ತಾಪಂ ಸಭಾಂಗಣದಲ್ಲಿ ನಡೆದ ವಿಎ,ಆರ್‌ಐ, ಪಿಡಿಒಗಳ ಪ್ರಗತಿ ಪರಿಶೀಲನಾ ಸಭೆಕನ್ನಡಪ್ರಭ ವಾರ್ತೆ ಕಡೂರು
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ವಿಎ,ಆರ್‌ಐ, ಪಿಡಿಒಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ ದರು. ಈಗಾಗಲೇ ಕ್ಷೇತ್ರದಲ್ಲಿ 14 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಇ-ಸ್ವತ್ತು ನೀಡಬೇಕಿದ್ದು ವಿಎ,ಆರ್‌ಐ ಮತ್ತು ಪಿಡಿಒಗಳು ಕಂದಾಯ, ಉಪ ಗ್ರಾಮ ಹಾಗೂ ನೂತನ ಬಡಾವಣೆಗಳಲ್ಲಿ ಯಾರಿಗೆ ಇ-ಸ್ವತ್ತು ನೀಡಿಲ್ಲ ಎಂಬುದನ್ನು ಗುರುತಿಸಿ ಅವರಿಂದ ದಾಖಲೆ ಪಡೆದು ಇ ಸ್ವತ್ತು ನೀಡಲು ಮುಂದಾಗಬೇಕು. ಆದರೆ ಅಧಿಕಾರಿಗಳು ಸಮರ್ಪಕ ಕಾರ್ಯ ನಿರ್ವಹಿಸದೆ ಇದ್ದರೆ ನಮ್ಮ ಸರ್ಕಾರದ ಯೋಜನೆಗೆ ಧಕ್ಕೆ ಬರುತ್ತದೆ ಎಂದು ಎಚ್ಚರಿಸಿದರು.ನಾಗಗೊಂಡನಹಳ್ಳಿಯಲ್ಲಿ 150 ಜನರಿಗೆ ಇ-ಸ್ವತ್ತು ನೀಡಿಲ್ಲ. ಸಂಭಂಧಿಸಿದ ವಿಎ ಸಭೆಗೂ ಬಂದಿಲ್ಲ. ಅವರಿಗೆ ನೋಟೀಸ್ ನೀಡುವಂತೆ ತಹಸೀಲ್ದಾರ್ ಗೆ ಸೂಚಿಸಿದರು. ಬೀರನಹಳ್ಳಿ ಕಂದಾಯ ಗ್ರಾಮವಾಗಿದ್ದರೂ ಈವರೆಗೂ ಒಂದು ಮನೆಗೂ ಇ-ಸ್ವತ್ತು ನೀಡಿಲ್ಲ. ದಾಸರಹಟ್ಟಿ, ಗುಡ್ಡದ ಹಟ್ಟಿಗಳಲ್ಲಿ ಗುರುತಿಸುವ ಕೆಲಸ ಮಾಡಲಾಗಿದೆ ಅಷ್ಟೆ ಎಂದರು.ಅಧಿಕಾರಿಗಳ ಸಮರ್ಪಕ ಅಂಕಿ ಅಂಶ ನೀಡದ ಹಿನ್ನೆಲೆಯಲ್ಲಿ ಫೆ. 27 ರಂದು ಮತ್ತೊಮ್ಮೆ ಪರಿಶೀಲನಾ ಸಭೆ ನಡೆಸ ಲಾಗುವುದು. ಅಂದಿನ ಸಭೆಗೆ ಅಂಕಿ ಅಂಶಗಳ ಸಮೇತ ಹಾಜರಾಗಬೇಕು. ಗೈರು ಹಾಜರಾಗುವವರ ವಿರುದ್ಧ ಕಾನೂನು ಕ್ರಮಕ್ಕೆ ತಹಸೀಲ್ದಾರ್ ನೋಟೀಸ್ ನೀಡಬೇಕು ಎಂದು ಸೂಚಿಸಿದರು.ಫೆ.14 ರಂದು ಹಾವೇರಿಯಲ್ಲಿ ಮುಖ್ಯಮಂತ್ರಿಗಳಿಂದ ಹಕ್ಕುಪತ್ರ ವಿತರಣೆ ನಡೆಯಲಿದೆ. ಆ ಕಾರ್ಯಕ್ರಮಕ್ಕೆ ಫಲಾನುಭವಿ ಗಳನ್ನು ಕರೆದುಕೊಂಡು ಹೋಗುವ ಬಗ್ಗೆ ಸಭೆಯಲ್ಲಿ ಶಾಸಕರು, ತರೀಕೆರೆ ಉಪವಿಭಾಗಾಧಿಕಾರಿ ನಟೇಶ್ ಮತ್ತು ತಹಸೀ ಲ್ದಾರ್ ಸಿ.