ಹೊನ್ನಾಳಿ ಪುರಸಭೆ ಬಜೆಟ್‌ ಮಂಡನೆ: ₹15.28 ಕೋಟಿ ಆದಾಯ ನಿರೀಕ್ಷೆ

KannadaprabhaNewsNetwork |  
Published : Mar 15, 2025, 01:02 AM IST
ಹೊನ್ನಾಳಿ ಫೋಟೋ 14ಎಚ್.ಎಲ್.ಐ1. 2025-26 ನೇ ಸಾಲಿನ ಹೊನ್ನಾಳಿ ಪುರಸಭೆಯು 58.70 ಲಕ್ಷ ಮೊತ್ತದ ಉಳಿತಾಯ ಬಜೆಟ್‌ನ್ನು ಪುರಸಭಾಧ್ಯಕ್ಷ ಮೈಲಪ್ಪ ಮಂಡಿಸಿದರು.ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಹೊಸಕೇರಿ ಸುರೇಶ್,ಪುರಸಭಾ ಸದಸ್ಯರುಗಲು, ಪುರಸಭೆ ಮುಖ್ಯಾಧಿಕಾರಿ ಲೀಲಾವತಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.   | Kannada Prabha

ಸಾರಾಂಶ

2025- 2026ನೇ ಸಾಲಿನ ಹೊನ್ನಾಳಿ ಪುರಸಭೆಯಲ್ಲಿ ಅಧ್ಯಕ್ಷ ಮೈಲಪ್ಪ ಅವರು ₹58.70 ಲಕ್ಷ ಮೊತ್ತದ ಉಳಿತಾಯ ಬಜೆಟ್‌ ಹೊನ್ನಾಳಿಯಲ್ಲಿ ಮಂಡಿಸಿದ್ದಾರೆ.

- ₹14.70 ಕೋಟಿ ವೆಚ್ಚ, ₹58.70 ಲಕ್ಷ ಉಳಿತಾಯ ನಿರೀಕ್ಷೆ: ಅಧ್ಯಕ್ಷ ಮೈಲಪ್ಪ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

2025- 2026ನೇ ಸಾಲಿನ ಹೊನ್ನಾಳಿ ಪುರಸಭೆಯಲ್ಲಿ ಅಧ್ಯಕ್ಷ ಮೈಲಪ್ಪ ಅವರು ₹58.70 ಲಕ್ಷ ಮೊತ್ತದ ಉಳಿತಾಯ ಬಜೆಟ್‌ ಮಂಡಿಸಿದರು.

ಪುರಸಭೆ ಸಭಾಂಗಣದಲ್ಲಿ ಶುಕ್ರವಾರ 2025-26ನೇ ಸಾಲಿಗೆ ಎಲ್ಲ ಮೂಲಗಳಿಂದ ಪ್ರಸ್ತುತ ಸಾಲಿನ ಆರಂಭಿಕ ಶಿಲ್ಕು ಸೇರಿ ₹15.28 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದೆ. ₹14.70 ಕೋಟಿ ವೆಚ್ಚ ನಿರೀಕ್ಷಿಸಿದ್ದು, ಒಟ್ಟು ₹58.70 ಲಕ್ಷ ಉಳಿತಾಯ ನಿರೀಕ್ಷೆ ಹೊಂದಲಾಗಿದೆ ಎಂದು ಮೈಲಪ್ಪ ವಿವರಿಸಿದರು.

ಕಟ್ಟಡದ ಆಸ್ತಿ ತೆರಿಗೆ ಮೂಲಕ ₹1 ಕೋಟಿ, ಉದ್ದಿಮೆ ಪರವಾನಿಗೆ ಮೂಲಕ ₹8 ಲಕ್ಷ, ಮಳಿಗೆಗಳ ಬಾಡಿಗೆಯಿಂದ ₹95 ಲಕ್ಷ, ಕಟ್ಟಡ ಪರವಾನಿಗೆಯಿಂದ ₹10 ಲಕ್ಷ, ನಿವೇಶನ ಅಭಿವೃದ್ಧಿ ಶುಲ್ಕದಿಂದ ₹35 ಲಕ್ಷ ಸೇರಿದಂತೆ ವಿವಿಧ ಬಾಬ್ತುಗಳಿಂದ ಒಟ್ಟು ₹15.28 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದೆ.

