ಕಂದಾಯ ಇಲಾಖೆ ಸೇವೆಗಳು ರೈತರ ಮನೆ ಬಾಗಿಲಿಗೆ ತಲುಪಬೇಕು: ಶಾಸಕ ದರ್ಶನ್ ಪುಟ್ಟಣ್ಣಯ್ಯ

KannadaprabhaNewsNetwork |  
Published : Jul 24, 2025, 12:59 AM IST
22ಕೆಎಂಎನ್ ಡಿ24 | Kannada Prabha

ಸಾರಾಂಶ

ಕಂದಾಯ ಗ್ರಾಮವಾದ ರಾಗಿಮುದ್ದನಹಳ್ಳಿ ಅರ್ಹ ಫಲಾನುಭವಿಗಳಿಗೆ 567 ಹಕ್ಕು ಪತ್ರ ವಿತರಣೆ ಮಾಡುತ್ತಿರೋದು ವೈಯಕ್ತಿಕವಾಗಿ ಮನಸ್ಸಿಗೆ ನಮ್ಮದಿ ಕೊಟ್ಟಿದೆ. ಕಂದಾಯ ಇಲಾಖೆ ಕೆಲಸ ಕಾರ್ಯಗಳು ಶೀಘ್ರ ಜನರಿಗೆ ತಲುಪಿಸಲು ತಿಂಗಳಿಗೊಮ್ಮೆ ಪ್ರತಿ ಗ್ರಾಮಗಳಲ್ಲಿ ಕಾರ್‍ಯಕ್ರಮ ರೂಪಿಸಿ ಸರ್ಕಾರಿ ಕೆಲಸಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕಂದಾಯ ಇಲಾಖೆ ಸೇವೆಗಳು ಸಮರ್ಪಕವಾಗಿ ರೈತರ ಮನೆ ಬಾಗಿಲಿಗೆ ದೊರೆಯುವಂತಾಗಲು ಪೌತಿ ಖಾತೆ ಆಂದೋಲನ ಹಾಗೂ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ತಾಲೂಕಿನ ರಾಗಿಮುದ್ದನಹಳ್ಳಿಯ ಗುಮ್ಮನಹಳ್ಳಿ ಗ್ರಾಪಂ ಕಚೇರಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಪೌತಿ ಖಾತೆ ಆಂದೋಲನ ಹಾಗೂ ನಿವೇಶನಗಳ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಂದಾಯ ಗ್ರಾಮವಾದ ರಾಗಿಮುದ್ದನಹಳ್ಳಿ ಅರ್ಹ ಫಲಾನುಭವಿಗಳಿಗೆ 567 ಹಕ್ಕು ಪತ್ರ ವಿತರಣೆ ಮಾಡುತ್ತಿರೋದು ವೈಯಕ್ತಿಕವಾಗಿ ಮನಸ್ಸಿಗೆ ನಮ್ಮದಿ ಕೊಟ್ಟಿದೆ. ಕಂದಾಯ ಇಲಾಖೆ ಕೆಲಸ ಕಾರ್ಯಗಳು ಶೀಘ್ರ ಜನರಿಗೆ ತಲುಪಿಸಲು ತಿಂಗಳಿಗೊಮ್ಮೆ ಪ್ರತಿ ಗ್ರಾಮಗಳಲ್ಲಿ ಕಾರ್‍ಯಕ್ರಮ ರೂಪಿಸಿ ಸರ್ಕಾರಿ ಕೆಲಸಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದರು.

ಸರ್ಕಾರಿ ಕಾರ್ಯಕ್ರಮಗಳಿಗೆ ಜನ ಸ್ಪಂದನೆ ಬಹುಮುಖ್ಯ. ಇಲಾಖೆಯ ಅಗತ್ಯ ಕೆಲಸ ಕಾರ್ಯಗಳು ನಿಗದಿತ ಸಮಯಕ್ಕೆ ಆಗಬೇಕಾದರೆ ಸೂಕ್ರ ದಾಖಲೆಗಳನ್ನು ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ತಹಸೀಲ್ದಾರ್ ಸಂತೋಷ್ ಮಾತನಾಡಿ, ಹಲವು ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಬಾಕಿ ಉಳಿದಿರುವ ರೈತರು ಮತ್ತು ಬಡವರ ಕೆಲಸ ಕಾರ್ಯಗಳಿಗೆ ಅದಷ್ಟು ಬೇಗ ಮುಕ್ತಿ ನೀಡುವಂತೆ ಶಾಸಕರು ಸೂಚನೆ ನೀಡಿದ್ದಾರೆ. ತಮ್ಮ ಮನೆ, ಜಮೀನಿನ ಯಾವುದೇ ಕೆಲಸಗಳಿದ್ದರೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಕೋರಿದರು.

ಗ್ರಾಮದ ಹಿರಿಯ ಮುಖಂಡ ಆರ್.ಎ.ನಾಗಣ್ಣ ಮಾತನಾಡಿ, ನಮ್ಮ ಗ್ರಾಮ ಕಂದಾಯ ಕಂದಾಯ ಗ್ರಾಮವಾಗಿ 6 ವರ್ಷಗಳಾಗಿದ್ದರೂ ಯಾವುದೇ ಅಭಿವೃದ್ಧಿ ಕಂಡಿಲ್ಲ. ಸರ್ವೇ ಕೆಲಸ ಪೂರ್ಣಗೊಂಡಿಲ್ಲ. ದಾಖಲೆಗಳಲ್ಲಿ ಗುಮ್ಮನಹಳ್ಳಿ, ರಾಗಿಮುದ್ದನಹಳ್ಳಿ ಗ್ರಾಮಗಳ ಹೆಸರು ಬದಲಾಗುತ್ತಿದೆ. ಇದರಿಂದ ಗೊಂದಲ ಉಂಟಾಗಿದೆ ಎಂದರು.

ಗ್ರಾಮದಲ್ಲಿ ಪಶು ಆಸ್ವತ್ರೆಯಾಗಬೇಕಿದೆ. ಬಸ್‌ ಗಳ ಸಮಸ್ಯೆಗೆ ಶಾಸಕರು ಮುಕ್ತಿಗೊಳಿಸಿದ್ದಾರೆ. ಆದರೆ, ಬಸ್ ನಿಲ್ದಾಣಕ್ಕೆ ಸೌಲಭ್ಯ ಕಲ್ಪಿಸಿಕೊಡಬೇಕು. ಮೊರಾರ್ಜಿ ಶಾಲೆ ರಸ್ತೆ, ಡಿಂಕಾ ರಸ್ತೆ ಅಭಿವೃದ್ಧಿಗೊಳಿಸುವಂತೆ ಎಂದು ಮನವಿ ಮಾಡಿದರು.

ಈ ವೇಳೆ ಗ್ರಾಪಂ ಅಧ್ಯಕ್ಷ ರಘು, ಉಪಾಧ್ಯಕ್ಷೆ ರಾಧ, ಸದಸ್ಯರಾದ ರಾಜೇಗೌಡ, ಸ್ವಾಮಿ, ಮುಖಂಡರಾದ ಶ್ಯಾಮ್,

ರಾ.ಸ.ಹನುಮಂತೇಗೌಡ, ಮಹೇಶ್, ಮಂಜುನಾಥ್, ಪಿಡಿಒರಮೇಶ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!