ಹೂವಿನಹಡಗಲಿ: ಸರ್ಕಾರ ಈಗಾಗಲೇ ತಾಂಡಾ, ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಗುರಿ ನಿಗಧಿ ಮಾಡಿತ್ತು. ಅದರಂತೆ ಹೂವಿನಹಡಗಲಿ ತಾಲೂಕಿನಲ್ಲಿ 57 ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಿಲ್ಲಿ 38 ಕಂದಾಯ ಗ್ರಾಮಗಳ ಅಧಿಸೂಚನೆ ಹೊಡಿಸಲಾಗಿತ್ತು. ಇದರಲ್ಲಿ 28 ಕಂದಾಯ ಗ್ರಾಮಗಳನ್ನಾಗಿ ಮಾಡುವ ಪ್ರಕ್ರಿಯೆ ಬಾಕಿ ಇದೆ. ಇವುಗಳನ್ನು ಫೆಬ್ರವರಿ ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅಧಿಕಾರಿಗಳಿಗೆ ಸೂಚಿಸಿದರು.
ರೈತರ ಪಹಣಿಗಳಿಗೆ ಆಧಾರ್ ಲಿಂಕ್ ಮಾಡಲಾಗುತ್ತಿದೆ. ಈ ತಾಲೂಕಿನಲ್ಲಿ 1,09,939 ಖಾತೆದಾರರಿದ್ದಾರೆ. ಇದರಲ್ಲಿ ಶೇ. 79ರಷ್ಟು ಅಂದರೆ 62315 ಲಿಂಕ್ ಆಗಿವೆ. ಶೇ. 90ರಷ್ಟು ಸಾಧನೆ ಮಾಡಬೇಕು ಎಂದು ಸೂಚಿಸಿದರು.
ಇ-ಪೋತಿ ಆಂದೋಲನದಲ್ಲಿ 18,724 ಮರಣ ಹೊಂದಿರುವ ಖಾತೆದಾರರಿದ್ದಾರೆ. ಇದರಲ್ಲಿ 2491 ಪ್ರಕರಣಗಳು ಪೂರ್ಣಗೊಂಡಿವೆ. ಉಳಿದಂತೆ 15 ಸಾವಿರ ಖಾತೆದಾರರ ಇ-ಪೋತಿ ಆಂದೋಲನದಡಿ ಪ್ರತಿ ತಿಂಗಳು ₹2800 ಖಾತೆದಾರರ ಇ-ಪೋತಿ ಪೂರ್ಣಗೊಳಿಸಬೇಕು ಎಂದು ಗುರಿ ನಿಗದಿ ಮಾಡಿದರು.ತಾಲೂಕಿನಲ್ಲಿ 8806 ಸರ್ಕಾರಿ ಭೂಮಿಯ ಸರ್ವೆ ನಂಬರ್‌ಗಳಿವೆ, ಈ ಭೂಮಿ ಒತ್ತುವರಿ ತೆರವುಗೊಳಿಸುವ ವಿಚಾರವಾಗಿ ಲ್ಯಾಂಡ್ ಬೀಟ್ ಮೂಲಕ 7282 ಸರ್ವೆ ನಂಬರ್‌ಗಳ ಭೂಮಿಯ ಗಡಿ ಗುರುತು ಮಾಡಿದ್ದೀರಿ. ಇನ್ನು 804 ಸರ್ವೇ ನಂಬರ್ ಗಡಿ ಗುರುತು ಮಾಡುವುದು ಬಾಕಿ ಇದೆ. ಇದನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಅಭಿಲೇಖಾಲಯದಲ್ಲಿರುವ ಹಳೆ ಕಂದಾಯ ದಾಖಲೆಗಳಲ್ಲಿ ಪ್ರತಿದಿನ 7 ಸಾವಿರ ದಾಖಲೆಗಳನ್ನು ಗಣಕೀಕೃತ ಮಾಡಲಾಗುತ್ತಿದೆ. ಆದರೆ ಪ್ರತಿನಿತ್ಯ 12 ಸಾವಿರ ದಾಖಲೆಗಳನ್ನು ಗಣಕೀಕೃತಗೊಳಿಸಬೇಕು. ರೈತರಿಗೆ ಹಳೆ ದಾಖಲೆ ನೀಡುವಾಗ ಡಿಜಿಟಲ್ ಸಹಿ ಹೊಂದಿರುವ ದಾಖಲೆಗಳನ್ನು ನೀಡಬೇಕು ಎಂದು ಹೇಳಿದರು.ತಹಸೀಲ್ದಾರ್ ನ್ಯಾಯಾಲಯದಲ್ಲಿ 81 ಕೇಸ್‌ಗಳಿವೆ. ಇವುಗಳನ್ನು 90 ದಿನದೊಳಗೆ ಪೂರ್ಣಗೊಳಿಸಬೇಕು. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಹಾನಿಯಾಗಿರುವ ಮನೆಗಳಿಗೆ ಹಾಗೂ ಪ್ರಾಣ ಹಾನಿಕ್ಕೆ ಪರಿಹಾರ ನೀಡಲು ತಹಸೀಲ್ದಾರ್ ಖಾಲೆಯಲ್ಲಿ ₹38 ಲಕ್ಷ ಇಡಲಾಗಿದೆ. ಜತೆಗೆ ಇಲ್ಲಿನ ಭೂಮಾಪನ ಇಲಾಖೆಯಲ್ಲಿ ಸಾಕಷ್ಟು ತೊಂದರೆಗಳನ್ನು ರೈತರು ಅನುಭವಿಸುತ್ತಿದ್ದಾರೆ. ಕೂಡಲೇ ಬೇರೆ ತಾಲೂಕಿನಲ್ಲಿ ಕೆಲಸ ಮಾಡುತ್ತಿರುವ ಸರ್ವೇಯರ್‌ನ್ನು ನಿಯೋಜನೆ ಮಾಡಿ ರೈತರ ಸಮಸ್ಯೆಗಳನ್ನು ಬೇಗನೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಮಟ್ಟದ ಭೂಮಾಪಲ ಅಧಿಕಾರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ವಿಜಯನಗರ ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಪ್ಪ, ಉಪ ವಿಭಾಗಾಧಿಕಾರಿ ಪಿ. ವಿವೇಕಾನಂದ, ತಹಸೀಲ್ದಾರ್ ಸಂತೋಷಕುಮಾರ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು, ಭೂಮಾಪನ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.