾಗೂ ದೇಶದಲ್ಲಿನ 9,46,000 ಎಕರೆ ಜಮೀನನ್ನು ಯಾವ ಮುಸ್ಲಿಮರು ವಕ್ಫ್‌ ಬೋರ್ಡ್‌ಗೆ ದಾನ ನೀಡಿದರು? ಯಾವಾಗ ನೀಡಿದರು? 2009ರಲ್ಲಿ 4,00,000 ಎಕರೆ ಇದ್ದ ವಕ್ಫ್ ಆಸ್ತಿ ಇಂದು 9,46,000 ಎಕರೆ ಹೇಗಾಯಿತು? ಎಂಬುದನ್ನು ಬಹಿರಂಗಪಡಿಸಬೇಕು ಎಂದು ಸ್ವಾಮಿ ವಿವೇಕಾನಂದ ಸೇನೆ ರಾಜ್ಯಾಧ್ಯಕ್ಷ ರಾಘವ ಅಣ್ಣಿಗೇರಿ ಕಾಂಗ್ರೆಸ್‌ಗೆ ಆಗ್ರಹಪಡಿಸಿದರು.

ಈ ಕುರಿತು ಪ್ರಕಟಣೆ ಹೊರಡಿಸಿದ ಅವರು, 2013ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ದೆಹಲಿಯಲ್ಲಿ ಭಾರತ ಸರ್ಕಾರದ 123 ಪ್ರಮುಖ ಆಸ್ತಿಗಳನ್ನು ವಕ್ಫ್ ಬೋರ್ಡ್‌ಗೆ ಏಕೆ ನೀಡಿತು ಎಂಬುದನ್ನು ದೇಶದ ಜನತೆಯ ಮುಂದೆ ಬಹಿರಂಗಪಡಿಸಿದರೆ, ವಕ್ಫ್ ಬೋರ್ಡ್‌ಗೆ ದಾನ ನೀಡಿದ ಮಹಾ ದಾನಿಗಳನ್ನು ಸ್ವಾಮಿ ವಿವೇಕಾನಂದ ಸೇನೆಯಿಂದ ಸನ್ಮಾನಿಸಲಾಗುವುದು ಎಂದು ಹೇಳಿದರು.

1974, 1977 ಹಾಗೂ 2016ರಲ್ಲಿ ಯಾವ ಆಧಾರದ ಮೇಲೆ ಕಾಂಗ್ರೆಸ್ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿತ್ತು? 57 ಮುಸ್ಲಿಂ ರಾಷ್ಟ್ರಗಳಲ್ಲಿ ಇರದೇ ಇರುವ ವಕ್ಫ್ ಕಾಯ್ದೆ ಭಾರತದಲ್ಲಿ ಏಕೆ? ವಕ್ಫ್ ಹೆಸರಿನಲ್ಲಿ ಇಲ್ಲಿಯವರೆಗೆ ಆದ ಅವ್ಯವಹಾರಗಳು ಹಾಗೂ ಅವ್ಯವಹಾರ ಮಾಡಿದವರ ಹೆಸರುಗಳನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಈ ವಿಷಯಗಳೆಲ್ಲವನ್ನು ದೇಶದ ಜನತೆಗೆ ತಿಳಿಸಬೇಕೆಂದು ಸ್ವಾಮಿ ವಿವೇಕಾನಂದ ಸೇನೆಯಿಂದ ಕಾಂಗ್ರೆಸ್ ಸಚಿವರಿಗೆ ಸವಾಲು ಹಾಕಿದರು. ಕಾಂಗ್ರೆಸ್‌ಗೆ ಮತ ನೀಡಿದ ಕರ್ನಾಟಕ ರಾಜ್ಯದ ಮುಗ್ಧ ರೈತರು ಜನತೆ ಹಾಗೂ ಸಮಸ್ತ ಭಾರತೀಯರು ತಮ್ಮ ಉತ್ತರಕ್ಕಾಗಿ ಕಾಯುತ್ತಿದ್ದಾರೆ. ನೀವು ಉತ್ತರ ನೀಡುವಿರಾ ಎಂದು ಅಣ್ಣಿಗೇರಿ ಪ್ರಶ್ನಿಸಿದ್ದಾರೆ.-----------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿಗಳ ಜತೆಗೆ ಹಲವು ಹೊಸ ಯೋಜನೆಗಳೂ ಉಂಟು
ಕೇರಳ ರೀತಿ ಮನೆಯಲ್ಲೇ ರೋಗಿಗಳಿಗೆ ಆರೈಕೆ