ರಸ್ತೆ ಚರಂಡಿಗಳ ಕಾಮಗಾರಿಗೆ 15ನೇ ಹಣಕಾಸು ಯೋಜನೆಯಿಂದ ₹1 ಕೋಟಿ, ಎಸ್.ಎಫ್.ಸಿ. ಮುಕ್ತನಿಧಿ ಅನುದಾನದಿಂದ ₹1 ಕೋಟಿ, ಕಚೇರಿ ಗಣಕಯಂತ್ರ ಹಾಗೂ ಇತರೆ ಉಪಕರಣಗಳ ಖರೀದಿಗಾಗಿ ₹15 ಲಕ್ಷ, ಹೈಮಾಸ್ಟ್‌ ವಿದ್ಯುತ್ ದೀಪ, ಸೋಲಾರ್, ಎಲ್‌ಇಡಿ ಮತ್ತು ಬೀದಿದೀಪಗಳ ಖರೀದಿಗಾಗಿ ₹48 ಲಕ್ಷ, ಕಟ್ಟಡ ದುರಸ್ತಿ ಮತ್ತು ನಿರ್ವಹಣೆಗಾಗಿ ₹49 ಲಕ್ಷ ಹಾಗೂ ಹೊರಗುತ್ತಿಗೆ ನೌಕರರ ವೇತನಕ್ಕಾಗಿ ₹50 ಲಕ್ಷ ಸೇರಿದಂತೆ ಒಟ್ಟು ₹14.70 ಲಕ್ಷ ಖರ್ಚು ಮಾಡಲು ಮೀಸಲಿರಿಸಿದೆ ಎಂದರು.

ಹೊನ್ನಾಳಿ ಪಟ್ಟಣ ಹಾಗೂ ಇತ್ತೀಚಿಗೆ ಹೊಸದಾಗಿ ಪುರಸಭೆಗೆ ಸೇರ್ಪಡೆ ಆಗಿರುವ ದೇವನಾಯಕನಹಳ್ಳಿ ಹಾಗೂ ಹಿರೇಮಠ ಗ್ರಾಮಗಳಲ್ಲೂ ಶಾಸಕ ಡಿ.ಜಿ. ಶಾಂತನಗೌಡ ನೇತೃತ್ವದಲ್ಲಿ ಅಭಿವೃದ್ಧಿ ಮಾಡೋಣ. ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.

ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಹೊಸಕೇರಿ ಸುರೇಶ್, ಪುರಸಭಾ ಸದಸ್ಯರಾದ ಎಂ.ಸುರೇಶ್, ಮಾಜಿ ಅಧ್ಯಕ್ಷರಾದ ಕೆ.ವಿ. ಶ್ರೀಧರ್, ಬಾಬು ಹೋಬಳದಾರ್, ರಂಗನಾಥ್, ಸುಮಾ ಮಂಜುನಾಥ್, ಸವಿತಾ ಮಹೇಶ್ ಹುಡೇದ್, ರಂಜಿತಾ ಚನ್ನಪ್ಪ, ಬಾವಿಮನೆ ರಾಜಣ್ಣ, ಧರ್ಮಪ್ಪ, ರಾಜೇಂದ್ರ, ತನ್ವಿರ್, ಪದ್ಮ ಪ್ರಶಾಂತ್, ಉಷಾ ಗಿರೀಶ್, ಅನುಶಂಕರ್, ಸುಮಾ ಸತೀಶ್, ನಾಮಿನಿ ಸದಸ್ಯರಾದ ರೇವಣಸಿದ್ದಪ್ಪ ಮೂಲಿ, ರವಿ, ಮಾದಪ್ಪ, ಚಂದ್ರಪ್ಪ, ಮುಖ್ಯಾಧಿಕಾರಿ ಟಿ.ಲೀಲಾವತಿ, ಎಂಜಿನಿಯರ್ ದೇವರಾಜ್, ಆರೋಗ್ಯ ನಿರೀಕ್ಷಕ ಪರಮೇಶ್‌ ನಾಯ್ಕ್ ಇತರರು ಇದ್ದರು.

- - - -14ಎಚ್.ಎಲ್.ಐ1.ಜೆಪಿಜಿ:

ಹೊನ್ನಾಳಿ ಪುರಸಭೆಯಲ್ಲಿ 2025-26ನೇ ಸಾಲಿಗೆ ಅಧ್ಯಕ್ಷ ಮೈಲಪ್ಪ ₹58.70 ಲಕ್ಷ ಮೊತ್ತದ ಉಳಿತಾಯ ಬಜೆಟ್‌ ಮಂಡಿಸಿದರು. ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಹೊಸಕೇರಿ ಸುರೇಶ್, ಸದಸ್ಯರು, ಮುಖ್ಯಾಧಿಕಾರಿ ಲೀಲಾವತಿ, ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