ಬೀರೂರು: ಪುರಸಭಾ ವ್ಯಾಪ್ತಿಯ ಮನೆ, ನೀರಿನ ಕಂದಾಯ ಮತ್ತು ಪುರಸಭೆ ವಾಣಿಜ್ಯ ಮಳಿಗೆಗಳ ಬಾಡಿಗೆ ಮತ್ತು ಉದ್ದಿಮೆ ಪರವಾನಗಿ ಬಾಕಿ ವಸೂಲಾತಿ ಆಂದೋಲನವನ್ನು ಅ.21ರವರೆಗೆ ಹಮ್ಮಿಕೊಳ್ಳಲಾಗಿದ್ದು, ಕಂದಾಯ ಬಾಕಿ ಇರುವ ಖಾತೆದಾರರು ತುರ್ತಾಗಿ ಪಾವತಿಸುವಂತೆ ಪುರಸಭೆ ಪ್ರಕಟಣೆ ಕೋರಿದೆ. ಕಂದಾಯ ವಸೂಲಿಗೆ ಪುರಸಭೆ ಸಿಬ್ಬಂದಿ ಮನೆ ಮತ್ತು ಅಂಗಡಿಗಳ ಬಾಗಿಲಿಗೆ ಬರುತ್ತಿದ್ದು ಸಾರ್ವಜನಿಕರು ಮತ್ತು ಅಂಗಡಿ ಮಾಲೀಕರು ತೆರಿಗೆ ಪಾವತಿಸಿ ಸಹಕರಿಸಬೇಕು. ನೀರಿನ ಕರ ಹೆಚ್ಚು ಬಾಕಿ ಇದ್ದಲ್ಲಿ ನೀರಿನ ಸಂಪರ್ಕ ಕಡಿತಗೊಳಿಸಿ ಮುಂದಿನ ಕ್ರಮ ಕೈಗೊಳ್ಳ ಲಾಗುವುದು ಎಂದು ಪುರಸಭೆ ವ್ಯವಸ್ಥಾಪಕ ಪ್ರಕಾಶ್ ತಿಳಿಸಿದ್ದಾರೆ. ಕಂದಾಯ ವಸೂಲಾತಿ ಆಂದೋಲನದಲ್ಲಿ ಶನಿವಾರ ವಾಣಿಜ್ಯ ಮಳಿಗೆಗಳ ಬಾಕಿ ವಸೂಲಿಗೆ ಅಧಿಕಾರಿ ಗಳು ಮುಂದಾದರು, ಪುರಸಭೆ ಕಂದಾಯ ಅಧಿಕಾರಿ ಶಿಲ್ಪಾ, ಸ್ವರೂಪರಾಣಿ, ಗಿರಿರಾಜ್, ಕರಿಯಪ್ಪ ಸೇರಿದಂತೆ ಸಿಬ್ಬಂದಿ ಇದ್ದರು. 7 ಬೀರೂರು1 ಬೀರೂರಿನಲ್ಲಿ ಶನಿವಾರ ಪುರಸಭೆ ಅಧಿಕಾರಿಗಳು ವಾಣಿಜ್ಯ ಮಳಿಗೆಗಳಿಂದ ಕಂದಾಯ ವಸೂಲಿ ಮಾಡಿದರು.