ನಗರದ ಸಮೀಪದ ದೇವರಾಯನದುರ್ಗದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ವಿವಿಧ ಮೂಲಗಳಿಂದ 2023-24ನೇ ಸಾಲಿನಲ್ಲಿ ಒಟ್ಟು ₹2,54,57,380 ಆದಾಯ ಸಂದಾಯವಾಗಿದೆ. ಹುಂಡಿಯೊಂದರಿಂದಲೇ ಒಟ್ಟು ₹1,09,79,254 ಸಂಗ್ರಹವಾಗಿದೆ. ಸಾಮಾಜಿಕ ಕಾರ್ಯಕರ್ತ ಆರ್.ವಿಶ್ವನಾಥನ್ ಸಲ್ಲಿಸಿದ್ದ ಮಾಹಿತಿ ಹಕ್ಕು ಕಾಯ್ದೆ ಅರ್ಜಿಗೆ ದೇವಾಲಯದ ಇಒ ನೀಡಿರುವ ಉತ್ತರದಲ್ಲಿ ಈ ಮಾಹಿತಿ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ತುಮಕೂರುನಗರದ ಸಮೀಪದ ದೇವರಾಯನದುರ್ಗದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ವಿವಿಧ ಮೂಲಗಳಿಂದ 2023-24ನೇ ಸಾಲಿನಲ್ಲಿ ಒಟ್ಟು ₹2,54,57,380 ಆದಾಯ ಸಂದಾಯವಾಗಿದೆ. ಹುಂಡಿಯೊಂದರಿಂದಲೇ ಒಟ್ಟು ₹1,09,79,254 ಸಂಗ್ರಹವಾಗಿದೆ. ಸಾಮಾಜಿಕ ಕಾರ್ಯಕರ್ತ ಆರ್.ವಿಶ್ವನಾಥನ್ ಸಲ್ಲಿಸಿದ್ದ ಮಾಹಿತಿ ಹಕ್ಕು ಕಾಯ್ದೆ ಅರ್ಜಿಗೆ ದೇವಾಲಯದ ಇಒ ನೀಡಿರುವ ಉತ್ತರದಲ್ಲಿ ಈ ಮಾಹಿತಿ ನೀಡಲಾಗಿದೆ.
ಹರಿದುಬಂದ ಆದಾಯ: ಈ ದೇವಾಲಯವನ್ನು ಧಾರ್ಮಿಕ ದತ್ತಿ ಇಲಾಖೆಯು ‘ಎ’ ಶ್ರೇಣಿಯ ದೇವಾಲಯವೆಂದು ಗುರುತಿಸಲಾಗಿದೆ. 2023-24ನೇ ಸಾಲಿನಲ್ಲಿ ಒಟ್ಟು 21 ಬಾಬ್ತುಗಳಿಂದ ದೇವಾಲಯಕ್ಕೆ ಹಣ ಸಂದಾಯವಾಗಿದೆ. ಮೇಲಿನ ಬೆಟ್ಟದಲ್ಲಿರುವ ಶ್ರೀ ಯೋಗಾಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿನ ಹುಂಡಿಯಲ್ಲಿ ₹31,30,737,ಶ್ರೀ ಭೋಗಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿನ ಹುಂಡಿಯಲ್ಲಿ ₹78,48,517 ಒಟ್ಟು ₹1,09,79,254 ಸಂಗ್ರಹವಾಗಿದೆ. ಸೇವಾರ್ಥ ಕಾಣಿಕೆ, ಇತರೆ ಸೇವೆ ಮೂಲಕ ₹46,85,851, ಕಾಣಿಕೆ ರೂಪದಲ್ಲಿ ಬಂದ ಒಟ್ಟು ₹21,05,554, ಆನ್‌ಲೈನ್ ಮುಖಾಂತರ ಬಂದ ₹4,82,708, ಶಾಶ್ವತ ಸೇವೆಯಲ್ಲಿ ತೊಡಗಿಸಿದ ಬಡ್ಡಿ ₹16,34,394, ವಿಶೇಷ ದರ್ಶನದಿಂದ ₹3,19,200, ಯಾತ್ರಿ ನಿವಾಸ ಕಟ್ಟಡ ಬಾಡಿಗೆ ₹3,54,500, ಶೇಷವಸ್ತ್ರ ಮಾರಾಟದಿಂದ ₹3,46,780, ಕರಿಗಿರಿ ವಸತಿ ಗೃಹ ಬಾಡಿಗೆ ₹3,20,200, ಮತ್ತೊಂದು ಹುಂಡಿ ₹3,80,189, ಕಲ್ಯಾಣ ಮಂದಿರ ಬಾಡಿಗೆ ₹2,31,450, ಬಡ್ಡಿ ₹1,61,943, ಚಪ್ಪಲಿ ಸ್ಟಾಂಡ್ 1₹,19,000 ಸಂದಾಯವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.