ಎಸ್.ಪೂರ್ಣಿಮಾ ರೊಂದಿಗೆ ಚರ್ಚಿಸಿದರು. 94 ಡಿ ಅಡಿ 1200 ಹಕ್ಕುಪತ್ರ ಸಿದ್ದವಾಗಿದ್ದು, ನೂತನ ಇ-ಸ್ವತ್ತು ತಂತ್ರಾಂಶ-2 ರ ತಾಂತ್ರಿಕ ದೋಷದಿಂದ ಹಕ್ಕುಪತ್ರ ನೀಡಲು ವಿಳಂಭವಾಗಿದೆ. ಹಾಗಾಗಿ ತಂತ್ರಾಂಶ ಸರಿಪಡಿಸಲಾಗುತ್ತಿದ್ದು, ಶೀಘ್ರ ಹಕ್ಕುಪತ್ರ ಸಮಸ್ಯೆ ಬಗೆಹರಿಯಲಿದೆ. ಪೌತಿಖಾತೆ 6966 ಜಂಟಿ ಖಾತೆಗಳಿವೆ. ಅದರಲ್ಲಿ3080 ಪೌತಿಖಾತೆಗಳನ್ನು ಗುರುತಿಸಿ ದುರಸ್ಥಿಯಿಂದ ಜಿಲ್ಲಾ ಮಟ್ಟದ ಮಿಸ್ಸಿಂಗ್ ಫೈಲ್ ಸಮಿತಿಯಿಂದ ಸಭೆ ಕರೆದ ನಂತರ ದುರಸ್ಥಿಗೆ ವೇಗ ಸಿಗಲಿದೆ ಈಗಾಗಲೇ 2500 ಹಕ್ಕು ಪತ್ರಗಳು ಸಿದ್ಧವಾಗಿದ್ದು, ಹಾವೇರಿ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ವಿತರಣೆ ಮಾಡಲಿದ್ದಾರೆ ಎಂದು ತಿಳಿಸಿದರು.ತರೀಕೆರೆ ಉಪ ವಿಭಾಗಾಧಿಕಾರಿ ನಟೇಶ್ ಮಾತನಾಡಿ ಸಮಾವೇಶಕ್ಕಾಗಿ ಕಡೂರು ತಾಲೂಕಿಗೆ 50 ಬಸ್ಸುಗಳನ್ನು ನೀಡಿದ್ದು ಸುಮಾರು 2500 ಹಕ್ಕುಪತ್ರ ಪಡೆಯುವ ಫಲಾನುಭವಿಗಳನ್ನು ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ. ಅಂದು ಬೆಳಗ್ಗೆ7 ಗಂಟೆಗೆ ಸರಿಯಾಗಿ ಬಸ್ಸಿನಲ್ಲಿ ಕರೆದುಕೊಂಡು ಹಾವೇರಿಗೆ ತೆರಳಿ ನಂತರ ಅವರ ಗ್ರಾಮಗಳಿಗೆ ಬಿಡುವ ಸಿದ್ಧತೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ,ತಾಪಂಕಾರ್ಯನಿರ್ವಹಣಾಧಿಕಾರಿ ಸಿ.ಆರ್. ಪ್ರವೀಣ್ ಇದ್ದರು.
10ಕೆಕೆಡಿಯು1.ಕಡೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಕೆ.ಎಸ್.ಆನಂದ್ ಅಧ್ಯಕ್ಷತೆಯಲ್ಲಿ ಕಂದಾಯ,ಆರ್‌ಡಿಪಿಆರ್ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.