ದೇವಾಲಯದ ಆದಾಯ 2015ರಿಂದ ಏರುತ್ತಾ ಹೋಗಿದೆ. 2015-16ರಲ್ಲಿ ₹1.41 ಕೋಟಿ, 2016-17ರಲ್ಲಿ ₹1.46 ಕೋಟಿ, 2017-18ರಲ್ಲಿ ₹1.54 ಕೋಟಿ, 2018-19ರಲ್ಲಿ ₹1.40 ಕೋಟಿ, 2019-20ರಲ್ಲಿ ₹1.52 ಕೋಟಿ, 2020-21ರಲ್ಲಿ ₹1,47 ಕೋಟಿ, 2021-22ರಲ್ಲಿ ₹1.68 ಕೋಟಿ, 2022-23ರಲ್ಲಿ ₹2.41 ಕೋಟಿ, 2023-24ರಲ್ಲಿ ₹2.54 ಕೋಟಿ ಸಂಗ್ರಹವಾಗಿದೆ. 7 ದಾನಿಗಳಿಂದ ಬೆಳ್ಳಿ, ಚಿನ್ನದ ಆಭರಣ ಸ್ವೀಕರಿಸಲಾಗಿದೆ.2023-24ನೇ ಸಾಲಿನಲ್ಲಿ ಆದ ವೆಚ್ಚ: ₹10 ಲಕ್ಷ, ನೌಕರರ ವೇತನಕ್ಕೆ ₹96 ಲಕ್ಷ, ಜಾತ್ರಾ ಬೋನಸ್ ಆಗಿ ₹6 ಲಕ್ಷ, ರಥೋತ್ಸವಕ್ಕೆ ₹4,90,000, ದೇವಾಲಯದ ಹುಂಡಿ ಎಣಿಕೆಯ ವಿಡಿಯೋ ಚಿತ್ರೀಕರಣಕ್ಕೆ ₹47 ಸಾವಿರ, ಘನತ್ಯಾಜ್ಯ ನಿರ್ವಹಣೆ ಘಟಕವನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನಗೊಳಿಸುವ ಕಾಮಗಾರಿಗೆ 13 ಲಕ್ಷ 56 ಸಾವಿರ ರು., ದೇವಾಲಯದ ನೌಕರರಿಗೆ ಸೇವಾಂತ್ಯ ಮತ್ತು ನಿವೃತ್ತಿ ಸೌಲಭ್ಯಗಳಿಗಾಗಿ 70 ಸಾವಿರ ರು., ದೇವಾಲಯದ ನೌಕರರ ಭವಿಷ್ಯನಿಧಿ ಸೌಲಭ್ಯಕ್ಕೆ 11 ಲಕ್ಷ 90 ಸಾವಿರ ರು., ಆಹಾರ ಮತ್ತು ಸ್ವಚ್ಛತಾ ಸಾಮಗ್ರಿ ಖರೀದಿಗೆ 8 ಲಕ್ಷ 65 ಸಾವಿರ ರು., ಗ್ಯಾಸ್ ಸಿಲಿಂಡರ್ ಖರೀದಿಗೆ 3 ಲಕ್ಷ 14 ಸಾವಿರ ರು., ಅಡಿಗೆ ತಯಾರಿಸಿ ಬಡಿಸುವವರ ಗುತ್ತಿಗೆ ಮೊತ್ತ 8 ಲಕ್ಷ 25 ಸಾವಿರ ರು.,ಅನ್ನ ಸಂತರ್ಪಣೆಯ ಮಜ್ಜಿಗೆ ತಯಾರಿಕೆಗಾಗಿ ಹಾಲು,ಮೊಸರು 2 ಲಕ್ಷ 29 ಸಾವಿರ ರು., ಊಟದ ಎಲೆಗೆ 4 ಲಕ್ಷ 76 ಸಾವಿರ ರು.,ವಿದ್ಯುತ್ ಬಿಲ್ 7 ಲಕ್ಷ 30 ಸಾವಿರ ರು., ದಿನಸಿ 8 ಲಕ್ಷ 34 ಸಾವಿರ ರು. ವೆಚ್ಚವಾಗಿದೆ.
29 ಮಂದಿ ಸಿಬ್ಬಂದಿ: ಅರ್ಚಕರಿಂದ ಹಿಡಿದು ವಿವಿಧ ಕರ್ತವ್ಯ ನಿರ್ವಹಿಸಲು 29 ಸಿಬ್ಬಂದಿ ಇದ್ದಾರೆ. ಇವರಿಗೆ ನಿಯಮ (೮) ರಂತೆ ವೇತನ ಶ್ರೇಣಿ ನೀಡಲಾಗುತ್ತಿದೆ ಎಂದು ಇಒ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.